Walnuts: ನೆನೆಸಿದ ವಾಲ್ನಟ್ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಬಹುದೇ? ನೀವು ತಿಳಿಯಬೇಕಾದ ಮಾಹಿತಿ

ಆರೋಗ್ಯಕರ ವಾಲ್ನಟ್ ಬೀಜಗಳು ಆರೋಗ್ಯಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಸಹಾಯಕ. ವಾಲ್ನಟ್ ನಿಮ್ಮ ಮೆದುಳಿನ ಆರೋಗ್ಯದ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ಹಾಗಿರುವಾಗ ವಾಲ್ನಟ್​ಅನ್ನು ನೆನೆಸಿಟ್ಟು ಬಳಿಕ ಸೇವಿಸುವ ಮೂಲಕ ಆರೋಗ್ಯಕ್ಕೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ. ಆರೋಗ್ಯ ತಜ್ಞರ ಪ್ರಕಾರ ಗಟ್ಟಿಯಾದ ಆಹಾರಕ್ಕಿಂತ ಮೃದುವಾದ ಆಹಾರ ಜೀರ್ಣ ವ್ಯವಸ್ಥೆಗೆ ಸಹಾಯಕಾರಿ. ಹಾಗಾಗಿ ಗಟ್ಟಿಯಾದ ವಾಲ್ನಟ್ ಬೀಜಗಳ ಸೇವನೆಗಿಂತ ನೀರಿನಲ್ಲಿ ನೆನೆಸಿಟ್ಟ ವಾಲ್ನಟ್​ಅನ್ನು ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳು ಹೆಚ್ಚಿರುತ್ತವೆ. […]

Walnuts: ನೆನೆಸಿದ ವಾಲ್ನಟ್ ಸೇವಿಸುವುದರಿಂದ ಮಧುಮೇಹ ನಿಯಂತ್ರಿಸಬಹುದೇ? ನೀವು ತಿಳಿಯಬೇಕಾದ ಮಾಹಿತಿ
ಸಂಗ್ರಹ ಚಿತ್ರ
Follow us
| Updated By: shruti hegde

Updated on: Oct 14, 2021 | 8:01 AM

ಆರೋಗ್ಯಕರ ವಾಲ್ನಟ್ ಬೀಜಗಳು ಆರೋಗ್ಯಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಸಹಾಯಕ. ವಾಲ್ನಟ್ ನಿಮ್ಮ ಮೆದುಳಿನ ಆರೋಗ್ಯದ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ಹಾಗಿರುವಾಗ ವಾಲ್ನಟ್​ಅನ್ನು ನೆನೆಸಿಟ್ಟು ಬಳಿಕ ಸೇವಿಸುವ ಮೂಲಕ ಆರೋಗ್ಯಕ್ಕೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಆರೋಗ್ಯ ತಜ್ಞರ ಪ್ರಕಾರ ಗಟ್ಟಿಯಾದ ಆಹಾರಕ್ಕಿಂತ ಮೃದುವಾದ ಆಹಾರ ಜೀರ್ಣ ವ್ಯವಸ್ಥೆಗೆ ಸಹಾಯಕಾರಿ. ಹಾಗಾಗಿ ಗಟ್ಟಿಯಾದ ವಾಲ್ನಟ್ ಬೀಜಗಳ ಸೇವನೆಗಿಂತ ನೀರಿನಲ್ಲಿ ನೆನೆಸಿಟ್ಟ ವಾಲ್ನಟ್​ಅನ್ನು ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳು ಹೆಚ್ಚಿರುತ್ತವೆ. ಜತೆಗೆ ಇದು ಜೀರ್ಣ ಕ್ರಿಯೆಗೆ ಸಹಾಯಕಾರಿ.

ಟೈಪ್2 ಡಯಾಬಿಟಿಸ್ ಸಸ್ಯೆ ನಿಯಂತ್ರಣಕ್ಕೆ ನೆನೆಸಿದ ವಾಲ್ನಟ್ ಒಳ್ಳೆಯದು. ವಾಲ್ನಟ್ ಬೀಜಗಳಲ್ಲಿ ಒಳ್ಳೆಯ ಫೈಬರ್ ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಶಕ್ತಿಯಿದೆ. ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಮತ್ತು ದೇಹದಲ್ಲಿ ರಕ್ತದೊತ್ತಡ ನಿಯಂತ್ರಕ್ಕೆ ಇದು ತುಂಬಾ ಸಹಾಯಕವಾಗಿದೆ. ಹಾಗಾಗಿ ನೆನೆಸಿಟ್ಟ ವಾಲ್ನಟ್​ಅನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಒಮೆಗಾ 3 ವಾಲ್ನಟ್​ನಲ್ಲಿ ಕಂಡು ಬರುತ್ತದೆ. ಇದು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜತೆಗೆ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ವಾಲ್ನಟ್​ನಲ್ಲಿ ನೈಸರ್ಗಿಕ ಎಣ್ಣೆಯ ಅಂಶವಿದ್ದು, ಇದು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮ. ಜತೆಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವ ಮತ್ತು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುಣಹೊಂದಿರುವ ವಾಲ್ನಟ್​ ಸೇವನೆಯನ್ನು ರೂಢಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ:

Health Tips: ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ; ನಿರ್ಲಕ್ಷ್ಯ ವಹಿಸದಿರುವುದು ಒಳಿತು

Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ