Electric Cooker: ಕರೆಂಟ್ ಕುಕ್ಕರ್​ನಲ್ಲಿ ಅಕ್ಕಿ ಬೇಯಿಸುತ್ತಿದ್ದೀರಾ? ನಿಮ್ಮೆಲ್ಲರನ್ನು ಎಚ್ಚರಿಸುವ ಆಘಾತಕಾರಿ ವಿಷಯವೊಂದು ಬಯಲಾಗಿದೆ

ಎಲೆಕ್ಟ್ರಿಕ್ ವಸ್ತುಗಳನ್ನು ಅಡುಗೆ ತಯಾರಿಯಲ್ಲಿಯೂ ಬಳಸುತ್ತಿರುವುದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Electric Cooker: ಕರೆಂಟ್ ಕುಕ್ಕರ್​ನಲ್ಲಿ ಅಕ್ಕಿ ಬೇಯಿಸುತ್ತಿದ್ದೀರಾ? ನಿಮ್ಮೆಲ್ಲರನ್ನು ಎಚ್ಚರಿಸುವ ಆಘಾತಕಾರಿ ವಿಷಯವೊಂದು ಬಯಲಾಗಿದೆ
ಕರೆಂಟ್​​ ಕುಕ್ಕರ್​
Follow us
TV9 Web
| Updated By: shruti hegde

Updated on:Aug 03, 2021 | 2:58 PM

ಇತ್ತೀಚೆಗೆ ಎಲ್ಲವೂ ವಿದ್ಯುತ್ ಬಳಕೆಯಿಂದಲೇ ಆಗುತ್ತಿದೆ. ಅಂದರೆ, ಬೆಳಿಗ್ಗೆ ಎದ್ದಾಕ್ಷಣ ಸ್ನಾನಕ್ಕೆ ವಿದ್ಯುತ್ ಬಳಸಿ ಬಿಸಿ ನೀರು, ಕುಡಿಯುವ ಬಿಸಿ ನೀರು ತಯಾರಿಸಲೂ ವಿದ್ಯುತ್, ಅಡುಗೆ ಮಾಡಲು ವಿದ್ಯುತ್ ಹೀಗೆ ಎಲ್ಲಾ ಚಟುವಟಿಕೆಯೂ ವಿದ್ಯುತ್ ಸಂಪರ್ಕದಿಂದ ನಡೆಯುತ್ತಿದೆ. ಈಗಿನ ದಿನಮಾನದ ಜನರಿಗೆ ಸಮಯವೇ ಇರುವುದಿಲ್ಲ. ಆದಷ್ಟು ಬೇಗ ಕೆಲಸವಾಗಬೇಕಷ್ಟೇ! ವಿದ್ಯುತ್ (Current) ಉಪಯೋಗದಿಂದ ಬಹುಬೇಗ ಅಡುಗೆ ತಯಾರಿಸಬಹುದು ಆದರೆ ಅದು ಆರೋಗ್ಯ ಸಮಸ್ಯೆಗಳನ್ನು (Health Problems) ತಂದೊಡ್ಡುತ್ತದೆ ಎಂಬ ಆಘಾತಕಾರಿ ವಿಷಯವೊಂದು ಬಯಲಾಗಿದೆ.

ಮೊದಲೆಲ್ಲಾ ಕಟ್ಟಿಗೆಯಿಂದ ಬೆಂಕಿ ಒಟ್ಟಿ ಬೆಳಿಗ್ಗೆಯ ದೋಸೆ ತಯಾರಾಗುತ್ತಿತ್ತು. ತಿನ್ನಲು ಎಷ್ಟು ರುಚಿ ಅಂತೀರಾ? ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಆದರೆ ಇತ್ತೀಚೆಗೆ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಬಳಸುತ್ತಿರುವ ಎಲೆಕ್ಟ್ರಿಕ್ ವಸ್ತುಗಳನ್ನು ಅಡುಗೆ ತಯಾರಿಯಲ್ಲಿಯೂ ಬಳಸುತ್ತಿರುವುದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಬೇಗ ಅನ್ನ ತಯಾರಾಗಬೇಕು ಎಂದು ಎಲೆಕ್ಟ್ರಿಕ್ ಕುಕ್ಕರ್ ಅಥವಾ ಕರೆಂಟ್​ ಕುಕ್ಕರ್​ ಮೂಲಕ ಅಕ್ಕಿ ಬೇಯಿಸಿ ಬಿಡುತ್ತೇವೆ. ಆದರೆ ಇದರ ಮೂಲಕ ಅಕ್ಕಿ ಬೇಯಿಸುವುದು ವಿಷಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಯೂಮಿನಿಯಂ ಪಾತ್ರೆಯ ಮೂಲಕ ವಿದ್ಯುತ್ ಬಳಸಿ ಅಡುಗೆ ತಯಾರಿಸುವುದು ಸೂಕ್ತವಲ್ಲ. ಆಹಾರ ತಯಾರಿಕೆಯಲ್ಲಿ ಗಾಳಿ ಮತ್ತು ಬೆಳಕು ಇರಬೇಕು. ಇಲ್ಲದಿದ್ದರೆ ಆಹಾರ ಹಾನಿಕರವಾಗಿರುತ್ತದೆ. ತಿಂದಾಕ್ಷಣ ಪರಿಣಾಮ ಗೊತ್ತಾಗದಿದ್ದರೂ ದಿನ ಕಳೆಯುತ್ತಿದ್ದಂತೆಯೇ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಆರೋಗ್ಯ ಅಪಾಯಗಳು ಹೊಟ್ಟೆಯ ಸಮಸ್ಯೆಗಳು ಹೃದಯ ಸಂಬಂಧಿತ ಸಮಸ್ಯೆಗಳು ಸಂಧಿವಾತ ಮಧುಮೇಹ ವಾಯು ಸಮಸ್ಯೆ ಅಧಿಕ ತೂಕ ಎಲುಬುಗಳು ದುರ್ಬಲಗೊಳ್ಳುವುದು

ಈ ರೀತಿಯ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಕರೆಂಟ್ ಕುಕ್ಕರ್ನಲ್ಲಿ ಅಡುಗೆ ತಯಾರಿಸುವುದು ಅಥವಾ ಪ್ರೆಶರ್ ಕುಕ್ಕರ್​ನಲ್ಲಿ ಅಡುಗೆ ತಯಾರಿಸುವುದನ್ನು ಆದಷ್ಟು ತಪ್ಪಿಸಿ. ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ.

ಇದನ್ನೂ ಓದಿ:

Viral Video: ಕುಕ್ಕರ್​ ಬಳಸಿ ಸ್ಟೀಮ್​ ತೆಗೆದುಕೊಳ್ಳುತ್ತಿರುವ ವ್ಯಕ್ತಿ ನೋಡಿ ಆದ್ರೇ ನೀವೂ ಹೀಗೆಲ್ಲ ಮಾಡಬೇಡಿ!

Published On - 2:48 pm, Tue, 3 August 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!