ಒಣಕೊಬ್ಬರಿ ಮಹತ್ವ ಏನು? ಉಪ್ಪಿನ ದೋಷ ನಿವಾರಣೆ ಹೇಗೆ?
ಶ್ರೀ ಮಹಾಗಣಪತಿಯ ಹೋಮಕ್ಕೆ, ಕೊಬ್ಬರಿ ಸಕ್ಕರೆಯಿಂದ ಮಾಡಿದ ಕಡುಬು ಮಾಡಿಸಿ ಹೋಮಕ್ಕೆ ಕೊಟ್ಟರೆ, ನಿಮ್ಮ ಋಣಬಾಧೆಗಳು ಕಡಿಮೆಯಾಗಿ ಸಕಲ ಕಾರ್ಯಗಳು, ಇಷ್ಟಾರ್ಥಗಳು ನೆರವೇರುತ್ತವೆ.
ಒಣಕೊಬ್ಬರಿಗೆ (dry coconut) ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ. ಒಣಕೊಬ್ಬರಿ ದಾನ ಮಾಡಿದರೆ ಮನೆಯಲ್ಲಿ ನಿತ್ಯ ದಾರಿದ್ರ್ಯ ಕಡಿಮೆಯಾಗುತ್ತದೆ. ಒಣಕೊಬ್ಬರಿಯನ್ನು (copra) ತಾಂಬೂಲದಲ್ಲಿ ಇಟ್ಟು, ಕೆಂಪು ಅಥವ ಬಿಳಿ ಕಲ್ಲುಸಕ್ಕರೆ ಸಮೇತ ಗುರುಗಳಿಗೆ ಸಮರ್ಪಿಸಿದರೆ, ನಿಂತು ಹೋಗಿರುವ ನಿಮ್ಮ ಕಾರ್ಯಗಳು ಬಹಳ ಬೇಗ ಪೂರ್ತಿಯಾಗುತ್ತವೆ. ಕಡಲೆಪೊಪ್ಪು ಅಥವಾ ಕಡಲೆ ಹಿಟ್ಟಿನ ಜೊತೆಯಲ್ಲಿ ತುರಿದ ಒಣಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ (spiritual). ಅದನ್ನು ಯಾವುದೇ ದಂಪತಿಗೆ ದಾನ ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ, ಕಡಿಮೆಯಾಗುತ್ತದೆ (Health).
ಒಣಕೊಬ್ಬರಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರ ಮಾಡಿ, ಎಲ್ಲರಿಗೂ ಹಂಚಿದರೆ ಮಂಗಳ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಈ ಕಾರಣಕ್ಕೆ ಲಗ್ನಪತ್ರಿಕೆ ಹಾಗೂ ವರಪೂಜೆಯ ಸಮಯದಲ್ಲಿ, ಶುಭಕಾರ್ಯದಲ್ಲಿ, ಕೊಬ್ಬರಿ- ಸಕ್ಕರೆ ಹಂಚುತ್ತೇವೆ.
ಶ್ರೀ ಮಹಾಗಣಪತಿಯ ಹೋಮಕ್ಕೆ, ಕೊಬ್ಬರಿ ಸಕ್ಕರೆಯಿಂದ ಮಾಡಿದ ಕಡುಬು ಮಾಡಿಸಿ ಹೋಮಕ್ಕೆ ಕೊಟ್ಟರೆ, ನಿಮ್ಮ ಋಣಬಾಧೆಗಳು ಕಡಿಮೆಯಾಗಿ ಸಕಲ ಕಾರ್ಯಗಳು, ಇಷ್ಟಾರ್ಥಗಳು ನೆರವೇರುತ್ತವೆ. ಸಾಲದ ಭಾದೆ ನಿವಾರಣೆಯಾಗುತ್ತದೆ.
ಕೊಬ್ಬರಿ ಒಬ್ಬಟ್ಟನ್ನು ಮಾಡಿಸಿ, ಮನೆದೇವರಿಗೆ, ಸ್ರೀ ದೇವತೆಗಳ ದೇವಸ್ಥಾನಗಳಲ್ಲಿ ನೈವೇದ್ಯ ಮಾಡಿಸಿ, ಮಂಗಲಿಯರಿಗೆ ಮತ್ತು ಭಕ್ತಾದಿಗಳಿಗೆ ಹಂಚಿದರೆ, ಕುಜದೋಷ ತುಂಬಾ ಕಡಿಮೆಯಾಗುತ್ತದೆ. ರಾಹು ದೋಷ ನಿವಾರಣೆಗೊಂಡು ಮದುವೆ ಭಾಗ್ಯ ಕೂಡಿಬರುತ್ತದೆ. (ಸಂಗ್ರಹ -ಉಮಾ ದೇವಿ)
ಉಪ್ಪಿನ ದೋಷ ನಿವಾರಣೆ: ಉಪ್ಪಿನಲ್ಲಿ ಋಣಾತ್ಮಕವಾದ ದೋಷಗಳನ್ನು ತೆಗೆಯುವ ಶಕ್ತಿ ಇದೆ. ಉಪ್ಪು ನಮಗೆ ಸಾಮಾನ್ಯವಾಗಿ ಸಿಗುವ ವಸ್ತು. ಆದರೆ ಅದರ ಶಕ್ತಿ ಅಪಾರ. ನಮ್ಮಲ್ಲಿರುವ ಅನೇಕ ಕಷ್ಟಗಳನ್ನು ಕೇವಲ ಉಪ್ಪಿನಿಂದಲೇ ನಿವಾರಿಸಿಕೊಳ್ಳಬಹುದು. ಮನೆಯಲ್ಲೂ ಸಹ ಉಪ್ಪನ್ನು ಇಟ್ಟರೆ ವಾಸ್ತು ದೋಷ ನಿವಾರಣೆಯಾಗುವುದರಲ್ಲಿ ಸಂದೇಹವೇ ಇಲ್ಲ.
ಮನೆಯ ಪ್ರತಿ ಮೂಲೆಯಲ್ಲಿ ಪ್ಲಾಸ್ಟಿಕ್ ಲೋಟದಲ್ಲಿ ಉಪ್ಪು ಇಡಬೇಕು. ಅದು ಲೋಟದ ಅರ್ಧ ಭಾಗದಷ್ಟಿರಬೇಕು. ಆಗ ಮನೆಗೆ ಬರುವ ಕೆಟ್ಟ ಶಕ್ತಿಗಳನ್ನು ಉಪ್ಪು ಹೀರಿಕೊಳ್ಳುತ್ತದೆ ಮತ್ತು ಅನಾರೋಗ್ಯ ಕಾಡುತ್ತಿದ್ದರೆ ಅಂತಹವರು ಮಲಗುವ ಮಂಚದ ಕೆಳಗೆ ಐದು ಲೋಟ ಉಪ್ಪನ್ನು ತೆಗೆದುಕೊಂಡು ನಾಲ್ಕು ಕಾಲಿನ ಹತ್ತಿರ ನಾಲ್ಕು ಉಪ್ಪಿನ ಲೋಟವನ್ನು ಇರಿಸಬೇಕು.
ಮಂಚದ ಕೆಳಗೆ ಮಧ್ಯಭಾಗದಲ್ಲೂ ಉಪ್ಪಿನ ಲೋಟವನ್ನು ಇರಿಸಬೇಕು. ಇದನ್ನು ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಆದ ನಂತರ ಬದಲಿಸುತ್ತಿರಬೇಕು. ಆಗ ವಾಸ್ತುದೋಷದಿಂದ ಆರೋಗ್ಯದ ಮೇಲೆ ಬೀಳುವ ದುಷ್ಪರಿಣಾಮಗಳು ನಿಲ್ಲುತ್ತವೆ. ನಿದ್ರೆ ಬಾರದಿದ್ದರೆ ಒಳ್ಳೆಯ ನಿದ್ದೆ ಬರುತ್ತದೆ. ಕೆಟ್ಟ ಕನಸುಗಳು ದೂರವಾಗುತ್ತದೆ. ಒತ್ತಡವನ್ನು ನಿವಾರಣೆ ಮಾಡುತ್ತದೆ. ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಉಪ್ಪನ್ನು ಇಡಬೇಕಾದರೆ ಸಂಜೆ ವೇಳೆ ಇಡಬೇಕು ಮತ್ತು ಕಲ್ಲು ಉಪ್ಪುನ್ನು ಬಳಸಬೇಕು.
Published On - 2:14 pm, Tue, 25 April 23