Health Tips: ಆಯುರ್ವೇದದ ಪ್ರಕಾರ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಆಹಾರ ಎಷ್ಟು ಗಂಟೆಗೆ ಸೇವಿಸಬೇಕು?
ತಿನ್ನುವ ಸಮಯ ಮತ್ತು ಸೂರ್ಯನ ನಡುವೆ ಆಳವಾದ ಸಂಬಂಧವಿದೆ. ರಾತ್ರಿಯ ಊಟವನ್ನು ಸೂರ್ಯಾಸ್ತದ ನಂತರ ತೆಗೆದುಕೊಳ್ಳಬಾರದು ಮತ್ತು ಬೆಳಗಿನ ಉಪಾಹಾರವನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ತೆಗೆದುಕೊಳ್ಳಬಾರದು ಎಂದು ಆಯುರ್ವೇದದಲ್ಲಿದೆ. ತಿನ್ನುವ ಮತ್ತು ಕುಡಿಯುವ ಬಗ್ಗೆ ಆಯುರ್ವೇದದ ಈ ನಿಯಮಗಳನ್ನು ಅನುಸರಿಸಬೇಕು. ಈ ಸಣ್ಣ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.
ಜಗತ್ತಿಗೆ ಸೂರ್ಯ ಬಹಳ ಮುಖ್ಯ. ಒಂದು ದಿನ ಸೂರ್ಯ ಉದಯಿಸದಿದ್ದರೆ ಜಗತ್ತು ನಾಶವಾಗಬಹುದು. ಹಾಗೆಯೆ ಆಹಾರ ಸೇವಿಸುವ ಮೊದಲು ಸೂರ್ಯನನ್ನು ನೋಡುವುದು ಮುಖ್ಯ ಎಂದು ನಿಮಗೆ ತಿಳಿದಿದೆಯೇ?. ಆಯುರ್ವೇದದಲ್ಲಿ ತಿನ್ನುವ ಮತ್ತು ಕುಡಿಯುವ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಅದರಲ್ಲಿ ‘ಕರ್ಮ ಆಯುರ್ವೇದ’ ತಜ್ಞರು ಒಂದು ನಿಯಮದ ಬಗ್ಗೆ ಹೇಳುತ್ತಾರೆ. ನಾವು ಎಷ್ಟು ಗಂಟೆಗೆ ತಿಂಡಿ ತಿನ್ನಬೇಕು, ಊಟ ಮಾಡಬೇಕು? ಎಂಬ ಕುರಿತು ಆಯುರ್ವೇದದಲ್ಲಿ ತಿಳಿಸಲಾಗಿದೆ. ಈ ಸಣ್ಣ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.
ಸೂರ್ಯನನ್ನು ನೋಡಿದ ನಂತರ ತಿನ್ನಬೇಕು:
ತಿನ್ನುವ ಸಮಯ ಮತ್ತು ಸೂರ್ಯನ ನಡುವೆ ಆಳವಾದ ಸಂಬಂಧವಿದೆ. ರಾತ್ರಿಯ ಊಟವನ್ನು ಸೂರ್ಯಾಸ್ತದ ನಂತರ ತೆಗೆದುಕೊಳ್ಳಬಾರದು ಮತ್ತು ಬೆಳಗಿನ ಉಪಾಹಾರವನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ತೆಗೆದುಕೊಳ್ಳಬಾರದು ಎಂದು ಆಯುರ್ವೇದದಲ್ಲಿದೆ. ತಿನ್ನುವ ಮತ್ತು ಕುಡಿಯುವ ಬಗ್ಗೆ ಆಯುರ್ವೇದದ ಈ ನಿಯಮಗಳನ್ನು ಅನುಸರಿಸಬೇಕು. ಬೆಳಗ್ಗಿನ ಉಪಹಾರ 7 ರಿಂದ 9 ಗಂಟೆ ನಡುವೆ, ಮಧ್ಯಾಹ್ಹದ ಊಟ 12 ರಿಂದ 2 ಗಂಟೆ ನಡುವೆ ಹಾಗೂ ರಾತ್ರಿಯ ಊಟವನ್ನು ಸೂರ್ಯಾಸ್ತದ ಮುನ್ನ 6-7 ಗಂಟೆ ನಡುವೆ ಮಾಡಬೇಕು.
ದೇಹವು ಸೂರ್ಯನಿಗೆ ಅನುಗುಣವಾಗಿ ಚಲಿಸುತ್ತದೆ:
ನಮ್ಮ ದೇಹವನ್ನು ವಾತ, ಪಿತ್ತ ಮತ್ತು ಕಫ ದೋಷಗಳು ಹೇಗೆ ನಿಯಂತ್ರಿಸುತ್ತವೆಯೋ ಹಾಗೆಯೇ ಜಗತ್ತನ್ನು ಸೂರ್ಯ, ಚಂದ್ರ ಮತ್ತು ವಾಯು ನಿಯಂತ್ರಿಸುತ್ತದೆ ಎಂದು ಇದರಲ್ಲಿ ವಿವರಿಸಲಾಗಿದೆ. ನಮ್ಮ ದೋಷಗಳು ಇವುಗಳ ಪ್ರಕಾರ ಚಲಿಸುತ್ತವೆ ಮತ್ತು ನಮ್ಮ ದೇಹವು ಸೂರ್ಯನ ಪ್ರಕಾರ ಚಲಿಸುತ್ತದೆ.
ಸೂರ್ಯಾಸ್ತದ ನಂತರ ತಿಂದರೆ ವಿಷವಾಗುತ್ತದೆ:
ಸೂರ್ಯಾಸ್ತದ ನಂತರ ದೇಹವು ತಿನ್ನುವ ಅಗತ್ಯವಿಲ್ಲ. ಇದಾದ ನಂತರ ಯಾವ ಆಹಾರ ಸೇವಿಸಿದರೂ ಜೀರ್ಣವಾಗುವುದಿಲ್ಲ. ಇದರಿಂದಾಗಿ ಆಮ ಉಂಟಾಗುತ್ತದೆ. ಆಮವು ವಿಷವಿದ್ದಂತೆ. ಆಯುರ್ವೇದದ ಪ್ರಕಾರ, ದೇಹದಲ್ಲಿ ಜೀರ್ಣವಾಗದೆ ಉಳಿದಿರುವ ಆಹಾರವು 100 ಕ್ಕೂ ಹೆಚ್ಚು ಕಾಯಿಲೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಈ ಜೀರ್ಣವಾಗದ ಆಹಾರದಿಂದ, ಕೊಲೆಸ್ಟ್ರಾಲ್, ಯೂರಿಕ್ ಆಮ್ಲವು ಹೆಚ್ಚಾಗುತ್ತದೆ.
ಇದನ್ನೂ ಓದಿ: ಈ 5 ಹಣ್ಣುಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬೇಡಿ
ಊಟದ ಬಳಿಕ 100 ಹೆಜ್ಜೆ ನಡೆಯಿರಿ:
ಪ್ರತಿ ಊಟದ ನಂತರ, ನೀವು ಕನಿಷ್ಟ 100 ಹೆಜ್ಜೆಗಳನ್ನು ನಡೆಯಬೇಕು. 100 ಹೆಜ್ಜೆ ನಡೆಯುವ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಹಗಲಿನಲ್ಲಿ ನೀವು ತಿನ್ನುವ ಪ್ರತಿ ಊಟದ ನಂತರ, ನೀವು ಕನಿಷ್ಟ 100 ಹೆಜ್ಜೆಗಳನ್ನು ನಡೆಯಬೇಕು. ಕ್ಯಾಲೋರಿಗಳನ್ನು ಸುಡುವಲ್ಲಿ ಇದು ಸಹಕಾರಿ ಆಗಿದೆ. ಹಾಗೆಯೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುತ್ತದೆ. ವಾಕಿಂಗ್ ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇನ್ನು ತಿಂದ ತಕ್ಷಣ ಮಲಗುವುದು ದೇಹದಲ್ಲಿ ಕಫ ಮತ್ತು ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ದೇಹದ ಚಯಾಪಚಯವನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ನೀವು ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯೂ ದುರ್ಬಲಗೊಳ್ಳುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ