Women Health: ಮಹಿಳೆಯರ ಆರೋಗ್ಯ ಕೆಡಲು ಈ ಕೆಲವು ಅಂಶಗಳು ಕಾರಣ
ಮಹಿಳೆಯರ ಆರೋಗ್ಯ ಯಾವ ಕೆಲವು ಅಂಶಗಳಿಂದ ಕೆಡುತ್ತಿದೆ ಎಂಬುದಕ್ಕೆ ಇಲ್ಲಿವೆ ಕೆಲವು ಕಾರಣಗಳು. ಇವುಗಳನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳುವ ಮೂಲಕ ಮಹಿಳೆಯರು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಮಹಿಳೆಯರು ಅತ್ಯಂತ ಸೂಕ್ಷ್ಮ ಮನಸ್ಸುಳ್ಳವರು. ಆಧುನಿಕ ಜೀವನಶೈಲಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗಿನ ಒತ್ತಡದ ಕೆಲಸ, ಚಿಂತೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸುತ್ತಿದೆ. ಹೀಗಿರುವಾಗ ಮಹಿಳೆಯರು ಹೆಚ್ಚು ಆರೋಗ್ಯದ ಕುರಿತಾಗಿ ಗಮನವಹಿಸಲೇಬೇಕು. ಮಹಿಳೆಯರ ಆರೋಗ್ಯ ಯಾವ ಕೆಲವು ಅಂಶಗಳಿಂದ ಕೆಡುತ್ತಿದೆ ಎಂಬುದಕ್ಕೆ ಇಲ್ಲಿವೆ ಕೆಲವು ಕಾರಣಗಳು. ಇವುಗಳನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳುವ ಮೂಲಕ ಮಹಿಳೆಯರು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಕೋಪ ಬೆಳಗ್ಗಿನಿಂದ ಸಂಜೆಯವರೆಗಿನ ಒತ್ತಡದ ಕೆಲಸ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಅವರ ಆರೋಗ್ಯವನ್ನು ಕೆಡಿಸುತ್ತಿದೆ. ಹೀಗಿರುವಾಗ ಹೆಚ್ಚು ಚಿಂತೆ ಮಾಡುವುದು, ಜತೆಗೆ ಸಿಟ್ಟಿಗೇಳುವುದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಒತ್ತಡವಿದ್ದಾಗ ಸಿಟ್ಟು ಬರುವುದು ಮಾಮೂಲಿ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ಒತ್ತಡದ ಕೆಲಸ ಬೆಳಲಗ್ಗೆ ಎದ್ದಾಗಿನಿಂದ ಮಹಿಳೆಯರು ಗಡಿಬಿಡಿಯಲ್ಲಿಯೇ ಕೆಲಸ ಮಾಡಬೇಕು. ಮಕ್ಕಳಿಂದ ಹಿಡಿದು ಮನೆಯಲ್ಲಿರುವ ವಯಸ್ಕರ ಜವಾಬ್ದಾರಿ ಅವಳದ್ದು. ಮನೆಗೆಲಸದ ಜತೆಗೆ ಮನೆಯವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ ತಾಳ್ಮೆಯಿಂದ ದಿನವಿಡೀ ದುಡಿಯುತ್ತಾಳೆ. ಹಾಗಿರುವಾಗ ಕೆಲಸದ ಒತ್ತಡ ಅವಳ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಇದರ ಕುರಿತಾಗಿ ಮಹಿಳೆ ಯೋಚಿಸಬೇಕು. ಜತೆಗೆ ಪ್ರತಿನಿತ್ಯ ವ್ಯಾಯಾಮ, ಧ್ಯಾನದ ಅಭ್ಯಾಸ ಮಾಡುವ ಮೂಲಕ ಮಾನಸಿಕ ಒತ್ತಡದಿಂದ ಹೊರ ಬರಬಹುದಾಗಿದೆ.
ವ್ಯಾಯಾಮದ ಕೊರತೆ ಮಹಿಳೆಯರು ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಅತ್ಯವಶ್ಯಕ. ಮಾನಸಿಕ ಅಥವಾ ದೈಹಿಕ ಒತ್ತಡದಿಂದ ಹೊರಬರಲು ಮಹಿಳೆಯರಿಗೆ ವ್ಯಾಯಾಮ ಮುಖ್ಯ. ಇದು ಆರೋಗ್ಯವನ್ನು ಸುಧಾರಿಸುವುದರ ಜತೆಗೆ ದಿನಪೂರ್ತಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಸಣ್ಣ ಪುಟ್ಟ ದೈಹಿಕ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ:
Women Health: ಗರ್ಭಿಣಿಯರಿಗೆ ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಹಿತವಲ್ಲ; ಏಕೆ ಗೊತ್ತಾ?
Women Health: ಒತ್ತಡ ಮತ್ತು ಆತಂಕದಿಂದ ದೂರವಾಗಲು ಮಹಿಳೆಯರಿಗೆ ಸಲಹೆಗಳು