Spinach Benefits: ಪಾಲಕ್ ಸೊಪ್ಪಿನಲ್ಲಿ ಅಡಗಿವೆ ಅದ್ಭುತ ಆರೋಗ್ಯ ಪ್ರಯೋಜನಗಳು; ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2022 | 7:00 AM

ಪಾಲಕ್ ಸೊಪ್ಪು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾಲಕ್ ಸೊಪ್ಪಿನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. 

Spinach Benefits: ಪಾಲಕ್ ಸೊಪ್ಪಿನಲ್ಲಿ ಅಡಗಿವೆ ಅದ್ಭುತ ಆರೋಗ್ಯ ಪ್ರಯೋಜನಗಳು; ಇಲ್ಲಿದೆ ಮಾಹಿತಿ
ಪಾಲಕ್ ಸೊಪ್ಪು
Follow us on

ನಾವು ಸೇವಿಸುವ ಸೊಪ್ಪುಗಳಲ್ಲಿ ಹಲವಾರಿವೆ. ಅವುಗಳಲ್ಲಿ ಪಾಲಕ್ ಸೊಪ್ಪು (Spinach) ಕೂಡ ಒಂದು. ಆದರೆ, ಪಾಲಕ್ ಸೊಪ್ಪನ್ನು ತುಂಬಾ ಜನರು ಇಷ್ಟಪಡುವುದಿಲ್ಲ. ಹಾಗಾಗಿ ಯಾವಾಗಲೂ ಈ ಪಾಲಕ್ ಸೊಪ್ಪನ್ನು ಪಕ್ಕಕ್ಕೆ ತಳ್ಳುತ್ತಾರೆ. ಆದರೆ ಪಾಲಕ್ ಸೊಪ್ಪಿನಲ್ಲಿ ಅಡಗಿರುವ ಆರೋಗ್ಯಕಾರಿ ಲಾಭಗಳು ತಿಳಿದರೆ ನೀವು ಐಶ್ಚರ್ಯ ಪಡುತ್ತೀರಾ. ಅದು ನಿಜಕ್ಕೂ ಚಿನ್ನ ಎಂದು ಹೇಳಬಹುದು. ಪಾಲಕ್ ಸೊಪ್ಪು ಪೋಷಕಾಂಶಗಳ ತವರೂರು ಎನ್ನುತ್ತಾರೆ ಆರೋಗ್ಯ ತಜ್ಞರು. ಪಾಲಕ್ ಸೊಪ್ಪು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾಲಕ್ ಸೊಪ್ಪಿನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಇದನ್ನೂ ಓದಿ; In Pics: ನೀವು ಮಧುಮೇಹ ಹೊಂದಿದ್ದರೆ ಮಾಡಲೇ ಬೇಕಾದ 5 ಕೆಲಸಗಳಿವು

ದೇಹಕ್ಕೆ ಪಾಲಕ್ ಸೊಪ್ಪು ತುಂಬಾ ಒಳ್ಳೆಯದಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪಾಲಕ್ ದಿವ್ಯ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ ತಜ್ಞರು. ದೇಹದಲ್ಲಿ ರಕ್ತ ಕಡಿಮೆ ಇರುವವರು ಪಾಲಕ್ ಸೊಪ್ಪನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಶೀಘ್ರವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ. ಅಧಿಕ ರಕ್ತದೊತ್ತಡ ಇರುವವರಿಗೆ ಪಾಲಕ್ ರಾಮಬಾಣದಂತೆ ಕೆಲಸ ಮಾಡುತ್ತದೆ. ಅಧಿಕ ರಕ್ತದೊತ್ತಡ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಪಾಲಕ್ ಸೊಪ್ಪನ್ನು ಸೇರಿಸಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ಪಾಲಕ್ ಸೊಪ್ಪನ್ನು ಜ್ಯೂಸ್ ಮಾಡಿ ಕುಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್​ನ್ನು ಕರಗಿಸ ಸಹಕರಿಸುತ್ತದೆ. ಇದು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ನಿಯಾಸಿನ್ ಮತ್ತು ಸೆಲೆನಿಯಮ್ ಸಮೃದ್ಧವಾಗಿದೆ. ಇವು ನರಗಳ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ತುಂಬಾ ಸಹಕಾರಿ. ಅಧಿಕ ತೂಕ ಹೊಂದಿರುವವರಿಗೆ ಪಾಲಕ್ ಉತ್ತಮ ಆಹಾರವಾಗಿದೆ. ಏಕೆಂದರೆ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ದೈನಂದಿನ ಆಹಾರದಲ್ಲಿ ಪಾಲಕ್​ನ್ನು ಸೇವಿಸಬಹುದು.

ಇದನ್ನೂ ಓದಿ: Acupuncture Therapy: ಆಕ್ಯುಪಂಕ್ಚರ್​ ಥೆರಪಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ: ಅಧ್ಯಯನ

ಮೂತ್ರದಲ್ಲಿ ಉರಿಯೂತ ಮತ್ತು ಸೋಂಕಿನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ನಿಯಮಿತವಾಗಿ ಪಾಲಕವನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ. ಪಾಲಕ್ ಸೊಪ್ಪು ಮೂತ್ರದ ಸಮಸ್ಯೆಗಳನ್ನು ನಿವಾರಿಸುತ್ತದೆ. ಪೈಲ್ಸ್, ಕೀಲು ನೋವು, ಮಂಡಿ ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಪಾಲಕ್ ಸೊಪ್ಪನ್ನು ತಿಂದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಬೇಸಿಗೆಯಲ್ಲಿ ತಪ್ಪದೇ ಪಾಲಕ್ ಸೊಪ್ಪನ್ನು ಸೇವಿಸುವಂತೆ ಆರೋಗ್ಯ ತಜ್ಞರು ಹಾಗೂ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಪಾಲಕ್ ಹೊಟ್ಟೆಯಲ್ಲಿನ ಶಾಖವನ್ನು ಕಡಿಮೆ ಮಾಡುತ್ತದೆ.