ಕಣ್ಣಿನ ಕುರು ಕಾಣಿಸಿಕೊಂಡರೆ ಬಾಣಂತಿಯರ ಎದೆ ಹಾಲು ಬಿಡಿ ಸಾಕು

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಅದರಲ್ಲಿಯೂ ಇತ್ತೀಚಿಗೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತಿದೆ. ಕಣ್ಣಿನಲ್ಲಿ ಬೇನೆ ಅಥವಾ ನೋವು, ಕುರು, ಉರಿ ಹೀಗೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಔಷಧಿಗಳ ಮೊರೆ ಹೋಗುವ ಬದಲು ಬಾಣಂತಿಯರ ಎದೆ ಹಾಲನ್ನು ಬಳಸಿಕೊಳ್ಳಬಹುದು. ಇದು ಮಗುವಿಗೆ ಮಾತ್ರವಲ್ಲ ಕಣ್ಣಿನ ಸಮಸ್ಯೆಗೂ ಅಮೃತವಾಗಬಲ್ಲದು. ಹಾಗಾದರೆ ಇದನ್ನು ಹೇಗೆ ಬಳಸಬೇಕು ತಿಳಿದುಕೊಳ್ಳಿ.

ಕಣ್ಣಿನ ಕುರು ಕಾಣಿಸಿಕೊಂಡರೆ ಬಾಣಂತಿಯರ ಎದೆ ಹಾಲು ಬಿಡಿ ಸಾಕು
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 06, 2025 | 4:19 PM

ಸಾಮಾನ್ಯವಾಗಿ ಕಣ್ಣು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದರೆ ಅದರ ಆರೋಗ್ಯ (Health) ಕಾಪಾಡಿಕೊಳ್ಳುವುದು ಸುಲಭವಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಟಿವಿ, ಮೊಬೈಲ್, ಲ್ಯಾಪ್ ಟಾಪ್ ನೋಡುವುದರಿಂದ ಕಣ್ಣಿನ ಆರೋಗ್ಯ (Eye Health) ಹದಗೆಡುತ್ತಿದೆ. ಹಾಗಾಗಿ ಕಣ್ಣು (Eye) ಬೇನೆ ಅಥವಾ ನೋವು, ಉರಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇನ್ನು ದೇಹದಲ್ಲಿ ನಂಜಿನ ಅಂಶ ಅಥವಾ ಕೆಟ್ಟ ರಕ್ತ ಹೆಚ್ಚಾದಾಗಲೂ ಕೂಡ ಕೆಲವರಿಗೆ ಕಣ್ಣಿನಲ್ಲಿ ಕೀವು ತುಂಬಿಕೊಂಡು ವಿಪರೀತ ನೋವು, ಉರಿ ಉಂಟಾಗುತ್ತದೆ. ಇದನ್ನೇ ಕುರು ಎನ್ನುತ್ತಾರೆ. ಈ ರೀತಿಯ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುವುದಕ್ಕೆ ನಾವು ನಾನಾ ರೀತಿಯ ಪರಿಹಾರ ಮಾರ್ಗಗಳನ್ನು ಹುಡುಕುತ್ತೇವೆ. ಆದರೆ ಇದಾವುದನ್ನು ಮಾಡದೆಯೇ ಸರಳವಾಗಿ ಕಣ್ಣು ಬೇನೆ ಅಥವಾ ಕಣ್ಣು ಕೆಂಪಗಾಗುವುದನ್ನು ತಡೆಯಲು ಬಾಣಂತಿಯರ ಎದೆ ಹಾಲನ್ನು (Breast Milk) ಬಳಸಿಕೊಳ್ಳಬಹುದು. ಈ ವಿಷಯ ಹಲವರಿಗೆ ಕುತೂಹಲ ಹುಟ್ಟಿಸಬಹುದು. ಆದರೆ ಇದು ನಿಜ. ಹಾಗಾದರೆ ಇದು ಹೇಗೆ ನೋವನ್ನು ಕಡಿಮೆ ಮಾಡುತ್ತದೆ? ತಾಯಿಯ ಎದೆ ಹಾಲು ಯಾವ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಹಿಂದಿನ ಕಾಲದಲ್ಲಿ ಆಸ್ಪತ್ರೆಗಳು ಅಥವಾ ವಾಹನಗಳ ವ್ಯವಸ್ಥೆ ಅಷ್ಟಾಗಿ ಇರಲಿಲ್ಲ. ಹಾಗಾಗಿ ಆಗ ಬರುತ್ತಿದ್ದಂತಹ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನರು ಮನೆಮದ್ದುಗಳ ಮೊರೆ ಹೋಗುತ್ತಿದ್ದರು. ಆ ಮದ್ದು ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದಂತೆ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತಿತ್ತು. ಆದರೆ ಈಗ ನಾನಾ ಬಗೆಯ ಔಷಧಿಗಳು ಸುಲಭವಾಗಿ ಕೈಗೆಟಕುವುದರಿಂದ ಈ ಮನೆ ಮದ್ದುಗಳನ್ನು ಯಾರೂ ಕೂಡ ಬಳಕೆ ಮಾಡುವುದಿಲ್ಲ. ಹಾಗಾಗಿ ಮನೆಮದ್ದು ಎಷ್ಟೋ ಬಗೆಯ ಕಾಯಿಲೆಗಳಿಗೆ ರಾಮಬಾಣವಾಗಿರುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಅದೇ ರೀತಿ ತಾಯಿಯ ಎದೆ ಹಾಲಿನಲ್ಲಿಯೂ ಹಲವು ರೀತಿಯ ಔಷಧಿ ಗುಣಗಳಿದ್ದು ಅವುಗಳನ್ನು ಯಾವ ಸಂದರ್ಭಗಳಲ್ಲಿ ಉಪಯೋಗ ಮಾಡಬಹುದು ಎಂಬುದನ್ನು ತಿಳಿದಿರಬೇಕಾಗುತ್ತದೆ. ಹಾಗಾದರೆ ಎದೆ ಹಾಲು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: ಬೇರೆಯವರ ಚಪ್ಪಲಿ, ಶೂ ಬಳಸುವ ಅಭ್ಯಾಸ ಇದ್ದರೆ ಈ ವಿಷಯ ನೆನಪಿಟ್ಟುಕೊಳ್ಳಿ

ಇದನ್ನೂ ಓದಿ
ಸಿಸೇರಿಯನ್‌, ನಾರ್ಮಲ್ ಡೆಲಿವರಿಯಾದ ಬಾಣಂತಿಯರಿಗೆ ಡಾ. ಶಿಲ್ಪಾ ಹೇಳೋದೇನು?
ಬೇರೆಯವರ ಚಪ್ಪಲಿ, ಶೂ ಬಳಸುವ ಮುನ್ನ ಈ ರೀತಿ ಮಾಡಿ
ಗೋವುಗಳು ಪ್ಲಾಸ್ಟಿಕ್​​ ತಿಂದು ಸಾಯುವುದಕ್ಕೆ ಕಾರಣವೇನು?
ಮಗುವಿಗೆ ಮಸಾಲೆ ಪದಾರ್ಥಗಳನ್ನು ಎಷ್ಟನೇ ತಿಂಗಳಿಗೆ ನೀಡಬೇಕು?

ಎದೆ ಹಾಲು ಅಮೃತವಿದ್ದಂತೆ!

ಬಾಣಂತಿಯರ ಎದೆ ಹಾಲು ಮಗುವಿಗೆ ಅಮೃತವಿದ್ದಂತೆ. ಆದರೆ ಇದು ಮಗುವಿಗೆ ಮಾತ್ರವಲ್ಲ ಕೆಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಕೂಡ ಇದನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣ ಕಣ್ಣಿನ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಕಣ್ಣಿನಲ್ಲಿ ಬೇನೆ ಅಥವಾ ನೋವು, ಕುರು, ಉರಿ, ಕಣ್ಣು ಬಿಡಲು ಸಾಧ್ಯವಾಗದಿರುವುದು, ಕಣ್ಣು ಕೆಂಪಗಾಗುವುದು, ಅಲ್ಲದೆ ಕಣ್ಣಿಗೆ ಬಿದ್ದ ಕಸ ಹೀಗೆ ಕಣ್ಣಿಗೆ ಸಂಬಂಧಿಸಿದ ನಾನಾ ರೀತಿಯ ಸಮಸ್ಯೆಗಳನ್ನು ತಡೆಯಲು, ಜೊತೆಗೆ ಕಣ್ಣಿಗೆ ಮರದ ವಿಷಕಾರಿ ಸೊನೆ (ಸಸ್ಯಕ್ಷೀರ, ಮರದ ಹಾಲು) ಬಿದ್ದಾಗ ತಕ್ಷಣ ತಾಯಿಯ ಎದೆ ಹಾಲನ್ನು ಹನಿ ಹನಿಯಾಗಿ ಕಣ್ಣಿಗೆ ಬಿಡುವುದರಿಂದ ಈ ತರನಾದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸುಮಾರು ಐದು ಅಥವಾ ಆರು ಹನಿಯನ್ನು ಕಣ್ಣಿಗೆ ಹಾಕುವುದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮನೆಮದ್ದನ್ನು ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ. ಇದನ್ನು ಮಾಡಿದ ಮೇಲೂ ಕಣ್ಣು ನೋವು ಅಥವಾ ಉರಿ ಕಡಿಮೆ ಆಗದಿದ್ದರೆ ನೀವು ವೈದ್ಯರ ಭೇಟಿ ಮಾಡುವುದು ಒಳ್ಳೆಯದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ