Fitness Secrets: 75ರ ಹರೆಯದ ನಾನಾ ಪಾಟೇಕರ್ ಅವರ ಫಿಟ್‌ನೆಸ್‌ ರಹಸ್ಯವೇನು ಗೊತ್ತಾ?

|

Updated on: Dec 20, 2024 | 12:28 PM

ಪದ್ಮಶ್ರೀ ಪ್ರಶಸ್ತಿ ವಿಜೇತ ನಟ ನಾನಾ ಪಾಟೇಕರ್ ಅವರ 75ನೇ ವಯಸ್ಸಿನಲ್ಲೂ ಫಿಟ್‌ನೆಸ್ ರಹಸ್ಯಗಳನ್ನು ಇಲ್ಲಿ ವಿವರಿಸಲಾಗಿದೆ . ಪ್ರತಿದಿನದ ವ್ಯಾಯಾಮ, ಆರೋಗ್ಯಕರ ಆಹಾರ, ಮತ್ತು ಧೂಮಪಾನದಿಂದ ದೂರವಿರುವುದು ಫಿಟ್‌ನೆಸ್‌ಗೆ ಕಾರಣ ಎಂದು ಅವರು ಹೇಳುತ್ತಾರೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ ರಹಸ್ಯಗಳನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ.

Fitness Secrets: 75ರ ಹರೆಯದ ನಾನಾ ಪಾಟೇಕರ್ ಅವರ ಫಿಟ್‌ನೆಸ್‌ ರಹಸ್ಯವೇನು ಗೊತ್ತಾ?
Nana Patekar's Workout And Diet
Follow us on

ಪದ್ಮಶ್ರೀ ಪ್ರಶಸ್ತಿ ವಿಜೇತ ಬಾಲಿವುಡ್‌ ನಟ ನಾನಾ ಪಾಟೇಕರ್‌ ಸರಳ ಮತ್ತು ಆರೋಗ್ಯಕರ ಜೀವನಶೈಲಿಯಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಬಹಳ ಸರಳ ಜೀವನ ನಡೆಸುವ ನಟ 75 ನೇ ವಯಸ್ಸಿನಲ್ಲಿಯೂ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. “ಪ್ರತಿದಿನ ಒಂದೂವರೆಯಿಂದ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ, ನನ್ನ ದೇಹವೇ ನನ್ನ ಅಸ್ತ್ರವಾಗಿದ್ದು, 75ರ ಹರೆಯದಲ್ಲೂ ಫಿಟ್ ಆಗಿದ್ದೇನೆ. ನಾನು ಇನ್ನೂ ಕನ್ನಡಿಯ ಮುಂದೆ ನಿಲ್ಲಲು ಇಷ್ಟಪಡುತ್ತೇನೆ ” ಎಂದು ಹೇಳಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಅವರು ಫಿಟ್‌ನೆಸ್‌ಗಾಗಿ ಏನು ಅನುಸರಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಾನಾ ಪಾಟೇಕರ್ ಅವರ ಫಿಟ್ನೆಸ್ ರಹಸ್ಯ:

ನಾನಾ ಪಾಟೇಕರ್ ಪ್ರತಿದಿನ ಜಿಮ್‌ನಲ್ಲಿ ಬೆಂಚ್ ಪ್ರೆಸ್, ಬೈಸೆಪ್ ಕರ್ಲ್ಸ್ ಅಥವಾ ಸ್ಕ್ವಾಟ್ ಮಾಡುತ್ತಾರೆ. ಆದರೆ ನಿಮಗೆ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ ಸಿಟ್-ಅಪ್‌ಗಳು ಮತ್ತು ಸೂರ್ಯ ನಮಸ್ಕಾರಗಳನ್ನು ಮನೆಯಲ್ಲೇ ಮಾಡಿ ಎಂದು ಅವರು ಸಲಹೆ ನೀಡುತ್ತಾರೆ. ಇದಲ್ಲದೇ ಇವರು ಧೂಮಪಾನದಿಂದ ದೂರವಿದ್ದಾರಂತೆ ಮತ್ತು ಅವರ ಆಹಾರದ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತಾರೆ.

75ರಲ್ಲಿ ಫಿಟ್ ಆಗಿರಲು ಏನು ಮಾಡಬೇಕು?

ಆರೋಗ್ಯ ತಜ್ಞರ ಪ್ರಕಾರ, ನಾನಾ ಪಾಟೇಕರ್ ಅವರಂತೆ, ನೀವು ಸಹ 75 ನೇ ವಯಸ್ಸಿನಲ್ಲಿ ಫಿಟ್ ಮತ್ತು ಆರೋಗ್ಯಕರವಾಗಿರಲು ಬಯಸಿದರೆ, ನೀವು ಏರೋಬಿಕ್ಸ್, ಶಕ್ತಿ ತರಬೇತಿ ಮತ್ತು ಸ್ಟ್ರೆಚಿಂಗ್ ಅನ್ನು ನಿಯಮಿತವಾಗಿ ಮಾಡಬಹುದು. ಇದು ದೇಹವನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವಾರ 150 ನಿಮಿಷಗಳ ಮಧ್ಯಮ ಮತ್ತು 75 ನಿಮಿಷಗಳ ಹುರುಪಿನ ವ್ಯಾಯಾಮವನ್ನು ಮಾಡಬೇಕು.

ಇದನ್ನೂ ಓದಿ: ಆಯುರ್ವೇದದ ಪ್ರಕಾರ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಆಹಾರ ಎಷ್ಟು ಗಂಟೆಗೆ ಸೇವಿಸಬೇಕು?

ವೃದ್ಧಾಪ್ಯದಲ್ಲಿ ಫಿಟ್ ಆಗಿರಲು ವ್ಯಾಯಾಮ ಮಾಡಿ:

ಏರೋಬಿಕ್ ವ್ಯಾಯಾಮ:

ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ 30 ನಿಮಿಷ ನಡೆಯಿರಿ. ಮತ್ತೊಂದು ಉತ್ತಮ ಏರೋಬಿಕ್ ವ್ಯಾಯಾಮವೆಂದರೆ ಸೈಕ್ಲಿಂಗ್. ನೀವು ಈಜುವುದನ್ನು ಇಷ್ಟಪಡುತ್ತಿದ್ದರೆ ಅದನ್ನು ನಿಮ್ಮ ವ್ಯಾಯಾಮದ ಭಾಗವಾಗಿಯೂ ಮಾಡಿಕೊಳ್ಳಬಹುದು. ಆದಾಗ್ಯೂ, ಅತಿಯಾಗಿ ಓಡುವುದನ್ನು ತಪ್ಪಿಸಬೇಕು. ಇದಲ್ಲದೇ ಇದರಲ್ಲಿ ನೀವು ಪುಷ್-ಅಪ್‌ಗಳು ಅಥವಾ ಸ್ಕ್ವಾಟ್‌ಗಳನ್ನು ಮಾಡಬಹುದು, ಹಾಗೆಯೇ ಡಂಬ್ಬೆಲ್‌ಗಳಂತಹ ತೂಕವನ್ನು ಎತ್ತಬಹುದು. ಇದು ದೇಹದ ಫಿಟ್ನೆಸ್ ನಿರ್ಮಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Fri, 20 December 24