ತಲೆ ಕೂದಲಿನ ಆರೈಕೆಗೆ ಇಲ್ಲಿದೆ ಮದ್ದು; ಕೇಶರಾಶಿಯ ಹೊಳಪು ಹೆಚ್ಚಿಸಲು ವೈದ್ಯರ ಸಲಹೆಗಳೇನು?

| Updated By: Skanda

Updated on: May 27, 2021 | 7:02 AM

ನಾನಿನ್ನೂ ಕಾಲೇಜಿಗೆ ಹೋಗುತ್ತಿದ್ದೇನೆ ಅಷ್ಟೇ, ಈಗಲೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ ಫ್ರೀ ಹೇರ್​ ಬಿಡಲಾಗುತ್ತಿಲ್ಲ. ಕೂದಲುಗಳು ಬಹುಬೇಗ ಸಿಕ್ಕಾಗಿ ಬಿಡುತ್ತವೆ ಏನೂ ಮಾಡಬೇಕು ಎಂಬುದು ಕಾಲೇಜು ಹುಡುಗಿಯರ ಚಿಂತೆ. ಹೀಗಿರುವಾಗ ಮನೆಮದ್ದಿನಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. 

ತಲೆ ಕೂದಲಿನ ಆರೈಕೆಗೆ ಇಲ್ಲಿದೆ ಮದ್ದು; ಕೇಶರಾಶಿಯ ಹೊಳಪು ಹೆಚ್ಚಿಸಲು ವೈದ್ಯರ ಸಲಹೆಗಳೇನು?
ತಲೆ ಕೂದಲಿನ ಆರೈಕೆ (ಪ್ರಾತಿನಿಧಿಕ ಚಿತ್ರ)
Follow us on

ಕಪ್ಪು ಬಣ್ಣದ ಉದ್ದನೆಯ ಕೂದಲಿಗಾಗಿ ಅದೆಷ್ಟೋ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ಬಳಸುತ್ತೇವೆ. ಕಾಲೇಜಿಗೆ ಹೋಗುವ ಹುಡುಗಿಯರಂತೂ ಬಳಸದ ಶಾಂಪುಗಳೇ ಇಲ್ಲ. ಕೂದಲು ನೋಡಲು ಚೆನ್ನಾಗಿರಬೇಕು. ಸಿಕ್ಕು ಸಿಕ್ಕಾಗಿರಬಾರದು ಎಂಬೆಲ್ಲಾ ಆಸೆಗಳು ಮಹಿಳೆಯರಿಗೆ. ಹೀಗಿರುವಾಗ ಉದ್ದವಾದ ಮತ್ತು ದಪ್ಪವಾದ ತಲೆ ಕೂದಲನ್ನು ಹೊಂದಲು ಏನು ಮಾಡಬೇಕು ಎಂಬುದರ ಕುರಿತಾಗಿ ಆಯುರ್ವೇದ ತಜ್ಞೆ ದೀಕ್ಷಾ ಮಾಹಿತಿ ಹಂಚಿಕೊಂಡಿದ್ದಾರೆ.

ಮೊದಲೆಲ್ಲಾ ಉದ್ದವಾದ ಕೂದಲನ್ನು ಹೊಂದಿದ್ದ ನಾನು ಜಡೆ ಹಾಕಿ ಮಲ್ಲಿಗೆ ಹೂವಿನ ಮಾಲೆ ಮುಡಿದು ಸಿಂಗಾರಗೊಳ್ಳುತ್ತಿದೆ. ಆದರೀಗ ವಯಸ್ಸಾದಂತೆ ತಲೆ ಕೂದಲುಗಳು ಉದುರಲು ಪ್ರಾರಂಭಿಸಿದೆ. ತಲೆ ತುಂಬ ಬಿಳಿ ಕೂದಲುಗಳೇ ಕಾಣುತ್ತಿವೆ ಎಂಬುದು ಮಹಿಳೆಯರ ಚಿಂತೆಯಾದರೆ, ನಾನಿನ್ನೂ ಕಾಲೇಜಿಗೆ ಹೋಗುತ್ತಿದ್ದೇನೆ ಅಷ್ಟೇ, ಈಗಲೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ ಫ್ರೀ ಹೇರ್​ ಬಿಡಲಾಗುತ್ತಿಲ್ಲ. ಕೂದಲುಗಳು ಬಹುಬೇಗ ಸಿಕ್ಕಾಗಿ ಬಿಡುತ್ತವೆ ಏನೂ ಮಾಡಬೇಕು ಎಂಬುದು ಕಾಲೇಜು ಹುಡುಗಿಯರ ಚಿಂತೆ. ಹೀಗಿರುವಾಗ ಮನೆಮದ್ದಿನಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

‘ಕಬ್ಬಿಣದ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದಪ್ಪನೆಯ ತಲೆ ಕೂದಲು ಪಡೆಯಲು ಸಹಾಯಕವಾಗುತ್ತದೆ. ಬೃಂಗರಾಜವನ್ನು ಬಳಸುವುದರಿಂದಾಗಿ ಕೂದಲನ್ನು ಕಾಂತಿಯುಕ್ತಗೊಳಿಸಬಹುದು. ಕೂದಲ ಆರೈಕೆಗೆ ಬಳಸುವ ಆಯುರ್ವೇದ ಗಿಡಮೂಲಿಕೆಗಳಲ್ಲಿ ಬೃಂಗರಾಜ ಕೂಡಾ ಒಂದು. ಕೂದಲನ್ನು ಮೃದುವಾಗಿ ಮಾಡಲು ಬೃಂಗರಾಜ ಸಹಾಯ ಮಾಡುತ್ತದೆ’ ಎಂದು ವೈದ್ಯೆ ದೀಕ್ಷಾ ತಮ್ಮ ಇನ್​ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಎಣ್ಣೆಯೊಂದಿಗೆ ಕೂದಲನ್ನು ಮಸಾಜ್​ ಮಾಡಿ. ಎಣ್ಣೆಯಲ್ಲಿ ಕರಿಬೇವು, ಕಹಿ ಬೇವಿನ ಎಲೆ, ದಾಸವಾಳದ ಎಲೆಗಳು ಸೇರಿರಲಿ. ಇದು ತಲೆ ಕೂದಲು ಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ. ಗಿಡಮೂಲಿಕೆಯ ಎಣ್ಣೆಯನ್ನು ಮನೆಯಲ್ಲಿಯೇ ಸಿದ್ಧ ಮಾಡಿಕೊಳ್ಳಬಹುದು‘ ಎಂದು ವೈದ್ಯರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಪದಾರ್ಥಗಳು ಸರಿಯಾಗಿದ್ದಾಗ ಒಳ್ಳೆಯ ನಿದ್ರೆ ಕೂಡಾ ಸಿಗುವುದು. ಇದರಿಂದ ಆರೋಗ್ಯ ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ನಿಮ್ಮ ತಲೆ ಕೂದಲಿನ ಪೋಷಣೆಯನ್ನು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ರಕ್ತದೊತ್ತಡ, ಅನಗತ್ಯ ಚಿಂತೆ, ಅತಿಯಾದ ಸಿಟ್ಟಿನಿಂದ ತಲೆ ಕೂದಲು ಬಹುಬೇಗ ಉದುರಲು ಆರಂಭವಾಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದರೆ ಆರೋಗ್ಯವೂ ಸುಧಾರಿಸಿಕೊಳ್ಳುತ್ತದೆ. ಹೀಗಿರುವಾಗ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಸೊಪ್ಪಿನ ಪದಾರ್ಥಗಳನ್ನು ಹೆಚ್ಚು ಸೇವಿಸಿ.

ಇದನ್ನೂ ಓದಿ:

Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ