AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ದೇಹದಲ್ಲಿರುವ ಮಚ್ಚೆಗಳನ್ನು ಎಂದಾದರೂ ಎಣಿಸಿದ್ದೀರಾ? ಇದು ಕ್ಯಾನ್ಸರ್ ಗೆ ಕಾರಣವಾಗುತ್ತಾ? ಇಲ್ಲಿದೆ ಉತ್ತರ

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ: ನಾವು ಸಾಮಾನ್ಯವಾಗಿ ನಮ್ಮ ಚರ್ಮದ ಮೇಲಿನ ನಸುಕಂದು ಮಚ್ಚೆಗಳು, ಒರಟು ಕಲೆಗಳು ಮತ್ತು ಹುಣ್ಣುಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಿದರೆ, ನಿಜವಾಗಿಯೂ ನಿರ್ಲಕ್ಷ್ಯ ಮಾಡಬಾರದು. ಚರ್ಮದಲ್ಲಿ ಯಾವುದೇ ರೀತಿಯ ಲಕ್ಷಣ ಕಂಡುಬಂದರೂ ಕೂಡ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ವೈದ್ಯರ ಸಲಹೆ ಪಡೆಯಬೇಕು. ಆಗ ಮಾತ್ರ ಇಂತಹ ದೊಡ್ಡ ದೊಡ್ಡ ಕಾಯಿಲೆಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಹಾಗಾದರೆ ಮಚ್ಚೆಗಳು ಯಾವ ರೀತಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ, ಬಹುತೇಕ ಮಚ್ಚೆಗಳು ಅಪಾಯಕಾರಿಯಲ್ಲದಿದ್ದರೂ ಕೂಡ ಯಾವ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮ್ಮ ದೇಹದಲ್ಲಿರುವ ಮಚ್ಚೆಗಳನ್ನು ಎಂದಾದರೂ ಎಣಿಸಿದ್ದೀರಾ? ಇದು ಕ್ಯಾನ್ಸರ್ ಗೆ ಕಾರಣವಾಗುತ್ತಾ? ಇಲ್ಲಿದೆ ಉತ್ತರ
Freckles And Skin Cancer
ಪ್ರೀತಿ ಭಟ್​, ಗುಣವಂತೆ
|

Updated on: Nov 07, 2025 | 10:45 AM

Share

ಒಂದು ಸಮಯದಲ್ಲಿ ಮಚ್ಚೆಗಳು, ಗಲ್ಲ ಅಥವಾ ತುಟಿಗಳ ಮೇಲಿದ್ದರೆ ಅದೇ ಫ್ಯಾಷನ್ ಆಗಿತ್ತು. ಈ ರೀತಿ ಹುಟ್ಟುತ್ತಾ, ಅಥವಾ ಬಾಲ್ಯದಲ್ಲಿ ದೇಹದ ವಿವಿಧ ಭಾಗಗಳಲ್ಲಿ ಮಚ್ಚೆಗಳು ಕಂಡು ಬರುವುದು ಬಹಳ ಸಾಮಾನ್ಯ. ಅದರಲ್ಲಿಯೂ ಕಾಲಾನಂತರದಲ್ಲಿ ಗಾತ್ರ ಮತ್ತು ಆಕಾರದಲ್ಲಿ ಇದು ಬದಲಾಗಬಹುದು. ಇನ್ನು ಇವು ನಿರುಪದ್ರವವಾಗಿದ್ದರೂ, ಕೆಲವೊಂದು ಮಚ್ಚೆಗಳು ಚರ್ಮದ ಕ್ಯಾನ್ಸರ್ ಗೆ (Skin Cancer) ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಜನರು ದೇಹದ ಬೇರೆಲ್ಲಾ ಭಾಗವನ್ನು ವಿಶೇಷವಾಗಿ ಗಮನಹರಿಸಿದರೂ ಕೂಡ ಚರ್ಮದ ಬಗ್ಗೆ ಅದರಲ್ಲಿಯೂ ಮಚ್ಚೆಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಚರ್ಮ ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಪ್ರತಿಯೊಂದು ಕ್ಯಾನ್ಸರ್ ಗಳ ಬಗ್ಗೆ ತಿಳಿಸುವುದಕ್ಕಾಗಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಣೆ ಮಾಡಲಾಗುತ್ತದೆ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿದಿನವೂ ಇವುಗಳ ಕುರಿತ ಮಾಹಿತಿ ಜನರಿಗೆ ತಲುಪುವಂತಾಗಬೇಕು. ಅದರಲ್ಲಿಯೂ ಚರ್ಮದ ಕ್ಯಾನ್ಸರ್ ಕುರಿತು ಅರಿವಿನ ಕಾರ್ಯ ಹೆಚ್ಚೆಚ್ಚು ನಡೆಯುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿಯೇ, ಮಚ್ಚೆಗಳು ಯಾವ ರೀತಿ ಕ್ಯಾನ್ಸರ್ ಕಾರಣವಾಗುತ್ತದೆ, ಬಹುತೇಕ ಮಚ್ಚೆಗಳು ಅಪಾಯಕಾರಿಯಲ್ಲದಿದ್ದರೂ ಕೂಡ ಯಾವ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಂಡ್ರೊಮಿಡಾ ಕ್ಯಾನ್ಸರ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಅಧ್ಯಕ್ಷ ಡಾ. ಅರುಣ್ ಕುಮಾರ್ ಗೋಯೆಲ್ ತಿಳಿಸಿರುವ ಮಾಹಿತಿ ಪ್ರಕಾರ, ನಿರುಪದ್ರವ ಚುಕ್ಕೆ ಅಥವಾ ಒರಟಾದ ತೇಪೆಯಂತೆ ಕಾಣುವ ಮಚ್ಚೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಸಾಮಾನ್ಯ ಕೋಶಗಳು ಬದಲಾದಾಗ, ಆಗಾಗ ಅವುಗಳ ಡಿಎನ್‌ಎಗೆ ಹಾನಿಯಾಗುವ ಮೂಲಕ ಮತ್ತು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಚರ್ಮದ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಎಲ್ಲರ ದೇಹದಲ್ಲಿಯೂ 10ರಿಂದ 45 ಮಚ್ಚೆಗಳು ಇರುತ್ತವೆ. ವಿಶೇಷವಾಗಿ ಹದಿಹರೆಯದವರಲ್ಲಿ ಮತ್ತು ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಅವು ಗಾಢವಾಗುತ್ತವೆ ಮತ್ತು ದೊಡ್ಡದಾಗುತ್ತವೆ.

ಮಚ್ಚೆಯ ಬಗ್ಗೆ ಯಾವಾಗ ಆತಂಕ ಪಡಬೇಕು?

ಸಾಮಾನ್ಯವಾಗಿ, ದೇಹದಲ್ಲಿರುವ ಮಚ್ಚೆಯ ಗಾತ್ರ, ಆಕಾರ, ಬಣ್ಣದಲ್ಲಿ ಬದಲಾದರೆ ಅಥವಾ ಅದರಲ್ಲಿ ತುರಿಕೆ, ರಕ್ತಸ್ರಾವ ಅಥವಾ ಉರಿಯೂತ ಕಂಡುಬಂದರೆ ನಿರ್ಲಕ್ಷ್ಯ ಮಾಡದೆಯೇ ವೈದ್ಯರ ಬಳಿ ಹೋಗಬೇಕು. ಮಾತ್ರವಲ್ಲ 6 ಮಿಮೀಗಿಂತ ಹೆಚ್ಚು ದೊಡ್ಡದಾದರೂ ಕೂಡ ವೈದ್ಯರ ಸಲಹೆ ಪಡೆಯಬೇಕು. ಇನ್ನು, ಯಾರ ದೇಹದಲ್ಲಿ 50ಕ್ಕಿಂತ ಹೆಚ್ಚು ಮಚ್ಚೆಗಳು ಇದ್ದಲ್ಲಿ ಇದು ಆರಂಭಿಕ ಮೆಲನೋಮಕ್ಕೆ ಅಪಾಯಕಾರಿ ಅಂಶವಾಗಿರಬಹುದು.

ಡಾ. ಗೋಯೆಲ್ ಚರ್ಮದ ಕ್ಯಾನ್ಸರ್ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದ್ದು, ಈ ರೀತಿಯ ಲಕ್ಷಣ ಕಂಡು ಬಂದಾಗ ನಿರ್ಲಕ್ಷ್ಯ ಮಾಡಬಾರದು ಎಂದಿದ್ದಾರೆ.

ಬೇಸಲ್ ಸೆಲ್ ಕಾರ್ಸಿನೋಮ (BCC): ಅತ್ಯಂತ ಸಾಮಾನ್ಯ ವಿಧ, ಉಬ್ಬು ಅಥವಾ ಗುಲಾಬಿ ಬಣ್ಣದ ತೇಪೆಯಾಗಿ ಕಾಣಿಸಿಕೊಳ್ಳುತ್ತದೆ.

ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC): ಸಾಮಾನ್ಯವಾಗಿ ಕೆಂಪಾಗಿ ಉಬ್ಬಿದ ಹಾಗೆ ಅಥವಾ ಸಣ್ಣ ಹುಣ್ಣುಗಳ ರೀತಿ ಆಗುವುದು.

ಮೆಲನೋಮ: ಕಂಡುಬರುವುದು ಬಹಳ ಕಡಿಮೆ ಆದರೆ ಹೆಚ್ಚು ಅಪಾಯಕಾರಿ. ಇದು ಮೋಲ್ ನ ರೀತಿಯಲ್ಲಿ ಪ್ರಾರಂಭವಾಗುತ್ತದೆ.

ಈ ಕ್ಯಾನ್ಸರ್‌ಗಳಲ್ಲಿ ಹಲವು ಕ್ಯಾನ್ಸರ್‌ಗಳನ್ನು ಮೊದಲೇ ಪತ್ತೆಹಚ್ಚಿದರೆ ಸುಲಭವಾಗಿ ಚಿಕಿತ್ಸೆ ನೀಡಬಹುದಾದರೂ, ವಿಳಂಬ ಮಾಡಿದಷ್ಟು ಚಿಕಿತ್ಸೆ ಕಷ್ಟವಾಗುತ್ತದೆ. ಅದರಲ್ಲಿಯೂ ಮೆಲನೋಮ ಒಮ್ಮೆ ಹರಡಿದರೆ ಬಹಳ ಅಪಾಯಕಾರಿಯಾಗಬಹುದು.

ಇದನ್ನೂ ಓದಿ: ವೃದ್ಧಾಪ್ಯದಲ್ಲಿ ಚರ್ಮ ತೆಳ್ಳಗಾಗಲು ಕಾರಣವೇನು? ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ಈ ರೀತಿಯ ಅಪಾಯವನ್ನು ತಡೆಯಲು ಇಲ್ಲಿದೆ ಸಲಹೆ;

  • ಯುವಿ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಆದಷ್ಟು ನೆರಳಿನಲ್ಲಿರಿ. ಉದ್ದ ತೋಳುಗಳಿರುವ ಬಟ್ಟೆ, ಯುವಿ ವಿಕಿರಣಗಳನ್ನು ತಡೆಯುವ ಸನ್ಗ್ಲಾಸ್ ಧರಿಸಿ.
  • ಪ್ರತಿದಿನ ಸನ್‌ಸ್ಕ್ರೀನ್ ಬಳಸಿ. SPF 30 ಅಥವಾ ಹೆಚ್ಚಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಪ್ರತಿ ಎರಡು ಗಂಟೆಗಳಿಗೊಮ್ಮೆ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.
  • ನಿಮ್ಮ ಚರ್ಮವನ್ನು ನಿಯಮಿತವಾಗಿ ಪರಿಶೀಲಿಸಿ. ನಿಮ್ಮ ನೆತ್ತಿ, ಬೆನ್ನು ಮತ್ತು ಕಾಲ್ಬೆರಳುಗಳ ನಡುವಿನ ಜಾಗಗಳ ಬಗ್ಗೆ ಗಮನವಿರಲಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ