ಬಾಹ್ಯಾಕಾಶ (Space) ದಲ್ಲಿ ಒಂಬತ್ತು ತಿಂಗಳು ಕಳೆದ ನಂತರ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬ್ಯಾರಿ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ಆದರೆ ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಜೀವನಶೈಲಿ ಹೇಗಿತ್ತು? ಅವರು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತಿದ್ದರು ಎಂಬುದನ್ನು ತಿಳಿಯುವುದರ ಜೊತೆಗೆ ಒಂಬತ್ತು ತಿಂಗಳ ಕಾಲ ಅವರ ಆಹಾರ ಶೈಲಿ ಹೇಗಿರಬಹುದು ಎಂಬುದನ್ನು ತಿಳಿಯಲು ಹೆಚ್ಚು ಕುತೂಹಲ ಹೊಂದಿದ್ದು, ಈ ರೀತಿಯ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದರು. ಇದಕ್ಕೆ ಪೂರಕವೆಂಬಂತೆ ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು ಅವರ ಆಹಾರ ಪದ್ದತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿತ್ತು. ಅದರಂತೆ ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
ಬಾಹ್ಯಾಕಾಶದಲ್ಲಿ ಅವರಿಬ್ಬರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದರೂ, ಅವರು ಭೂಮಿಗೆ ಹಿಂದಿರುಗಿದಾಗ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಸುಳ್ಳಲ್ಲ. ಕೆಲವು ಬಾರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ವರದಿಗಳು ಬಂದವು. ಆದರೆ ಅದರಲ್ಲಿ ಎಷ್ಟು ಸತ್ಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಕೆಲವು ವರದಿಗಳ ಪ್ರಕಾರ ಬಾಹ್ಯಾಕಾಶದಲ್ಲಿ ಅವರಿಬ್ಬರು ಪಿಜ್ಜಾ, ರೋಸ್ಟ್ ಚಿಕನ್ ಮತ್ತು ಸೀಗಡಿ ಕಾಕ್ಟೈಲ್ ಸೇವಿಸುತ್ತಿದ್ದರು ಎಂದು ಹೇಳಿದೆ. ಇದಕ್ಕೆ ಪೂರಕವೆಂಬಂತೆ ನಾಸಾ ಕೂಡ ಇಬ್ಬರಿಗೂ ತಿನ್ನಲು ಸಾಕಷ್ಟು ಆಹಾರಗಳನ್ನು ನೀಡಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.
ನಾಸಾ ವರದಿಗಳ ಪ್ರಕಾರ, ಬಾಹ್ಯಾಕಾಶದಲ್ಲಿ ಸುನೀತಾ ಮತ್ತು ಬುಚ್ ವಿಲ್ಮೋರ್ ಹೆಚ್ಚಾಗಿ ಪಿಜ್ಜಾ, ರೋಸ್ಟ್ ಚಿಕನ್ ಮತ್ತು ಸೀಗಡಿ ಕಾಕ್ಟೈಲ್ ಗಳನ್ನು ತಿನ್ನುತ್ತಿದ್ದರು. ಭೂಮಿಯ ಮೇಲೆ ನಾವು ತಿನ್ನುವಷ್ಟು ಆಹಾರವನ್ನು ತಿನ್ನಲು ಸಾಧ್ಯವಿಲ್ಲವಾದರೂ ಕೂಡ ಅವರಿಬ್ಬರ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳು ಕೂಡ ಇತ್ತು. ತಂಪಾದ ಆಹಾರಗಳನ್ನು ಮತ್ತೆ ಬಿಸಿ ಮಾಡಿ ಸೇವನೆ ಮಾಡಬಹುದಾಗಿದ್ದು ಇಬ್ಬರೂ ದಿನಕ್ಕೆ 1.7 ಕಿಲೋಗ್ರಾಂಗಳಷ್ಟು ಆಹಾರವನ್ನು ಸೇವಿಸುತ್ತಿದ್ದರು. ಜೊತೆಗೆ ಸುನೀತಾ ಮತ್ತು ಬುಚ್ ವಿಲ್ಮೋರ್ ವಿವಿಧ ರೀತಿಯ ಆಹಾರಗಳನ್ನು ಶೇಖರಿಸಿ ಇಟ್ಟುಕೊಂಡಿದ್ದು ಇದರಲ್ಲಿ ಧಾನ್ಯ, ಪುಡಿ ರೂಪದ ಹಾಲು, ಪಿಜ್ಜಾ, ಸೀಗಡಿ ಕಾಕ್ಟೈಲ್, ರೋಸ್ಟ್ ಚಿಕನ್ ಮತ್ತು ಟ್ಯೂನಾ ಕೂಡ ಸೇರಿವೆ. ಈ ಆಹಾರಗಳ ಮೂಲಕ ಅವರಿಬ್ಬರೂ ಸಾಕಷ್ಟು ಕ್ಯಾಲೊರಿಗಳನ್ನು ಪಡೆಯುತ್ತಿದ್ದರು. ಆಹಾರದ ಹೊರತಾಗಿ, ವ್ಯಾಯಾಮ ಮಾಡುತ್ತಿದ್ದರು. ಸ್ನಾಯುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಅವರ ಮೂಳೆಗಳನ್ನು ರಕ್ಷಿಸಲು ಅವರು ದಿನಕ್ಕೆ ಕನಿಷ್ಠ ಎರಡೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದರು ಎಂದು ನಾಸಾ ಹೇಳಿದೆ.
ಮತ್ತಷ್ಟು ಓದಿ: Pregnancy Care: ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವಿಷಯಗಳನ್ನು ಪಾಲನೆ ಮಾಡಿ
ಬೋಯಿಂಗ್ ಸ್ಟಾರ್- ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವಸಹಿತ ಕಾರ್ಯಾಚರಣೆಯ ಭಾಗವಾಗಿ ಸುನೀತಾ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ 5 ರಂದು ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ದೋಷಗಳಿಂದಾಗಿ, ಅವರಿಬ್ಬರ ಹುಡುಕಾಟವು ಒಂಬತ್ತು ತಿಂಗಳು ವಿಳಂಬವಾಯಿತು. ಇದೀಗ ಇಬ್ಬರು ಗನನಯಾತ್ರಿಗಳು ಭೂಮಿಗೆ ಮರಳಿದ್ದು ನಾಸಾ ಹಾಗೂ ಸ್ಪೆಸ್ ಎಕ್ಸ್ ಜಂಟಿಯಾಗಿ ಸುನೀತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಇಬ್ಬರನ್ನು ಸುರಕ್ಷಿತವಾಗಿ ಭೂಮಿಗೆ ಕರೆತಂದಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ