ಮಧುಮೇಹ ನಿಯಂತ್ರಣಕ್ಕೆ ಪಾಲಿಸಬಹುದಾದ ಸಲಹೆಗಳು

Diabetes Control: ಮಧುಮೇಹ ಸಮಸ್ಯೆಯಿಂದ ನಿಯಂತ್ರಣ ಹೊಂದಲು ನಿಮಗೆ ವೈದ್ಯರು ನೀಡಿದ ಔಷಧಿಗಳನ್ನು ಸರಿಯಾಗಿ ಸೇವಿಸಿ. ಜತೆಗೆ ನಿಮ್ಮ ಆಹಾರ ಕ್ರಮ ಸರಿಯಾಗಿರಲಿ. ವೈದ್ಯರು ನೀಡಿದ ಸಲಹೆಗಳಿಗೆ ನಿರ್ಲಕ್ಷ್ಯ ತೋರದೆ ಸರಿಯಾಗಿ ಪಾಲಿಸಿ.

ಮಧುಮೇಹ ನಿಯಂತ್ರಣಕ್ಕೆ ಪಾಲಿಸಬಹುದಾದ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jun 27, 2021 | 12:54 PM

ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಕ್ರಮ ಹೇಗಿರಬೇಕು ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಾಗಿ ತಿಳಿಯೋಣ. ಮಧುಮೇಹ ಸಮಸ್ಯೆಯಿಂದ ಅದೆಷ್ಟೋ ಜನ ನರಳುತ್ತಿರಬಹುದು. ನಿಮ್ಮ ಆಹಾರ ಕ್ರಮ ಸರಿಯಾಗಿದ್ದರೆ ಮಾತ್ರ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ.

ನಿಯಮಿತವಾಗಿ ಆಹಾರವನ್ನು ಸೇವಿಸಿ. ಜತೆಗೆ ಸರಿಯಾದ ಸಮಯಕ್ಕೆ ನಿಮ್ಮ ಆಹಾರ ವ್ಯವಸ್ಥೆ ಇರಬೇಕು. ಹೆಚ್ಚು ಹೊತ್ತು ಹಸಿವನ್ನು ಕಟ್ಟಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸಮಸ್ಯೆಯನ್ನುಂಟು ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಏಕದಳ ಉತ್ಪನ್ನ, ನೂಡಲ್ಸ್​, ಬಿಳಿ ಅಕ್ಕಿ, ಬ್ರೆಡ್​ ಇತ್ಯಾದಿಗಳಿಂದ ದೂರವಿರಿ. ದೇಹದಲ್ಲಿ ರಕ್ತದ ಮಟ್ಟವನ್ನು ನಿಯಂತ್ರಿಸಲು ವ್ಯಾಯಾಮ ಅಭ್ಯಾಸ ರೂಢಿಯಲ್ಲಿರಲಿ.

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಮಧುಮೇಹ ಉತ್ತಮವಾದ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ರಸ್ತೆಯ ಬದಿಯಲ್ಲಿ ಸೇವಿಸುವ ಚಾಟ್ಸ್​ ಫುಡ್​ಗಳಿಂದ ದೂರವಿಡಿ. ಜಂಕ್​ಫುಡ್​ಗಳ ಸೇವನೆಯಿಂದ ದೂರವಿರಿ. ಏಕೆಂದರೆ ಇದು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸುತ್ತದೆ.

ಮಧುಮೇಹ ಸಮಸ್ಯೆಯಿಂದ ನಿಯಂತ್ರಣ ಹೊಂದಲು ನಿಮಗೆ ವೈದ್ಯರು ನೀಡಿದ ಔಷಧಿಗಳನ್ನು ಸರಿಯಾಗಿ ಸೇವಿಸಿ. ಜತೆಗೆ ನಿಮ್ಮ ಆಹಾರ ಕ್ರಮ ಸರಿಯಾಗಿರಲಿ. ವೈದ್ಯರು ನೀಡಿದ ಸಲಹೆಗಳಿಗೆ ನಿರ್ಲಕ್ಷ್ಯ ತೋರದೆ ಸರಿಯಾಗಿ ಪಾಲಿಸಿ.

ಮಧುಮೇಹ ನಿಮ್ಮ ಆರೋಗ್ಯದಲ್ಲಿ ಬೊಜ್ಜು, ಕೊಲೆಸ್ಟ್ರಾಲ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹ್ರದ್ರೋಗದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗುವುದು ಮುಖ್ಯ. ನಿಮ್ಮ ಆರೋಗ್ಯದ ಕುರಿತಾಗಿ ಯಾವುದೇ ನಿರ್ಲಕ್ಷ್ಯ ಬೇಡ. ಅದರಲ್ಲಿಯೂ ಮುಖ್ಯವಾಗಿ ಕೊರೊನಾ ವೈರಸ್​ ಸಾಂಕ್ರಾಮಿಕ ಕಾಯಿಲೆಯ ಸಮಯದಲ್ಲಿ ನಿಮ್ಮ ಆರೋಗ್ಯದ ಕುರಿತಾಗಿ ನೀವು ಎಷ್ಟು ಕಾಳಜಿವಹಿಸಿದರೂ ಸಾಲದು.

ಇದನ್ನೂ ಓದಿ:

’Jamun Health Benefits: ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸಿ

ಮಧುಮೇಹ, ಕ್ಯಾನ್ಸರ್​ ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಬ್ಲ್ಯಾಕ್​ ಫಂಗಸ್​ ಸೋಂಕಿನ ಕುರಿತು ಎಚ್ಚರಿಕೆಯಿಂದಿರಿ