ಆರೋಗ್ಯಕರ ಕೂದಲ ಬೆಳವಣಿಗೆಗೆ ಈ 9 ನೈಸರ್ಗಿಕ ತೈಲಗಳು ಹೇಗೆ ಸಹಾಯ ಮಾಡಲಿದೆ? ಈ ಬಗ್ಗೆ ಇಲ್ಲಿದೆ ಮಾಹಿತಿ

ಕೂದಲು ಉದುರುವುದು ಮಹಿಳೆಯರಲ್ಲಿ, ಪುರುಷರಲ್ಲಿ ಸಾಮಾನ್ಯ ವಿದ್ಯಮಾನ. ಆದರೆ ಕೂದಲನ್ನು ಮತ್ತೆ ಬೆಳೆಸಲು ಸಹಾಯ ಮಾಡುವ ಹಲವಾರು ತೈಲಗಳು ಲಭ್ಯವಿದೆ. ಇದು ಕೂದಲು ಬೆಳೆಯುವುದು ಮಾತ್ರವಲ್ಲದೆ ಕೂದಲು ಉದುರದೆ ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ಕೂದಲನ್ನು ಮತ್ತೆ ಬೆಳೆಸಲು ಸಹಾಯ ಮಾಡುವ ಎಣ್ಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆರೋಗ್ಯಕರ ಕೂದಲ ಬೆಳವಣಿಗೆಗೆ ಈ 9 ನೈಸರ್ಗಿಕ ತೈಲಗಳು ಹೇಗೆ ಸಹಾಯ ಮಾಡಲಿದೆ? ಈ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 18, 2023 | 2:31 PM

ಕೂದಲು ಉದುರುವಿಕೆ ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಜೀವನಶೈಲಿಯಲ್ಲಿ ಬದಲಾವಣೆ, ತಿನ್ನುವ ಮತ್ತು ಮಲಗುವ ಅಭ್ಯಾಸದಲ್ಲಿ ಬದಲಾವಣೆ, ದೇಹದಲ್ಲಿ ನೀರಿನ ಕೊರತೆ ಇತ್ಯಾದಿ ಕಾರಣವಾಗಿರಬಹುದು. ಇದರ ಹೊರತಾಗಿ ಜನರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಲು ಕೆಲವು ಸಾಮಾನ್ಯ ಕಾರಣಗಳಿವೆ. ಅಲ್ಲದೆ ಕೆಲವು ಸಂದರ್ಭಗಳಲ್ಲಿ ಕೂದಲು ಉದುರುವುದು ಸಹ ಆನುವಂಶಿಕವಾಗಿದೆ. ಆದರೆ ನಿಮ್ಮ ಕೂದಲನ್ನು ಮತ್ತೆ ಬೆಳೆಸಲು ಸಹಾಯ ಮಾಡುವ ಅಥವಾ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುವ ಹಲವಾರು ತೈಲಗಳು ಲಭ್ಯವಿದೆ. ಈ ಕೂದಲನ್ನು ಉಳಿಸುವ ಎಣ್ಣೆಗಳು ಯಾವುವು? ಹೇಗೆ ಬಳಸುವುದು? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.

ಹರಳೆಣ್ಣೆ; ವಿಟಮಿನ್ ಇ, ಪ್ರೋಟೀನ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹರಳೆಣ್ಣೆ ಕೂದಲಿಗೆ ಜೀವ ನೀಡುವ ಅದ್ಭುತ ಶಕ್ತಿ ಹೊಂದಿದೆ. ಇದು ಕೂದಲನ್ನು ಮೃದುಗೊಳಿಸುವುದರ ಜೊತೆಗೆ ಕೂದಲಿಗೆ ಹೊಳಪನ್ನು ನೀಡಲು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರ ಜೊತೆ ಹರಳೆಣ್ಣೆಯ ಉತ್ತಮ ಪ್ರಯೋಜನವೆಂದರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದೇ ಕೂದಲಿನ ಬೆಳವಣಿಗೆಗೆ ಅಗತ್ಯವಾಗಿದೆ. ಈ ಎಣ್ಣೆ ಶುಷ್ಕ ಮತ್ತು ಚಪ್ಪಟೆಯ ನೆತ್ತಿಯ ಮೇಲೆ ಉತ್ತಮವಾಗಿದ್ದು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ.

ತೆಂಗಿನೆಣ್ಣೆ ;ತೆಂಗಿನ ಎಣ್ಣೆ ಮತ್ತೊಂದು ಭಾರತೀಯ ತೈಲವಾಗಿದ್ದು, ಇದು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲನ್ನು ಬೇರುಗಳಿಂದ ಪೋಷಿಸುತ್ತದೆ. ಅಲ್ಲದೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ, ತೆಂಗಿನ ಎಣ್ಣೆ ನಿಮ್ಮ ಕೂದಲನ್ನು ಮೃದುವಾಗಿ ಮತ್ತು ಹೊಳಪಿನಿಂದ ಇರಿಸುತ್ತದೆ ಮತ್ತು ಬಿಸಿಲಿನ ಶಾಖದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚುವ ಮೊದಲು ನೀವು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಬಹುದು. ಇದನ್ನು ಕರಿಬೇವಿನ ಎಲೆಗಳೊಂದಿಗೆ ಸಹ ಬಳಸಬಹುದು.

ಟೀ ಟ್ರೀ ಆಯಿಲ್: ಟೀ ಟ್ರೀ ಆಯಿಲ್ ಕೂದಲು ಬೆಳವಣಿಗೆಗೆ ಪರಿಣಾಮಕಾರಿ ತೈಲವಾಗಿದೆ. ಇದು ಶುಷ್ಕತೆ ಮತ್ತು ತಲೆಹೊಟ್ಟು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಜೊತೆಗೆ ನೆತ್ತಿಯು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಕೂದಲಿನ ಬೆಳವಣಿಗೆ ಮತ್ತು ದಪ್ಪವಾಗಿ ಬರಲು ಬಯಸುವವರಿಗೆ ಅತ್ಯುತ್ತಮ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಬೇರೆ ತೈಲದ ಜೊತೆ ಬೆರೆಸಿ ಕೂಡ ಹಚ್ಚಬಹುದು.

ಬ್ರಿಂಗರಾಜ್ ಎಣ್ಣೆ: ಬ್ರಿಂಗರಾಜ್ ಗಿಡದಿಂದ ತೆಗೆದ ಈ ತೈಲವು ಕೂದಲಿನ ಬುಡದ ವರೆಗೂ ಹೋಗಿ ಆರೈಕೆ ಮಾಡುವುದರ ಜೊತೆಗೆ ಮತ್ತೆ ಕೂದಲು ಹುಟ್ಟಲು ಸಹಾಯ ಮಾಡುತ್ತದೆ. ಮತ್ತು ಹುಟ್ಟಿದ ಹೊಸ ಕೂದಲು ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ಈ ತೈಲ ನಿಮ್ಮ ನೆತ್ತಿಯನ್ನು ಪೋಷಿಸಲು ಉತಮವಾಗಿದ್ದು ಬೇರೆ ಬೇರೆ ಗಿಡಮೂಲಿಕೆ ಬಳಸಿಕೊಂಡು ನೀವೇ ಮನೆಯಲ್ಲಿ ತೈಲ ತಯಾರು ಮಾಡಿಕೊಳ್ಳಬಹುದಾಗಿದೆ.

ಈರುಳ್ಳಿ ಎಣ್ಣೆ: ಈರುಳ್ಳಿ ಎಣ್ಣೆ ಕೂದಲು ಬೆಳೆಯಲು ಸಹಾಯ ಮಾಡುವ ಮತ್ತೊಂದು ಎಣ್ಣೆಯಾಗಿದೆ.ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರಿಂದ ಎಣ್ಣೆಯನ್ನು ತಯಾರು ಮಾಡಲಾಗುತ್ತದೆ. ಇದು ನಿಮ್ಮ ನೆತ್ತಿಯನ್ನು ಸ್ವಚ್ಛ ಗೊಳಿಸುವುದರ ಜೊತೆಗೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.

ಅರ್ಗಾನ್ ಎಣ್ಣೆ: ಅರ್ಗಾನ್ ತೈಲವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ಒಡೆದ ತುದಿಗಳನ್ನು ಸರಿಪಡಿಸುತ್ತದೆ ಮತ್ತು ಶಾಖದ ಹಾನಿಯಿಂದ ರಕ್ಷಿಸುತ್ತದೆ. ಇದನ್ನು ಮೊರಾಕೊದ ದ್ರವ ಚಿನ್ನ ಎಂದೂ ಕರೆಯಲಾಗುತ್ತದೆ ಮತ್ತು ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ತುಂಬಿದೆ; ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಕನಿಷ್ಠ ಸಂಸ್ಕರಣೆಗೆ ಒಳಪಡಿಸು ವುದರಿಂದ, ಇದು ಕೂದಲಿನ ಬೆಳವಣಿಗೆಗೆ ಅತ್ಯುತ್ತಮ ಎಣ್ಣೆಯಾಗಿದೆ.

ಇದನ್ನೂ ಓದಿ: Tips for Healthy Hair:ನಿಮ್ಮ ಕೂದಲು ಆರೋಗ್ಯವಾಗಿರಲು ಇಲ್ಲಿದೆ ಮನೆಮದ್ದು

ಆಲಿವ್ ಎಣ್ಣೆ: ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳು ಮತ್ತು ಒಲಿಕ್ ಆಮ್ಲದ ಸಂಯೋಜನೆ ಆಲಿವ್ ಎಣ್ಣೆಯಲ್ಲಿದೆ. ಇದು ನೆತ್ತಿಯಳ್ಳಿ ಸತ್ತು ಹೋದ ಕೂದಲಿನ ಜಾಗದಲ್ಲಿ ಮತ್ತೆ ಕೂದಲು ಹುಟ್ಟಲು ಸಹಾಯ ಮಾಡಿ ಬೇರುಗಳನ್ನು ಪೋಷಿಸುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ. ಇದನ್ನು ನಿಂಬೆ ರಸದೊಂದಿಗೆ ಸೇರಿಸಿ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ. ಆಲಿವ್ ಎಣ್ಣೆಯನ್ನು ಒಣಗಿದ ಅಥವಾ ಒದ್ದೆಯಾದ ಕೂದಲಿಗೆ ಹಚ್ಚಬಹುದು. ಉತ್ತಮ ಫಲಿತಾಂಶಕ್ಕೆ ಹಚ್ಚುವ ಮೊದಲು ಸ್ವಲ್ಪ ಬೆಚ್ಚಗಾಗಿಸಿ. ಅಥವಾ ನಿಮ್ಮ ಕೂದಲನ್ನು ತೊಳೆಯುವ ಮೊದಲು ಆಲಿವ್ ಎಣ್ಣೆಯನ್ನು ಹಚ್ಚಿದರೆ, ನಿಮ್ಮ ಕೂದಲಿನ ಸುತ್ತಲೂ ಬೆಚ್ಚಗಿನ ಟವೆಲ್ ಅನ್ನು 20 ರಿಂದ 30 ನಿಮಿಷಗಳ ಕಾಲ ಸುತ್ತಿ ತೊಳೆಯಿರಿ.

ರೋಸ್ಮರಿ ಎಣ್ಣೆ: ರೋಸ್ಮರಿ ಎಣ್ಣೆ ನಿಮ್ಮ ಕೂದಲನ್ನು ದಪ್ಪ ಮತ್ತು ಸುವಾಸನೆಯಿಂದ ಕೂಡಿರಲು ಸಹಾಯ ಮಾಡುತ್ತದೆ ಮತ್ತು ಬೂದು ಕೂದಲು ಹುಟ್ಟಿಕೊಳ್ಳುವುದನ್ನು ತಡೆಯುತ್ತದೆ. ಅಲ್ಲದೆ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಆ ಮೂಲಕ ಕೂದಲು ಮತ್ತೆ ಹುಟ್ಟಲು ಉತ್ತೇಜಿಸುತ್ತದೆ. ಟೀ ಟ್ರೀ ಆಯಿಲ್, ರೋಸ್ಮರಿ ಎಣ್ಣೆಯನ್ನು ಸಹ ಇದರ ಜೊತೆ ಬಳಸಬಹುದು. ಸ್ವಲ್ಪ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಮತ್ತು ತಾಜಾ ಅಥವಾ ಒಣಗಿದ ರೋಸ್ಮರಿ ಎಲೆಗಳನ್ನು ಸೇರಿಸುವ ಮೂಲಕ ನೀವು ಈ ಎಣ್ಣೆಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಣ್ಣಗಾಗಲು ಬಿಡಿ, ನಂತರ ಸೋಸಿ, ಮತ್ತು ಎಣ್ಣೆಯನ್ನು ಸಂಗ್ರಹಿಸಿಡಬಹುದು.

ಆಮ್ಲಾ ಎಣ್ಣೆ: ಆಮ್ಲಾ ಎಣ್ಣೆ ಮತ್ತೊಂದು ವಿಶ್ವಾಸಾರ್ಹ ಹೇರ್ ಟಾನಿಕ್ ಆಗಿದ್ದು, ಇದು ಸಾಕಷ್ಟು ವಿಟಮಿನ್ ಸಿ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಎಲ್ಲಾ ರೀತಿಯ ಕೂದಲಿಗೂ ಸಹಾಯಕವಾಗಿದೆ. ಆದರೆ ಇದು ವಿಶೇಷವಾಗಿ ಶುಷ್ಕ ಮತ್ತು ಹಾನಿಗೊಳಗಾದ ಕೂದಲಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಕೂದಲನ್ನು ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಯ ಉರಿಯೂತವನ್ನು ಶಮನಗೊಳಿಸುತ್ತದೆ, ಕೂದಲನ್ನು ಹೈಡ್ರೇಟ್ ಮಾಡುವ ಮೂಲಕ ರಕ್ಷಿಸುತ್ತದೆ. ಆಮ್ಲಾ ಎಣ್ಣೆಯಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸಲು ನಿಮ್ಮ ನೆತ್ತಿಯ ಮೇಲೆ ಚೆನ್ನಾಗಿ ಮಸಾಜ್ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:28 pm, Tue, 18 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್