AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿಗೂ ನಿದ್ರೆಗೂ ಸಂಬಂಧವಿದೆಯೇ? ಯಾಕೆ ಹಾಲು ಕುಡಿದರೆ ನಿದ್ರೆ ಬರುತ್ತೆ ತಿಳಿದುಕೊಳ್ಳಿ

ರಾತ್ರಿ ಸರಿಯಾಗಿ ನಿದ್ದೆ ಬರದೆ ಒದ್ದಾಡುತ್ತೀರಾ? ನಿದ್ರೆ ಸರಿಯಾಗಿ ಆಗದೆಯೇ ಆರೋಗ್ಯ ಹಾಳಾಗುತ್ತಿದೆಯೇ? ಹಾಗಿದ್ರೆ ಚಿಂತೆ ಮಾಡಬೇಡಿ. ಕೇವಲ ಈ ಒಂದು ಸರಳ ಸಲಹೆಯನ್ನು ಅನುಸರಿಸುವ ಮೂಲಕ ರಾತ್ರಿ ನೆಮ್ಮದಿಯಿಂದ ನಿದ್ರಿಸಬಹುದು. ಮಾತ್ರೆ, ಔಷಧಿಗಳ ಮೊರೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಕೇವಲ ಈ ಒಂದು ಅಭ್ಯಾಸದಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹಾಗಾದ್ರೆ ಏನದು ಸಲಹೆ ಅಂತೀರಾ? ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದ್ರೆ ನಿದ್ರೆ ಬೇಡ ಅಂದ್ರು ಬರುತ್ತೆ. ಮಾತ್ರವಲ್ಲ ಮಲಗುವ ಮುನ್ನ ಹಾಲು ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಏನದು? ಹಾಲಿಗೂ ನಿದ್ರೆಗೂ ಏನು ಸಂಬಂಧ? ಇದಕ್ಕೆಲ್ಲಾ ಉತ್ತರ ಈ ಸ್ಟೋರಿಯಲ್ಲಿದೆ

ಹಾಲಿಗೂ ನಿದ್ರೆಗೂ ಸಂಬಂಧವಿದೆಯೇ? ಯಾಕೆ ಹಾಲು ಕುಡಿದರೆ ನಿದ್ರೆ ಬರುತ್ತೆ ತಿಳಿದುಕೊಳ್ಳಿ
Sleep better with milk
ಪ್ರೀತಿ ಭಟ್​, ಗುಣವಂತೆ
|

Updated on: Oct 15, 2025 | 8:46 PM

Share

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಮಾಡಿಕೊಂಡಂತಹ ಬದಲಾವಣೆಗಳಿಂದಾಗಿ ಆರೋಗ್ಯ (Health) ಸಮಸ್ಯೆಗಳು ಹೆಚ್ಚಾಗುತ್ತಿದೆ. ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸದಿರುವುದು ಅಥವಾ ಹೆಚ್ಚಿದ ಒತ್ತಡ ಈ ರೀತಿ ನಾನಾ ಕಾರಣಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಹದಗೆಟ್ಟಿದೆ. ಮಾತ್ರವಲ್ಲ ಹೆಚ್ಚಿನವರಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುತ್ತಿದೆ. ಹೌದು, ನಿಮಗೂ ಕೂಡ ಈ ರೀತಿ ಸಮಸ್ಯೆ ಕಂಡುಬರುತ್ತಿದ್ದು, ರಾತ್ರಿ ಸರಿಯಾಗಿ ನಿದ್ರೆ (Sleep) ಬರದಿದ್ದರೆ ಅದಕ್ಕೆ ಮಾತ್ರೆ, ಔಷಧಿಗಳನ್ನು ಸೇವನೆ ಮಾಡಿ ಮತ್ತಷ್ಟು ಆರೋಗ್ಯ ಹಾಳು ಮಾಡಿಕೊಳ್ಳುವುದರ ಬದಲು ಮನೆಯಲ್ಲಿ ಈ ಸಣ್ಣ ಸಲಹೆಯನ್ನು ಪ್ರಯತ್ನಿಸುವ ಮೂಲಕ ನೆಮ್ಮದಿಯಿಂದ ನಿದ್ರಿಸಬಹುದು. ಹಾಗಾದರೆ ಏನದು ಸಲಹೆ ಎಂದು ಯೋಚಿಸುತ್ತಿದ್ದೀರಾ… ದೊಡ್ಡದೇನಲ್ಲ, ಮಲಗುವ ಮುನ್ನ ಕೇವಲ ಒಂದು ಲೋಟ ಹಾಲು (Milk) ಕುಡಿಯುವುದರಿಂದ ಯಾವುದೇ ರೀತಿಯ ಅಡ್ಡಿಯಿಲ್ಲದೆ ನೆಮ್ಮದಿಯಿಂದ ನಿದ್ರಿಸಬಹುದು. ಅಷ್ಟೇ ಅಲ್ಲ, ಮಲಗುವ ಮುನ್ನ ಹಾಲು ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಏನದು? ಹಾಲಿಗೂ ನಿದ್ರೆಗೂ ಏನು ಸಂಬಂಧ? ಇದಕ್ಕೆಲ್ಲಾ ಉತ್ತರ ಈ ಸ್ಟೋರಿಯಲ್ಲಿದೆ.

ಹಾಲಿಗೂ ನಿದ್ರೆಗೂ ಇರುವ ಸಂಬಂಧವೇನು?

ಹಾಲು ಹೇರಳವಾದ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆಗೆ ಇತರ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಹಾಲು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಜೊತೆಗೆ ಸ್ನಾಯುಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ರಾತ್ರಿ ನಿದ್ರೆ ಚೆನ್ನಾಗಿ ಮಾಡುವುದಕ್ಕೆ ಸಹಾಯ ಮಾಡುವ ಮೂಲಕ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಆದರೆ ಕೆಲವರಿಗೆ ಈ ಹಾಲಿಗೂ ನಿದ್ರೆಗೂ ಯಾವ ರೀತಿಯ ಸಂಬಂಧವಿದೆ? ಯಾಕಾಗಿ ಹಾಲನ್ನು ಸೇವನೆ ಮಾಡಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಇದಕ್ಕೆ ಕಾರಣ ತುಂಬಾ ಸರಳವಾಗಿದೆ. ಅದೇನೆಂದರೆ, ಹಾಲು ಮತ್ತು ಡೈರಿ ಉತ್ಪನ್ನಗಳು ಟ್ರಿಪ್ಟೊಫಾನ್ ಎಂಬ ನೈಸರ್ಗಿಕ ಅಮೈನೋ ಆಮ್ಲವನ್ನು ಹೊಂದಿರುತ್ತವೆ. ಇದು ಸಿರೊಟೋನಿನ್ ಮತ್ತು ಮೆಲಟೋನಿನ್ ನಂತಹ ಮೆದುಳಿನ ರಾಸಾಯನಿಕಗಳ ಉತ್ಪಾದನೆಗೆ ಅಗತ್ಯವಾದ ಅತ್ಯಗತ್ಯ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಮನಸ್ಸು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಜೊತೆಗೆ ಇದು ಒಳ್ಳೆ ನಿದ್ರೆ ಬರುವುದಕ್ಕೆ ಉತ್ತೇಜನ ನೀಡುತ್ತದೆ. ವಿವಿಧ ಅಧ್ಯಯನಗಳ ಪ್ರಕಾರ, ಹಾಲು ಮತ್ತು ಇತರ ಡೈರಿ ಆಹಾರಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳು ದೇಹವನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರತಿದಿನ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ?

ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ

ಅಷ್ಟೇ ಅಲ್ಲ, ಹಾಲಿನಲ್ಲಿರುವ ಉತ್ತಮ ಗುಣಮಟ್ಟದ ಪ್ರೋಟೀನ್‌ಗಳು ಸ್ನಾಯುಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪ್ರೋಟೀನ್ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ವಿಶ್ರಾಂತಿ ಸಮಯದಲ್ಲಿ ಸ್ನಾಯುಗಳು ಬಲಗೊಳ್ಳುವುದಕ್ಕೆ ಸಹಕಾರಿಯಾಗಿದೆ. ಜೊತೆಗೆ ಡೈರಿ ಉತ್ಪನ್ನಗಳು ಮೆಗ್ನೀಸಿಯಮ್ ಮತ್ತು ಸತುವನ್ನು ಸಹ ಹೊಂದಿರುವುದರಿಂದ ಇದು ಮೆದುಳಿನ ರಾಸಾಯನಿಕಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ, ಒಳ್ಳೆಯ ನಿದ್ರೆ ಮಾಡುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ