ದಿನಕ್ಕೆ 10 ಸಾವಿರ ಹೆಜ್ಜೆಗಳನ್ನು ನಡೆಯಿರಿ, ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ
ಪ್ರತಿನಿತ್ಯ 10,000 ಹೆಜ್ಜೆ ನಡೆಯುವವರಿದ್ದಾರೆ. ಇದು ತೂಕ ಇಳಿಸಿಕೊಳ್ಳಲು ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಇಷ್ಟು ಮಾತ್ರವಲ್ಲ, ಈ ಒಂದು ಅಭ್ಯಾಸದಿಂದ ನೀವು ಊಹಿಸಲೂ ಸಾಧ್ಯವಾಗದಷ್ಟು ಪ್ರಯೋಜನಗಳು ಸಿಗುತ್ತದೆ. ಹಾಗಾದ್ರೆ ಇದರಿಂದ ಸಿಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ದಿನಕ್ಕೆ 10,000 ಹೆಜ್ಜೆ (10,000 Steps) ನಡೆಯುವ (walking) ಚಾಲೆಂಜ್ ಮಾಡುವವರನ್ನು ನೀವು ನೋಡಿರಬಹುದು! ತೂಕ ಇಳಿಸಿಕೊಳ್ಳಲು ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಈ ರೀತಿ ಒಂದು ಗುರಿಯನ್ನು ಅನುಸರಿಸುವುದು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದೆ. ದಿನಕ್ಕೆ 10,000 ಹೆಜ್ಜೆಗಳನ್ನು ಪೂರ್ಣಗೊಳಿಸುವುದರಿಂದ ದೈಹಿಕ ಸದೃಢತೆ ಹೆಚ್ಚಾಗುತ್ತದೆ, ಕ್ಯಾಲೊರಿ ಬರ್ನ್ ಆಗುತ್ತದೆ ಅದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ದಿನಕ್ಕೆ 10,000 ಹೆಜ್ಜೆ ನಡೆಯಬೇಕು ಎನ್ನಲಾಗುತ್ತದೆ. ಆದರೆ ಇದರಿಂದ ಸಿಗುವ ಪ್ರಯೋಜನ ಇಷ್ಟೇ ಅಲ್ಲ… ಈ ಅಭ್ಯಾಸದಿಂದ ನೀವು ಊಹಿಸಲೂ ಸಾಧ್ಯವಾಗದಷ್ಟು ಪ್ರಯೋಜನಗಳು ಸಿಗುತ್ತದೆ. ಹಾಗಾದ್ರೆ ಇದರಿಂದ ಸಿಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.
10,000 ಹೆಜ್ಜೆ ನಡೆಯುವುದರಿಂದ ಸಿಗುವ ಪ್ರಯೋಜನಗಳೇನು?
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ:
ದಿನಕ್ಕೆ 10,000 ಹೆಜ್ಜೆ ನಡೆಯುವುದು ಅದ್ಭುತವಾದ ಏರೋಬಿಕ್ ಚಟುವಟಿಕೆಯಾಗಿದೆ. ಚುರುಕಾದ ನಡಿಗೆಯು ನಿಮ್ಮ ಹೃದಯ ಬಡಿತವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಮಾತ್ರವಲ್ಲ ಅದನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ಇದನ್ನು ನಿಯಮಿತವಾಗಿ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ:
ದಿನಕ್ಕೆ ತಪ್ಪದೆ 10,000 ಹೆಜ್ಜೆ ನಡೆಯುವುದರಿಂದ ಚಯಾಪಚಯ ಶಕ್ತಿ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ, ತಜ್ಞರು ಹೇಳುವಂತೆ ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Morning Walk: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್ ಮಾಡಿದರೆ ಏನಾಗುತ್ತದೆ ಗೊತ್ತಾ?
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ:
ಅಧ್ಯಯನಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಪ್ರತಿನಿತ್ಯ 10,000 ಹೆಜ್ಜೆ ನಡೆಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಟೈಪ್- 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಸ್ನಾಯು ಬಲವನ್ನು ಸುಧಾರಿಸುತ್ತದೆ:
ದಿನಕ್ಕೆ ತಪ್ಪದೆ 10,000 ಹೆಜ್ಜೆ ನಡೆಯುವುದು ಸ್ನಾಯು ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಅಧ್ಯಯನಗಳಿಂದಲೂ ಬಹಿರಂಗಗೊಂಡಿದೆ. ಜೊತೆಗೆ ಮೂಳೆ ಮತ್ತು ಕೀಲುಗಳ ಮೇಲೆ ಬೀಳುವ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








