
ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು (White Hair) ಬರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮೊದಲೆಲ್ಲಾ ಈ ರೀತಿಯ ಸಮಸ್ಯೆ ಕೇವಲ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು ಆದರೆ ಈಗ ಹಾಗಲ್ಲ. ಈ ಸಮಸ್ಯೆ ಚಿಕ್ಕ ವಯಸ್ಸಿನವರಲ್ಲಿಯೇ ಕಂಡು ಬರುತ್ತಿದೆ. ಇದು ಪ್ರತಿನಿತ್ಯ ಹೊರಗೆ ಓಡಾಡುವವರಿಗೆ ಬಹಳ ಮುಜುಗರ ಉಂಟುಮಾಡುತ್ತದೆ. ಆದರೆ ಇದಕ್ಕೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ? ಆರೋಗ್ಯ ತಜ್ಞರು ಈ ರೀತಿಯ ಸಮಸ್ಯೆ ಕಂಡುಬರಲು ಕೆಲವು ರೀತಿಯ ಆಹಾರ (Foods) ಮತ್ತು ಪಾನೀಯಗಳು ಕಾರಣ ಎಂದು ಹೇಳುತ್ತಾರೆ. ಹಾಗಾದರೆ ಅವು ಯಾವವು? ಯಾವ ರೀತಿಯ ಆಹಾರ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಿಕ್ಕ ವಯಸ್ಸಿನಲ್ಲಿಯೇ ನೈಸರ್ಗಿಕವಾಗಿರುವ ಕಪ್ಪು ಕೂದಲು ಬಿಳಿಯಾಗುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮದ್ಯ ಸೇವನೆಯೂ ಒಂದು. ಅಂದರೆ ಅತಿಯಾಗಿ ಮದ್ಯ ಸೇವಿಸುವವರ ಆರೋಗ್ಯ ಮಾತ್ರವಲ್ಲ ಅವರ ಕೂದಲು ಕೂಡ ಬಿಳಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅತಿಯಾದ ಮದ್ಯಪಾನ ಮಾಡುವುದರಿಂದ ಮಾತ್ರವಲ್ಲ ಪ್ಯಾಕ್ ಮಾಡಿಟ್ಟ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಬಹುದು.
ಪ್ರತಿನಿತ್ಯ ಚಹಾ ಮತ್ತು ಕಾಫಿ ಸೇವನೆ ಮಾಡುವುದು ಸಾಮಾನ್ಯ. ಆದರೆ ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವವಲ್ಲಿ, ಬಿಳಿ ಕೂದಲು ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ ಅವುಗಳಲ್ಲಿರುವ ಕೆಫೀನ್ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಪರಿಣಾಮವಾಗಿ, ಕೂದಲು ಬೆಳ್ಳಗಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕರಿದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಆದರೆ ನಿಮಗೆ ಗೊತ್ತಾ? ನಾವು ಇಷ್ಟಪಟ್ಟು ಸೇವನೆ ಮಾಡುವಂತಹ ಕರಿದ ಆಹಾರಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಇರುವುದಿಲ್ಲ. ಇವುಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಣೆ ಸಿಗದೇ ಅದರ ಕೊರತೆ ಉಂಟಾಗಬಹುದು, ಇದರಿಂದಾಗಿ ಕೂದಲು ಬೂದು ಬಣ್ಣಕ್ಕೆ ತಿರುಗಬಹುದು. ಆದ್ದರಿಂದ ಈ ರೀತಿಯ ಆಹಾರಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು.
ಇದನ್ನೂ ಓದಿ: Hair Care: ಬೋಳು ತಲೆಯಲ್ಲಿಯೂ ಚಿಗುರುತ್ತೆ ಕೂದಲು, ಇದನ್ನು ಹಚ್ಚಿ ನೋಡಿ
ಅದೇ ರೀತಿ, ಉಪ್ಪು ಮತ್ತು ಸಕ್ಕರೆ ಸೇರಿಸಿ ತಯಾರಿಸಿದ ಆಹಾರವನ್ನು ಸೇವಿಸಿದ ನಂತರವೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಮಾತ್ರವಲ್ಲ ಇದು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಇವುಗಳನ್ನು ಅತಿಯಾಗಿ ಸೇವಿಸಿದರೆ, ಕಪ್ಪಾಗಿರುವ ಕೂದಲು ಕೂಡ ಬಿಳಿಯಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ