
ಮಕ್ಕಳ ತಿದ್ದಿ ಬುದ್ದಿ ಹೇಳುವ ಶಿಕ್ಷಕರು ದೇವರಿದ್ದಂತೆ. ಸರಿಯಾದ ಗುರುವಿದ್ದರೆ ಎಷ್ಟೇ ದುರ್ಗಮದ ಹಾದಿಯಾದರೂ ಅದು ಸುಗಮವಾಗಬಲ್ಲದು ಎಂಬ ಮಾತಿನಂತೆ, ಒಬ್ಬ ಒಳ್ಳೆಯ ಶಿಕ್ಷಕ ಮಗುವಿನ ಭವಿಷ್ಯವನ್ನೇ ಬದಲಿಸುತ್ತಾನೆ. ನಮಗಾಗಿ ಇಷ್ಟೆಲ್ಲಾ ಮಾಡುವ ಗುರುವಿಗೆ ಮಾನಸಿಕ ನೆಮ್ಮದಿಯ ಅವಶ್ಯಕತೆ ಇರುತ್ತದೆ. ಪಠ್ಯಕ್ರಮ ಬದಲಾವಣೆ, ಹೊಸ ಹೊಸ ಚಟುವಟಿಕೆಗಳಿಗೆ ಮಕ್ಕಳನ್ನು ಸಿದ್ದಪಡಿಸುವುದು, ಅದರ ಜೊತೆ ಮನೆ ಜವಾಬ್ದಾರಿ ಹೀಗೆ ನಾನಾ ರೀತಿಯ ಸಮಸ್ಯೆಗಳಿದ್ದರೂ ಅದನ್ನು ಮರೆಮಾಚಿ ನಗು ನಗುತ್ತಾ ಪಾಠ ಮಾಡುತ್ತಾರೆ. ಇಂತಹ ಗುರುಗಳ ಒತ್ತಡ (Stress) ಕಡಿಮೆ ಮಾಡಲು, ಅವರ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲು ಕೆಲವು ಸಲಹೆಗಳನ್ನು ಈ ಸ್ಟೋರಿ ಮೂಲಕ ನೀಡಲಾಗಿದ್ದು, ಇದನ್ನು ಪಾಲನೆ ಮಾಡಿ ಒತ್ತಡ, ಆತಂಕವನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ಏನು ಮಾಡಬೇಕು? ಯಾಕೆ ಒತ್ತಡ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಒತ್ತಡವನ್ನು ಕಡಿಮೆ ಮಾಡಲು ನಾನಾ ರೀತಿಯ ಟ್ರಿಕ್ ಗಳನ್ನು ಪಾಲನೆ ಮಾಡಬಹುದು ಆ ಮೂಲಕ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ವೈಯಕ್ತಿಕವಾಗಿ ಅಳವಡಿಸಿಕೊಳ್ಳುವ ತಂತ್ರಗಳು ನೀವು ನಿವಾಗಿರಲು ಸಹಾಯ ಮಾಡುತ್ತದೆ. ದೈನಂದಿನ ಧ್ಯಾನವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಗಮನವನ್ನು ಸುಧಾರಿಸಲು ಸಹಕಾರಿಯಾಗಿದೆ. ಇನ್ನು ಒತ್ತಡ ಹೆಚ್ಚಾದಾಗ ಆಳವಾದ ಉಸಿರಾಟ ಅದರಲ್ಲಿಯೂ ಡಯಾಫ್ರಾಗ್ಮ್ಯಾಟಿಕ್ ಉಸಿರಾಟದಂತಹ ವ್ಯಾಯಾಮಗಳು ತಕ್ಷಣದ ಪರಿಹಾರವನ್ನು ನೀಡುತ್ತವೆ ಮತ್ತು ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತವೆ. ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯು ಎಂಡಾರ್ಫಿನ್‌ಗಳನ್ನು ಉತ್ಪಾದಿಸುತ್ತದೆ, ಇದು ಒತ್ತಡ ನಿವಾರಕ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅದರ ಜೊತೆ ಜೊತೆಗೆ ನಿಮ್ಮ ಮನಸ್ಥಿತಿಯನ್ನು ದಿನಕ್ಕೆ ಒಮ್ಮೆಯಾದರೂ ಪರಿಶೀಲಿಸಿ, ನಂತರ ನಕಾರಾತ್ಮಕ ಅಥವಾ ಸಕಾರಾತ್ಮಕ ಪ್ರವೃತ್ತಿಗಳನ್ನು ಟಿಪ್ಪಣಿ ಮಾಡಿ, ಇದು ನಿಮ್ಮ ಭಾವನೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Teachers’ Day 2025: ಶಿಕ್ಷಕರ ದಿನಾಚರಣೆಯಂದು ನಿಮ್ಮ ನೆಚ್ಚಿನ ಗುರುಗಳಿಗೆ ಈ ಗಿಫ್ಟ್ ನೀಡಿ
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ನಂಬಿಕೆಗೆ ಅರ್ಹರಾಗಿರುವ ಮತ್ತು ಮಾತನಾಡಲು ವಿಶ್ವಾಸಾರ್ಹ ಸಹೋದ್ಯೋಗಿ ಅಥವಾ ಸಲಹೆಗಾರರೊಂದಿಗೆ ಮುಕ್ತವಾಗಿ ಮಾತನಾಡಿ. ನೀವು ಎಂದಿಗೂ ಒಬ್ಬಂಟಿಯಲ್ಲ. ಬೇಕಾದಲ್ಲಿ ನೀವು ಸಲಹೆಗಾರರು ಅಥವಾ ಚಿಕಿತ್ಸಕರಂತಹ ವೃತ್ತಿಪರರ ಸಹಾಯವನ್ನು ಪಡೆಯಬಹುದು. ಕೆಲಸದ ಹೊರೆಯನ್ನು ನಿರ್ವಹಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಶಾಲೆಯ ಬೆಂಬಲವನ್ನು ಕೋರಿ. ಇವುಗಳಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ ಒತ್ತಡ ಕೆಡಿಮೆಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ