ಹಾಲಿನ ಉತ್ಪನ್ನಗಳಷ್ಟೇ ಅಲ್ಲ ಗಟ್ಟಿಯಾದ ಮೂಳೆಗಳಿಗೆ ಈ ಆಹಾರಗಳೂ ಸಹಾಯಕ

ನಮ್ಮ ಮೂಳೆಗಳು ಸದೃಢವಾಗಿರಲು ಡೈರಿ ಉತ್ಪನ್ನಗಳು ಬಹಳ ಸಹಾಯ ಮಾಡುತ್ತವೆ. ಮೂಳೆಗಳ ಬೆಳವಣಿಗೆಗೆ ಸಹಾಯಕವಾದ ಕ್ಯಾಲ್ಸಿಯಂ ಯಥೇಚ್ಛವಾಗಿರುವುದರಿಂದ ಡೈರಿ ಉತ್ಪನ್ನಗಳು ಮೂಳೆಗಳ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಹಾಲಿನ ಉತ್ಪನ್ನಗಳಷ್ಟೇ ಅಲ್ಲದೆ ಇತರೆ ಆಹಾರಗಳು ಕೂಡ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಹಾಲಿನ ಉತ್ಪನ್ನಗಳಷ್ಟೇ ಅಲ್ಲ ಗಟ್ಟಿಯಾದ ಮೂಳೆಗಳಿಗೆ ಈ ಆಹಾರಗಳೂ ಸಹಾಯಕ
ಚಿಯಾ ಬೀಜಗಳು
Follow us
ಸುಷ್ಮಾ ಚಕ್ರೆ
|

Updated on: Apr 15, 2024 | 4:11 PM

ನಮ್ಮ ದೇಹದ ಮೂಳೆಗಳು ಸದೃಢವಾಗಿರಬೇಕೆಂದರೆ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರಬೇಕು. ನೈಸರ್ಗಿಕವಾಗಿ ಕ್ಯಾಲ್ಸಿಯಂ ಅಂಶವನ್ನು ಪಡೆಯಲು ಸಾಮಾನ್ಯವಾಗಿ ಡೈರಿ ಉತ್ಪನ್ನಗಳನ್ನು ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಈ ಡೈರಿ ಉತ್ಪನ್ನಗಳಿಂದ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಪಡೆಯಬಹುದು. ಆದರೆ, ಕೇವಲ ಡೈರಿ ಉತ್ಪನ್ನಗಳು ಮಾತ್ರವಲ್ಲದೆ ಇನ್ನೂ ಕೆಲವು ಆಹಾರಗಳು ಕೂಡ ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ಆ ಕುರಿತು ಮಾಹಿತಿ ಇಲ್ಲಿದೆ.

ಕಿಡ್ನಿ ಬೀನ್ಸ್:

ಕಿಡ್ನಿ ಬೀನ್ಸ್ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಂಶದಿಂದ ತುಂಬಿರುತ್ತದೆ. ಅದು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಖನಿಜಗಳು ನಿಮ್ಮ ಮೂಳೆ ರಚನೆಯನ್ನು ಬೆಂಬಲಿಸುತ್ತದೆ, ಮೂಳೆ ಸಾಂದ್ರತೆಯನ್ನು ಬೆಂಬಲಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ

ಇದನ್ನೂ ಓದಿ: Summer Diet: ಬೇಸಿಗೆಯಲ್ಲಿ ಮಧುಮೇಹ ನಿಯಂತ್ರಿಸುವ 8 ಪಾನೀಯಗಳಿವು

ಚಿಯಾ ಬೀಜಗಳು:

ಚಿಯಾ ಬೀಜಗಳು ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಸೇರಿದಂತೆ ಮೂಳೆಯ ಆರೋಗ್ಯಕ್ಕೆ ಪ್ರಮುಖವಾದ ಹಲವಾರು ಪೋಷಕಾಂಶಗಳನ್ನು ಹೊಂದಿವೆ. ಒಂದು ಔನ್ಸ್ ಚಿಯಾ ಬೀಜಗಳು ನಿಮ್ಮ ಶಿಫಾರಸು ಮಾಡಿದ ದೈನಂದಿನ ಕ್ಯಾಲ್ಸಿಯಂನ ಶೇ. 18ರಷ್ಟನ್ನು ಒಳಗೊಂಡಿದೆ. ಇದು ಆರೋಗ್ಯಕರ ಮೂಳೆ, ಸ್ನಾಯು ಮತ್ತು ನರಗಳ ಕಾರ್ಯನಿರ್ವಹಣೆಗೆ ಪ್ರಮುಖವಾಗಿದೆ.

ಸೊಪ್ಪು:

ಪಾಲಕ್ ಸೊಪ್ಪು ಪ್ರತಿ ಕಪ್‌ಗೆ 250 ಮಿಲಿಗ್ರಾಂ ಕ್ಯಾಲ್ಸಿಯಂನಿಂದ ತುಂಬಿರುತ್ತದೆ. ಇದು ನಿಮ್ಮ ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಅವಶ್ಯಕವಾಗಿದೆ. ಅಲ್ಲದೆ, ಪಾಲಕದಿಂದ ಉತ್ತಮವಾದುದನ್ನು ಪಡೆಯಲು, ನಿಮ್ಮ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಅದರೊಂದಿಗೆ ಸಂಯೋಜಿಸಲು ವೈದ್ಯರು ಸಲಹೆ ನೀಡುತ್ತಾರೆ.

ಸೂರ್ಯಕಾಂತಿ ಬೀಜಗಳು:

ಸೂರ್ಯಕಾಂತಿ ಬೀಜಗಳು 100 ಗ್ರಾಂಗೆ 78 ಮಿಲಿಗ್ರಾಂಗಳಷ್ಟು ಪೋಷಕಾಂಶವನ್ನು ಹೊಂದಿರುವುದರಿಂದ ನಿಮ್ಮ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಿಸಲು ಪೌಷ್ಠಿಕಾಂಶದ ಮಾರ್ಗವಾಗಿದೆ. ಈ ರುಚಿಕರವಾದ ಬೀಜಗಳು ಮೂಳೆಯ ಆರೋಗ್ಯವನ್ನು ಬೆಂಬಲಿಸುವ ಪೌಷ್ಟಿಕ ವಿಧಾನವಾಗಿದೆ.

ಬೆಂಡೆಕಾಯಿ:

ಬೆಂಡೆಕಾಯಿ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ ಮತ್ತು ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಇವುಗಳು ಮೂಳೆಗಳನ್ನು ಬಲವಾಗಿ ಮತ್ತು ಗಟ್ಟಿಮುಟ್ಟಾಗಿ ಮಾಡುತ್ತದೆ. ಒಂದು ಕಪ್ ಬೇಯಿಸಿದ ಬೆಂಡೆಕಾಯಿಯು ನಿಮ್ಮ ದೈನಂದಿನ ಕ್ಯಾಲ್ಸಿಯಂನ ಸುಮಾರು 6 ಪ್ರತಿಶತವನ್ನು ಹೊಂದಿರುತ್ತದೆ.

ಇದನ್ನೂ ಓದಿ: ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದಾದ 9 ಸೂಪರ್‌ಫುಡ್‌ಗಳು ಇಲ್ಲಿವೆ

ಬೇಯಿಸಿದ ಮೊಟ್ಟೆಗಳು:

ಬೇಯಿಸಿದ ಮೊಟ್ಟೆಗಳು ಪ್ರೋಟೀನ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳ ಸಮೃದ್ಧ ಮೂಲವಾಗಿದ್ದು, ಮೂಳೆ ಮ್ಯಾಟ್ರಿಕ್ಸ್ ರಚನೆ ಮತ್ತು ನಿರ್ವಹಣೆಯಲ್ಲಿ ಪಾತ್ರವಹಿಸುತ್ತವೆ. ಅಲ್ಲದೆ, ಅವುಗಳು ವಿಟಮಿನ್ ಡಿಯಿಂದ ತುಂಬಿವೆ.

ಬ್ರೊಕೊಲಿ:

ಬ್ರೊಕೊಲಿಯು ವಿಟಮಿನ್ ಸಿ ಮತ್ತು ಕೆಯಿಂದ ಸಮೃದ್ಧವಾಗಿದೆ. ಇದು ಕಾಲಜನ್ ಅನ್ನು ಉತ್ಪಾದಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಮುಖ್ಯ ಪಾತ್ರವನ್ನು ಹೊಂದಿದೆ. ಆಸ್ಟಿಯೊಪೊರೋಸಿಸ್ ರೋಗಲಕ್ಷಣಗಳನ್ನು ನಿರ್ವಹಿಸಲು ಸಹ ಇದು ಒಳ್ಳೆಯದು.

ಕಿತ್ತಳೆ:

ಕಿತ್ತಳೆ ಹಣ್ಣಿನಲ್ಲಿ ಸುಮಾರು 55 ಮಿಲಿಗ್ರಾಂ ಕ್ಯಾಲ್ಸಿಯಂ ಅಥವಾ ನಿಮ್ಮ ದೈನಂದಿನ ಅವಶ್ಯಕತೆಯ ಶೇ. 6ರಷ್ಟು ಕ್ಯಾಲ್ಸಿಯಂ ಇರುತ್ತದೆ. ಬಲವಾದ ಮೂಳೆಗಳನ್ನು ನಿರ್ಮಿಸಲು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ತುಂಬಾ ಮುಖ್ಯವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!