Cardiac Arrest: ಈ ಆಹಾರಗಳು ಹೃದಯ ಸ್ತಂಭನ ಸಂಭವಿಸಲು ಕಾರಣವಾಗಬಹುದು

| Updated By: Pavitra Bhat Jigalemane

Updated on: Feb 26, 2022 | 1:12 PM

ತಂಬಾಕು, ಸಿಗರೇಟ್​, ಮದ್ಯಪಾನ ಸೇವನೆ ಹೃದಯ ಸ್ತಂಭನಕ್ಕೆ ನೇರವಾಗಿ ಕಾರಣವಾಗುತ್ತದೆ. ನಶೆ ತರುವ ಎಲ್ಲಾ ಪದಾರ್ಥಗಳು ಹೃದಯಕ್ಕೆ ಹಾನಿಯುಂಟು ಮಾಡುತ್ತದೆ.

Cardiac Arrest: ಈ ಆಹಾರಗಳು ಹೃದಯ ಸ್ತಂಭನ ಸಂಭವಿಸಲು ಕಾರಣವಾಗಬಹುದು
ಸಾಂಕೇತಿಕ ಚಿತ್ರ
Follow us on

ಕಳೆದ ಕೆಲವು ತಿಂಗಳ ಹಿಂದೆ ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್​ ರಾಜಕುಮಾರ್​ ಏಕಾಏಕಿ ಹೃದಯ ಸ್ತಂಭನದಿಂದ ನಿಧನರಾದರು. ಆ ಬಳಿಕ ಬಾಲಿವುಡ್​ ನಟ ಸಿದ್ಧಾರ್ಥ ಶುಕ್ಲ ಕೂಡ ಹಠಾತ್​ ಹೃದಯ ಸ್ತಂಭನದಿಂದ ಸಾವನ್ನಪ್ಪಿದರು.  ವ್ಯಾಯಾಮ, ಫಿಟ್​ನೆಸ್​ ಎಲ್ಲವನ್ನೂ ಕ್ರಮಬದ್ಧವಾಗಿಯೇ ಮಾಡುತ್ತಿದ್ದರೂ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಇದು ಹಲವರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಕ್ತದ ಹರಿವು ಹೃದಯ ಸ್ನಾಯುಗಳಿಗೆ ಹೆಚ್ಚು ಆಮ್ಲಜನಕವನ್ನು ಪೂರೈಸಿದಾಗ ಹೃದಯ ಸ್ತಂಭನ ಸಂಭವಿಸುತ್ತದೆ. ಹೃದಯ ಸ್ತಂಭನ ಮೊದಲು ತೀವ್ರ ಎದೆನೋವು, ಸುಸ್ತು, ವಾಕರಿಕೆ ಕಾಣಸಿಕೊಳ್ಳುತ್ತದೆ. ಕೆಲವೊಮ್ಮೆ ಮುನ್ಸೂಚನೆ ನೀಡದೆ ಹೃದಯ ಸ್ತಂಭನ ಸಂಭವಿಸುತ್ತದೆ. ಇದಕ್ಕೆ ದಿನನಿತ್ಯದ ಆಹಾರ ಶೈಲಿ, ದಿನಚರಿ, ಜೀವನಶೈಲಿ ನೇರವಾಗಿ ಪರಿಣಾಮ ಬಿರುತ್ತದೆ.  ಈ ಕುರಿತು ಮಸಿನಾ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ ರುಚಿತ್ ಶಾ ಮಾಹಿತಿ ನೀಡಿದ್ದಾರೆ. ಈ ಕುರಿತು ಹಿಂದೂಸ್ತಾನ್​ ಟೈಮ್ಸ್ ವರದಿ ಮಾಡಿದೆ. ಜೀವನಶೈಲಿಯಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಯಾವ ಆಹಾರಗಳನ್ನು ತ್ಯಜಿಸಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ ಇಲ್ಲಿದೆ ನೋಡಿ ಮಾಹಿತಿ

ಆಲ್ಕೋಹಾಲ್​ ಮತ್ತು ಡ್ರಗ್ಸ್​ ಸೇವನೆ:
ತಂಬಾಕು, ಸಿಗರೇಟ್​, ಮದ್ಯಪಾನ ಸೇವನೆ ಹೃದಯ ಸ್ತಂಭನಕ್ಕೆ ನೇರವಾಗಿ ಕಾರಣವಾಗುತ್ತದೆ. ನಶೆ ತರುವ ಎಲ್ಲಾ ಪದಾರ್ಥಗಳು ಹೃದಯಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಈ ರೀತಿಯ ಅಭ್ಯಾಸಗಳಿದ್ದರೆ ನಿರ್ಭಂದಿಸುವುದೇ ಒಳಿತು ಎನ್ನುತ್ತಾರೆ ವೈದ್ಯರು. ಹೃದಯ ಸ್ತಂಭನಕ್ಕೆ ಈ ಅಭ್ಯಾಸಗಳೂ ಕೂಡ ಕಾರಣವಾಗಿರುತ್ತದೆ.

ನಿಕೋಟಿನ್​ಯುಕ್ತ ಪಾನೀಯಗಳ ಸೇವನೆ:
ಕೆಫಿನ್​ ಅಂಶಗಳಿರುವ ಪಾನೀಯಗಳನ್ನು ಸೇವಿಸುವುದರಿಂದ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ. ಕಾಫಿ, ಟೀ ಅತಿಯಾದ ಸೇವನೆಯಿಂದಲೂ ಹೃದಯಕ್ಕೆ ಹಾನಿಯಾಗುತ್ತದೆ. ಇದರಿಂದ ರಕ್ತಪರಿಚಲನೆಯಲ್ಲಿಯೂ ವ್ಯತ್ಯಾಸವಾಗಿ ಹೃದಯ ಸ್ತಂಭನ ಉಂಟಾಗುವ ಸಂಭವ ಹೆಚ್ಚು ಎಂದು ಹೇಳಲಾಗುತ್ತದೆ.

ಹೆಚ್ಚು ಸಂಸ್ಕರಿಸಿದ ಸಕ್ಕರೆಯ ಸೇವನೆ:
ಜ್ಯೂಸ್​, ಕೆಲವು ಡೈರಿ ಪದಾರ್ಥಗಳಲ್ಲಿ ಹೆ್ಚ್ಚು ಸಕ್ಕರೆ ಅಂಶವಿರುತ್ತದೆ. ಇದರ ನಿರಂತರ ಸೇವನೆಯಿಂದ ದೇಹಕ್ಕೆ ಹಾನಿಯುಂಟು ಮಾಡುತ್ತದೆ.  ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ಹೀಗಾಗಿ ಹೆಚ್ಚು ಸಂಸ್ಕರಿಸಿದ ಸಕ್ಕರೆಯುಳ್ಳ ಆಹಾರ ಪದಾರ್ಥಗಳನ್ನು ತ್ಯಜಿಸುವುದೇ ಉತ್ತಮ.

ಪ್ಯಾಕೇಜ್​ ತಿಂಡಿಗಳು:
ಹಲವು ದಿನಗಳ ಕಾಲ ಪ್ಲಾಸ್ಟಿಕ್​ನಲ್ಲಿ ಕವರ್​ ಮಾಡಿದ, ಬ್ರೆಡ್​, ಸ್ವೀಟ್ಸ್​ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅದೇ ರೀತಿ ಪಿಜ್ಜಾ, ಬರ್ಗರ್​ಗಳಂತಹ ಜಂಕ್​ ಫುಡ್​ಗಳೂ ಕೂಡ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ. ಹೀಗಾಗಿ ಅವುಗಳ ಸೇವನೆಯ ಮುನ್ನ ಎಚ್ಚರಿಕೆವಹಿಸಿ.

ಹೆಚ್ಚು ಕೊಲೆಸ್ಟ್ರಾಲ್​ ಇರುವ ಆಹಾರಗಳು:
ಕೊಲೆಸ್ಟ್ರಾಲ್​ ಇರುವ ಆಹಾರಗಳನ್ನು ಸೇವಿಸಿದರೆ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಇದು ರಕ್ತ ಪರಿಚಲನೆಯನ್ನು ಅಸಮತೋಲನಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಹೆಚ್ಚು ಕೊಲೆಸ್ಟ್ರಾಲ್​ ಇರುವ ಡೈರಿ ಉತ್ಪನ್ನಗಳು, ಕರಿದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.

ಇದನ್ನೂ ಓದಿ:

ಗರ್ಭಧಾರಣೆಗೂ ಮುನ್ನ ಈ ರೀತಿ ಜೀವನಶೈಲಿಯನ್ನು ರೂಢಿಸಿಕೊಳ್ಳಿ