AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಗರೇಟ್ ಜತೆಗೆ ಕಾಫಿ ಕುಡಿಯುವವರ ಹಲ್ಲುಗಳು ಹಳದಿ ಇರುತ್ತದೆ ಯಾಕೆ? ಬಿಳಿಯಾಗಿಸಲು ಈ ಮೂರು ಸಲಹೆ ಅನುಸರಿಸಿ

ಹಲ್ಲುಗಳು ಮುಖಕ್ಕೆ ಸೌಂದರ್ಯ ಹೆಚ್ಚಿಸುವ ಪ್ರಮುಖ ಅಂಗ, ಅದನ್ನು ಶುಚಿಯಾಗಿ ಹಾಗೂ ಆರೋಗ್ಯವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕಾಫಿ ಟೀ ಕುಡಿದರೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ, ಅದರಲ್ಲೂ ಈ ಧೂಮಪಾನ ಮಾಡುವಾಗ ಅನೇಕರಿಗೆ ಟೀ, ಕಾಫಿ ಕುಡಿಯುವ ಅಭ್ಯಾಸ ಇದೆ. ಈ ಸಮಯದಲ್ಲಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ. ಹೀಗಾದಾಗ ಈ ವೇಳೆ ಮೂರು ಕ್ರಮಗಳನ್ನು ಅನುಸರಿಸಲು ವೈದ್ಯರು ಹೇಳಿದ್ದಾರೆ.

ಸಿಗರೇಟ್ ಜತೆಗೆ ಕಾಫಿ ಕುಡಿಯುವವರ ಹಲ್ಲುಗಳು ಹಳದಿ ಇರುತ್ತದೆ ಯಾಕೆ? ಬಿಳಿಯಾಗಿಸಲು ಈ ಮೂರು ಸಲಹೆ ಅನುಸರಿಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Aug 19, 2025 | 4:00 PM

Share

ನಗು ಮುಖವು ಲಕ್ಷಣವನ್ನು ಹೆಚ್ಚಿಸುತ್ತದೆ, ಆದರೆ ಈ ನಗುವಿಗೆ ಹಲ್ಲುಗಳೇ (teeth) ಶೋಭೆ, ಈ ಹಲ್ಲುಗಳೇ ಹಳದಿ ಬಣ್ಣಕ್ಕೆ ತಿರುಗಿದ್ದರೆ ಮುಕ್ತವಾಗಿ ನಗುವುದಕ್ಕೂ ನಾಚಿಕೆ ಆಗುತ್ತದೆ. ಇದಕ್ಕೆ ಕಾರಣ ದಿನನಿತ್ಯ ಸೇವನೆ ಮಾಡುವ ಟೀ, ಕಾಫಿ. ಅದರಲ್ಲೂ ಧೂಮಪಾನ ವ್ಯಸನಿಗಳು ಟೀ, ಕಾಫಿ ಸೇವನೆ ಮಾಡಿಯೇ ಮಾಡುತ್ತಾರೆ. ಇದರಿಂದಾಗಿ, ಅವರ ಹಲ್ಲುಗಳು ಕಾಲಾನಂತರದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರ ಹೊರತಾಗಿ, ಹಳದಿ ಹಲ್ಲುಗಳು ನಿಮ್ಮ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತವೆ.  ಹೀಗಾಗಿ ಹಳದಿಗಟ್ಟಿದ ಹಲ್ಲುಗಳನ್ನು ಮತ್ತೊಮ್ಮೆ ಬಿಳಿ ಮತ್ತು ಹೊಳೆಯುವಂತೆ ಮಾಡಲು ಕೆಲವು ಸುಲಭ ಮಾರ್ಗಗಳು ಇಲ್ಲಿದೆ.

ಅಮೇರಿಕದಲ್ಲಿ ವೈದ್ಯರಾಗಿರುವ ಭಾರತೀಯ ಮೂಲದ ಡಾ. ಅನಿಲ್ ರಜನಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಹಲ್ಲುಗಳ ಹೊಳಪನ್ನು ಮರಳಿ ತರಲು ಮೂರು ಸುಲಭ ಮಾರ್ಗಗಳನ್ನು ವೈದ್ಯರು ಹೇಳಿದ್ದಾರೆ.

  1. ಕಾಫಿ ಜೊತೆ ನೀರು ಕುಡಿಯಿರಿ : ಡಾ. ಅನಿಲ್‌ ರಜನಿ ಅವರ ಪ್ರಕಾರ, ಕಾಫಿ ಮತ್ತು ಟೀನಂತಹ ಪಾನೀಯಗಳು ತುಂಬಾ ಆಮ್ಲೀಯವಾಗಿರುತ್ತವೆ. ಅವು ಹಲ್ಲುಗಳ ಮೇಲೆ ಕಲೆಗಳನ್ನು ಬೇಗನೆ ಬಿಡುತ್ತವೆ. ಈ ಕಾರಣದಿಂದಾಗಿ ಅನೇಕ ಜನರು ಸ್ಟ್ರಾ ಬಳಸಿ ಕಾಫಿ ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಇದು ಕೂಡ ಹಲ್ಲುಗಳನ್ನು ಸುರಕ್ಷಿತವಾಗಿ ಇಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಹಾಗಾಗಿ ಇದರ ಜತೆಗೆ ಕಾಫಿಯೊಂದಿಗೆ ನೀರನ್ನು ಕುಡಿಯಿರಿ. ಇದು ಹಲ್ಲುಗಳಿಗೆ ಟೀ ಅಥವಾ ಕಾಫಿಯ ಕಲೆಗಳು ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಒಂದು ಕಪ್ ಕಾಫಿ ಕುಡಿಯುತ್ತಿದ್ದರೆ, ಅದರ ನಂತರ ಕನಿಷ್ಠ ಎರಡು ಕಪ್ ನೀರು ಕುಡಿಯಿರಿ. ಇದರಿಂದ ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ.
  2. ಪ್ರತಿದಿನ ಫ್ಲಾಸ್ ಮಾಡುವುದು ಅಗತ್ಯ: ಹಲ್ಲುಜ್ಜುವುದು ಮಾತ್ರ ಸಾಕಾಗುವುದಿಲ್ಲ. ಫ್ಲಾಸಿಂಗ್‌  ಹಲ್ಲುಗಳ ನಡುವೆ ಸಂಗ್ರಹವಾಗಿರುವ ಪ್ಲೇಕ್ ಅನ್ನು ತೆಗೆದುಹಾಕುತ್ತದೆ. ಪ್ರತಿದಿನ ಫ್ಲಾಸ್ ಮಾಡಿದರೆ, ಹಲ್ಲುಗಳ ಸಂಧಿಯಲ್ಲಿ ಅಡಗಿರುವ ಹಳದಿ ಬಣ್ಣವು ಹೋಗುತ್ತದೆ.
  3. ಪ್ರತಿ 6 ತಿಂಗಳಿಗೊಮ್ಮೆ ಹಲ್ಲುಗಳನ್ನು ದಂತವೈದ್ಯರಿಂದ ಶುಚಿಗೊಳಿಸುವುದು: ಮನೆಯ ಹಲ್ಲುಗಳ ಆರೈಕೆ ಮುಖ್ಯ, ಆದರೆ ಪ್ರತಿ 6 ತಿಂಗಳಿಗೊಮ್ಮೆ ದಂತವೈದ್ಯರ ಬಳಿ ಹೋಗಿ ಹಲ್ಲುಗಳನ್ನು ಶುಚಿಗೊಳಿಸಬೇಕು. ದಂತವೈದ್ಯರು ಹಲ್ಲುಗಳ ಮೇಲೆ ಸಂಗ್ರಹವಾಗಿರುವ ಪ್ಲೇಕ್ ಮತ್ತು ಟಾರ್ಟರ್ ಅನ್ನು ಸುಲಭವಾಗಿ ತೆಗೆದುಹಾಕುತ್ತಾರೆ, ಇದರಿಂದಾಗಿ ಹಲ್ಲುಗಳು ನೈಸರ್ಗಿಕವಾಗಿ ಹೆಚ್ಚು ಬಿಳಿಯಾಗಿ ಕಾಣುತ್ತವೆ.

ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿದರೆ, ಬಲು ಸುಲಭವಾಗಿ ತೂಕ ಇಳಿಸಬಹುದಂತೆ

ಇದನ್ನೂ ಓದಿ
Image
ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿದರೆ, ಸುಲಭವಾಗಿ ತೂಕ ಇಳಿಸಬಹುದು
Image
ತೂಕ ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆ ಈ ಹುಲ್ಲಿನ ಚಹಾ ಮಾಡಿ ಕುಡಿಯಿರಿ
Image
ಕಾರ್ಡಿಯೋಟಾಕ್ಸಿಸಿಟಿಗೆ ಆಯುರ್ವೇದ ಪರಿಹಾರ: ಪತಂಜಲಿ
Image
ಯಾವ ಕೆಲಸ ಮಾಡದಿದ್ರೂ ಸುಸ್ತಾಗುತ್ತಿದ್ದರೆ ಈ ರೋಗ ಬಂದಿದೆ ಎಂದರ್ಥ!

ಕಾಫಿ, ಟೀ ಕುಡಿದ ಮೇಲೆ ಈ ರೀತಿ ಮಾಡಬೇಡಿ:

ಕಾಫಿ ಕುಡಿದ ತಕ್ಷಣ ಹಲ್ಲುಜ್ಜುವುದು ಉತ್ತಮ ಎಂದು ಅನೇಕರು ಹೇಳಬಹುದು. ಆದರೆ ಇದು ತಪ್ಪು. ಕಾಫಿಯಲ್ಲಿರುವ ಆಮ್ಲವು ಹಲ್ಲಿನ ದಂತಕವಚವನ್ನು ಸ್ವಲ್ಪ ಸಮಯದವರೆಗೆ ಮೃದುಗೊಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣ ಹಲ್ಲುಜ್ಜುವುದರಿಂದ ದಂತಕವಚವು ಸವೆದುಹೋಗಬಹುದು ಹಾಗೂ  ಇನ್ನಷ್ಟು ಕಲೆಯಾಗಬಹುದು. ಹಾಗಾಗಿ ಹೆಚ್ಚು ನೀರು ಕುಡಿಯಿರಿ, ಪ್ರತಿದಿನ ಫ್ಲಾಸ್ ಮಾಡಿ ಮತ್ತು ಕಾಲಕಾಲಕ್ಕೆ ದಂತವೈದ್ಯರಿಂದ ಶುಚಿಗೊಳಿಸಿ. ಈ ಮೂರು ಹಂತಗಳನ್ನು ಅಳವಡಿಸಿಕೊಂಡರೆ ಖಂಡಿತ ಹಲ್ಲುಗಳು ಬಿಳಿಯಾಗಿರುತ್ತದೆ ಎಂದು ಡಾ. ಅನಿಲ್ ರಜನಿ ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ