Digestive Issues: ನಿಮಗೆ ಅಜೀರ್ಣ ಸಮಸ್ಯೆ ಉಂಟಾ? ಆಹಾರವನ್ನು ಹೀಗೆ ಸೇವಿಸಬಾರದು
ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದಕ್ಕೆ ಅಜೀರ್ಣ ಎಂದು ಹೇಳಲಾಗುತ್ತದೆ. ಈ ಅಜೀರ್ಣ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ.
ಇತ್ತೀಚೆಗೆ ಹಲವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆಹಾರ. ತಿನ್ನುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಅಜೀರ್ಣ (Indigestion) ಸಮಸ್ಯೆ ಕಾಡುತ್ತೆ. ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದಕ್ಕೆ ಅಜೀರ್ಣ ಎಂದು ಹೇಳಲಾಗುತ್ತದೆ. ಈ ಅಜೀರ್ಣ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಆಹಾರವನ್ನು ಸೇವಿಸುವ ಮೊದಲು ಕೆಲ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.
* ಹಣ್ಣು ಮತ್ತು ತರಕಾರಿಗಳನ್ನು ತೊಳೆಯದೆ ತಿನ್ನುವುದು ಬಹುತೇಕ ಜನರು ಅದರಲ್ಲೂ ಮಕ್ಕಳು ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವ ಮೊದಲು ತೊಳೆಯಲ್ಲ. ಇದು ಒಳ್ಳೆಯ ಅಭ್ಯಾಸವಲ್ಲ. ಹಣ್ಣುಗಳು ಮತ್ತು ತರಕಾರಿಗಳು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು. ಹಣ್ಣು ಮತ್ತು ತರಕಾರಿಗಳ ಮೇಲೆ ಕೀಟನಾಶಕಗಳು ಮತ್ತು ರಸಗೊಬ್ಬರ ಇರುತ್ತದೆ. ತೊಳೆಯದೆ ಹಾಗೇ ಸೇವಿಸಿದಾಗ ಅಜೀರ್ಣವಾಗುತ್ತದೆ.
* ಕಡಿಮೆ ಬೇಯಿಸಿದ ಮಾಂಸ ಸೇವಿಸುವುದು ಮಾಂಸ ಪ್ರಿಯರಿಗೆ ಅಜೀರ್ಣವಾಗಲು ಮುಖ್ಯ ಕಾರಣ, ಮಾಂಸವನ್ನು ಸರಿಯಾಗಿ ಬೇಯಿಸದೇ ಇರುವುದು. ಕೋಳಿ, ಕುರಿ ಅಥವಾ ಹಂದಿ ಮಾಂಸ ಸೇರಿದಂತೆ ಇತರೆ ಮಾಂಸವನ್ನು ತಿನ್ನುವಾಗ ಚೆನ್ನಾಗಿ ಬೆಂದಿರಬೇಕು. ಇಲ್ಲದಿದ್ದರೆ ಆರೋಗ್ಯ ಏರುಪೇರಾಗುತ್ತದೆ.
* ಹಸಿ ಹಾಲು ಕುಡಿಯುವುದು ಕೆಲವರಿಗೆ ಹಸಿ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಹಸಿ ಹಾಲನ್ನು ಕುಡಿಯುವುದರಿಂದ ಅಜೀರ್ಣವಾಗುತ್ತದೆ. ಹಾಗಾಗಿ ಹಾಲನ್ನು ಕುಡಿಯುವ ಮೊದಲು ಚೆನ್ನಾಗಿ ಕುದಿಸಬೇಕು. ಜೊತೆಗೆ ನೀರನ್ನು ಫಿಲ್ಟರ್ ಮಾಡಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು.
* ಅಧಿಕ ಉಪ್ಪು ಮತ್ತು ಸಕ್ಕರೆ ಸೇವನೆ ಕೆಲವರಿಗೆ ಕಾಫಿ ಅಥವಾ ಟೀ ಕುಡಿಯುವಾಗ ಸಕ್ಕರೆ ಪ್ರಮಾಣ ಹೆಚ್ಚಾಗಿರಬೇಕು. ಹಾಗೇ, ಇನ್ನು ಕೆಲವರಿಗೆ ಊಟದಲ್ಲಿ ಅಥವಾ ಇತರೆ ಆಹಾರದಲ್ಲಿ ಉಪ್ಪು ಹೆಚ್ಚಾಗಿರಬೇಕು. ಇದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಹೆಚ್ಚು ಸಕ್ಕರೆ ಮತ್ತು ಉಪ್ಪು ತಿನ್ನುವುದನ್ನು ಮಿತಗೊಳಿಸಬೇಕು.
* ಚಹಾ ಮತ್ತು ಕಾಫಿ ದಿನಕ್ಕೆ 5 ರಿಂದ 6 ಬಾರಿ ಕಾಫಿ ಅಥವಾ ಚಹಾ ಕುಡಿಯುವವರು ಇದ್ದಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಪ್ರಮಾಣದ ಕೆಫೀನ್ ಆರೋಗ್ಯಕ್ಕೆ ಕೆಟ್ಟದು. ಇದು ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಕಾರಣವಾಗಬಹುದು.
* ಮಸಾಲೆ ಆಹಾರ ಮಸಾಲೆಗಳು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಮಸಾಲೆ ಹೆಚ್ಚಾದರೆ ಅಜೀರ್ಣವಾಗುತ್ತದೆ. ಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಗ್ಯಾಸ್, ಅಜೀರ್ಣ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ
Health Tips: ಬಿಳಿ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ?
Sleeping Tips: ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಈ ಅಭ್ಯಾಸಗಳನ್ನು ಅನುಸರಿಸಿ
(Some methods must be followed to eliminate the problem of indigestion)