Blood Pressure: ರಕ್ತದೊತ್ತಡ ಕಡಿಮೆ ಮಾಡಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು

| Updated By: ನಯನಾ ರಾಜೀವ್

Updated on: May 28, 2022 | 3:55 PM

High Blood Pressure: ರಕ್ತದೊತ್ತಡ (Blood Pressure)ಎಂಬುದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ರಕ್ತದೊತ್ತಡವು ಹೃದಯ ಸಂಬಂಧಿ ಕಾಯಿಲೆಗಳನ್ನುಂಟು ಮಾಡಬಹುದು.

Blood Pressure: ರಕ್ತದೊತ್ತಡ ಕಡಿಮೆ ಮಾಡಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು
High Blood Pressure
Follow us on

ರಕ್ತದೊತ್ತಡ (Blood Pressure)ಎಂಬುದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ರಕ್ತದೊತ್ತಡವು ಹೃದಯ ಸಂಬಂಧಿ ಕಾಯಿಲೆಗಳನ್ನುಂಟು ಮಾಡಬಹುದು. ರಕ್ತದ ಒತ್ತಡ ಅಥವಾ ಸ್ಥಿತಿಯು ದೇಹದಲ್ಲಿ ಸಮತೋಲನದಿಂದ ಕೂಡಿರಬೇಕು. ಇಲ್ಲವಾದರೆ ಅಧಿಕ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಒಳಗಾಗಬೇಕಾಗುವುದು. ಸಾಮಾನ್ಯವಾಗಿ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವರು.

ರಕ್ತದೊತ್ತಡವನ್ನು ಕಡಿಮೆ ಮಾಡಲು ಇಲ್ಲಿವೆ ಸಲಹೆಗಳು
ತೂಕ ಇಳಿಕೆ: ತೂಕದ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಒಂದೊಮ್ಮೆ ನೀವು ಅಧಿಕ ತೂಕವಿದ್ದರೆ ತೂಕವನ್ನು ಇಳಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಅಧಿಕ ತೂಕವು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಎಣ್ಣೆ ಪದಾರ್ಥಗಳಿಂದ ದೂರವಿರಿ: ರುಚಿಕರವಾದ ಚಾಟ್ಸ್​ಗಳು, ಕಚೋರಿ, ಸಮೋಸ, ಪಿಜ್ಜಾ, ಟೊಮೆಟೋ ಸಾಸ್ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಂದ ದೂರವಿರಿ. ಹೆಚ್ಚು ಉಪ್ಪು ಬಳಸಿರುವ ಪದಾರ್ಥಗಳ ಸೇವನೆ ಬೇಡ.

ಒಂದೆಡೆ ಕೂರದಿರಿ: ಒಂದೊಮ್ಮೆ ನೀವು ವರ್ಕ್ ಫ್ರಂ ಹೋಂನಲ್ಲಿದ್ದರೆ ಕುಳಿತಲ್ಲೇ ಕುಳಿತಿರಬೇಡಿ, ಕೆಲಸದ ಬಿಡುವಿನಲ್ಲಿ ಓಡಾಡಿ.

ಮದ್ಯಪಾನ ಕಡಿಮೆ ಮಾಡಿ: ಮದ್ಯಪಾನ ಮಾಡದಿರುವುದು ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದು ಮದ್ಯಪಾನ ಮಾಡಿದರೆ ಕೇವಲ ರಕ್ತದೊತ್ತಡ ಮಾತ್ರಬಲ್ಲ ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಂದಲೂ ದೂರವಿರಬಹುದು.

ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ: ಪ್ರಾಣಾಯಾಮ, ಧ್ಯಾನ, ಉಸಿರಾಟದ ಕೆಲವು ವ್ಯಾಯಾಮಗಳನ್ನು ಮಾಡಿ.

ಕಡಿಮೆ ರಕ್ತದೊತ್ತಡವೂ ಅಪಾಯಕಾರಿ
ಆಗಾಗ ರಕ್ತದೊತ್ತಡ ಹೇಗಿದೆ? ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಇಲ್ಲವಾದರೆ ಅನಿರೀಕ್ಷಿತವಾಗಿ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು. ರಕ್ತದೊತ್ತಡದ ಪ್ರಭಾವವು ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ಬದಲಾವಣೆಯನ್ನು ಅನುಭವಿಸಬೇಕಾಗುವುದು. ಸಾಮಾನ್ಯ ರಕ್ತದೊತ್ತಡದ ಪರೀಕ್ಷೆಯಲ್ಲಿ ಡಯಾಸ್ಟೋಲಿಕ್ ಒತ್ತಡವು 95 ಎಮ್ ಎಮ್ ಹೆಚ್ ಜಿ ಅನ್ನು ಮೀರುವುದಿಲ್ಲ.
ಅಂತೆಯೇ ಸಿಸ್ಟೋಲಿಕ್ ಒತ್ತಡವು 140 ಎಮ್ ಎಮ್ ಹೆಚ್ ಜಿ ಮೀರಿರುವುದಿಲ್ಲ. ಡಯಾಸ್ಟೋಲಿಕ್ ಮತ್ತು ಸಿಸ್ಟೋಲಿಕ್ ಎರಡರ ಪ್ರಮಾಣವು ಕಡಿಮೆ ಆಗಿದ್ದರೆ ರಕ್ತದೊತ್ತಡವು ತುಂಬಾ ಕಡಿಮೆಯಾಗುವುದು. ಮಹಿಳೆಯರಿಗೆ ಇದು 100-60 ಕ್ಕಿಂತ ಕಡಿಮೆ ಇರುವುದು. ಪುರುಷರಲ್ಲಿ 110-70ಕ್ಕಿಂತ ಕಡಿಮೆ ಇರುವುದರ ಪ್ರಮಾಣವನ್ನು ಅನುವಾದಿಸಲಾಗುತ್ತದೆ.

ಸಂಭವನೀಯ ಕಾರಣಗಳು
ರಕ್ತದೊತ್ತಡವನ್ನು ಸಾಮಾನ್ಯವಾಗಿ ಬಿಪಿ ಪರೀಕ್ಷೆ ಮಾಡಿದಾಗ ತಿಳಿದುಬರುವ ಸಂಗತಿ. ರಕ್ತದೊತ್ತಡವನ್ನು ಅಳೆಯುವಾಗ ಮೊದಲು ಅಧಿಕ ರಕ್ತದೊತ್ತಡವನ್ನು ನಂತರ ಕಡಿಮೆ ರಕ್ತದೊತ್ತಡವನ್ನು ಅಳೆಯುತ್ತಾರೆ. ಅಧಿಕ ರಕ್ತದೊತ್ತಡದ ಸಮಸ್ಯೆಯಂತೆ ಕಡಿಮೆ ರಕ್ತದೊತ್ತಡ ಉಂಟಾದಾಗ ಅನಿರೀಕ್ಷಿತ ರೀತಿಯಲ್ಲಿ ಸಮಸ್ಯೆ ಉಂಟಾಗುವುದು. ಈ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ್ಯ ತೋರದೆ ಚಿಕಿತ್ಸೆ ಅಥವಾ ಆರೈಕೆಯನ್ನು ಮಾಡಿಕೊಳ್ಳುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ