ಒಬ್ಬ ವ್ಯಕ್ತಿ ಸಾಯುವ ಮೊದಲು ಈ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾನೆ! ಇಲ್ಲಿದೆ ಮಾಹಿತಿ

ಒಬ್ಬ ವ್ಯಕ್ತಿಯು ಸಾವಿಗೆ ಹತ್ತಿರವಾಗುತ್ತಿದ್ದಂತೆ ಆತನ ಕೆಲವು ಇಂದ್ರಿಯಗಳು ನಿಷ್ಕ್ರಿಯಗೊಳ್ಳುತ್ತದೆ ಎಂದು ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಉಪಶಾಮಕ ಆರೈಕೆ ತಜ್ಞರು ಹೇಳಿದ್ದಾರೆ. ರೋಗಿಯು ತನ್ನ ಕೊನೆಯ ದಿನಗಳಲ್ಲಿ ಮೊದಲು ಹಸಿವು ಮತ್ತು ಬಾಯಾರಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ, ನಂತರ ಮಾತು ಮತ್ತು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ಸಾಯುವ ಮೊದಲು ಈ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾನೆ! ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 25, 2023 | 4:57 PM

ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಮತ್ತು ಯಾರಾದರೂ ನಮ್ಮನ್ನು ಅಗಲಿ ಹೋಗುವ ಸಂದರ್ಭ ಊಹಿಸಲಾಗದಷ್ಟು ನೋವನ್ನು ಉಂಟು ಮಾಡುತ್ತದೆ. ವ್ಯಕ್ತಿಯು ಸಾಯುವ ಮೊದಲು ನಾನು ಸಾಯುತ್ತಿದ್ದೇನೆ ಎಂಬ ಸೂಚನೆಗಳು ಆತನ ಅರಿವಿಗೆ ಬರುತ್ತದೆಯಂತೆ ಎಂದು ಹೇಳುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ವ್ಯಕ್ತಿಯ ಅಂತ್ಯ ಸಮೀಪಿಸುತ್ತಿದೆ ಎಂದಾಗ ಆತ ಹೇಗೆ ಭಾವಿಸುತ್ತಾನೆ ಮತ್ತು ಯಾವ ಇಂದ್ರಿಯಗಳನ್ನು ಆತ ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ ಎಂಬುದರ ಕುರಿತು ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಉಪಶಾಮಕ ಆರೈಕೆ ತಜ್ಞರು ಹೇಳಿದ್ದಾರೆ. ಒಬ್ಬ ರೋಗಿಯು ಸಾಯುವ ಮೊದಲು ಅನುಕ್ರಮವಾಗಿ ಯಾವೆಲ್ಲಾ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾ ಬರುತ್ತಾನೆ ಎಂಬುದನ್ನು ತಜ್ಞರು ಪಟ್ಟಿ ಮಾಡಿದ್ದಾರೆ.

ಪೆಲ್ಲಿಯೆಟಿವ್ ಕೇರ್ ಪ್ರೋಸ್ಪೆಕ್ಟಿವ್ (ಉಪಶಮನ ಆರೈಕೆ ದೃಷ್ಟಿಕೋನ) ಪುಸ್ತಕದಲ್ಲಿ ಬರೆಯುತ್ತಾ, ರೋಗಿಯು ತಾನು ಸಾಯುವ ಕೊನೆಯ ದಿನಗಳಲ್ಲಿ ಮೊದಲಿಗೆ ಹಸಿವು ಮತ್ತು ಬಾಯಾರಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ನಂತರ ಮಾತು ಮತ್ತು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ರೋಗಿಯು ಕಳೆದುಕೊಳ್ಳುವ ಇಂದ್ರಿಯಗಳೆಂದರೆ ಸ್ಪರ್ಶ ಮತ್ತು ಶ್ರವಣ ಇಂದ್ರೀಯಗಳು ಎಂದು ತಜ್ಞರು ಹೇಳಿದ್ದಾರೆ. ವ್ಯಕ್ತಿಯು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡ ನಂತರ ಸಾಯುವಾಗ ಆ ವ್ಯಕ್ತಿ ಯಾವ ಭಾವನೆಯನ್ನು ಅನುಭವಿಸುತ್ತಾನೆ ಎಂದು ಹೇಳಲು ಕಷ್ಟಕರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Health Tips: ಆರೋಗ್ಯ ಸಲಹೆ- ಬೆಳಿಗ್ಗೆ ಸಮಯ ಟಿಫಿನ್ ತಿಂದ ಮೇಲೆ ನೀವು ಸ್ನಾನ ಮಾಡುತ್ತಿದ್ದೀರಾ? ಮೊದಲು ಈ ವಿಷಯಗಳನ್ನು ತಿಳಿಯಿರಿ!

ಇದು ಕೋಮ ಸ್ಥಿತಿಗೆ ಹೋಗುವಾಗ ಆಗಿರುತ್ತದೆಯೇ?

ಇದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕೋಮಾಗೆ ಹೋಗುವ ಹಾಗೆ ಇರುವುದಿಲ್ಲ. ಅವೆರಡು ಒಂದೇ ಅಲ್ಲ ಆದರೆ ಕನಸಿನ ಸ್ಥಿತಿಯಂತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೆಲವು ವ್ಯಕ್ತಿಗಳು ಅಥವಾ ರೋಗಿಗಳು ಚಂಡಮಾರುತ ಬರುತ್ತಿದೆ, ಸಾಗರದ ಅಲೆಗಳು ಅಪ್ಪಲಿಸಿದಂತಾಗುತ್ತದೆ ಎಂದು ವಿವರಿಸಬಹುದು. ಕ್ರಮೇಣ ಅವರು ಎತ್ತರಕ್ಕೆ ಏರುತ್ತಾರೆ.  ಜೀವನದ ಅಂತ್ಯದ ಪ್ರಕ್ರಿಯೆಯ ಭಾಗವಾಗಿ ರೋಗಿಗಳು ತಮ್ಮ ಇಂದ್ರಿಯಗಳನ್ನು ಕಳೆದುಕೊಳ್ಳಬಹುದು.

ವ್ಯಕ್ತಿಯ ಜೀವನದ ಕೊನೆಯ ಹಂತದಲ್ಲಿ ಆತನಿಗೆ ಬಿಳಿ ಬೆಳಕಿನ ಅನುಭವ ಉಂಟಾಗುತ್ತದೆ. ಈ ಅನುಭವವು ಮೆದುಳಿನಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ಮೆದುಳಿನ ಕೆಲವು ಭಾಗಗಳು ಸಾಯುವಾಗ ಇದು ಸಂಭವಿಸುತ್ತದೆ. ಮತ್ತು ದೃಷ್ಟಿ ವ್ಯವಸ್ಥೆಯ ಭಾಗಗಳು ಓವರ್ಡ್ರೈವ್​ಗೆ ಹೋಗಬಹುದು. ಇದರ ಪರಿಣಾಮವಾಗಿ ರೋಗಿಗಳು ಸಾವಿಗೆ ಸಮೀಪಿಸುತ್ತಿರುವಾಗ ಬಿಳಿ ಬೆಳಕು ಅಥವಾ ಪ್ರಪಾತಗಳನ್ನು ನೋಡಲು ಆರಂಭಿಸುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Tue, 25 April 23

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ