AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಶುರುವಾಗುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಗಂಟಲು ಕಿರಿಕಿರಿಯಂತಹ ಸಣ್ಣ ತೊಂದರೆಯಿಂದ ಆರಂಭವಾಗುತ್ತದೆ. ಇದು ಸಣ್ಣ ಸಮಸ್ಯೆಯೇ ಆದರೂ ಹಲವರಿಗೆ ಬಹಳ ಕಷ್ಟ ಎಂದು ಅನಿಸಬಹುದು.

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 9:49 AM

ಕೊರೊನಾ ಸೋಂಕಿನ ಸಂದರ್ಭದಲ್ಲಿ ಸಾಮಾನ್ಯ ಶೀತ, ಸೀನು ಬರುವುದು, ಗಂಟಲು ಕಿರಿಕಿರಿ ಸಮಸ್ಯೆಗಳು ಕೂಡ ಬಹಳ ಕಾಡಬಲ್ಲದು. ಭಯ, ಆತಂಕ ಸೃಷ್ಟಿಮಾಡಬಹುದು. ಕೊರೊನಾ ಸೋಂಕಿನ ಲಕ್ಷಣಗಳಿಲ್ಲದೆ ಅಥವಾ ಕೊರೊನಾ ಅಲ್ಲ ಎಂದು ವರದಿ ಬಂದ ನಂತರವೂ ಸಣ್ಣ ಪುಟ್ಟ ಶೀತ, ಗಂಟಲು ಕೆರೆತ ನಮ್ಮನ್ನು ಚಿಂತೆಗೀಡುಮಾಡಬಹುದು. ಅಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ನಾವು ಆತಂಕ ಪಡಬೇಕಾಗಿಲ್ಲ. ಮನೆಮದ್ದುಗಳ ಮೂಲಕವೇ ಕೆಲವೇ ದಿನಗಳಲ್ಲಿ ಸಮಸ್ಯೆಯಿಂದ ಪಾರಾಗಬಹುದು.

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಶುರುವಾಗುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಗಂಟಲು ಕಿರಿಕಿರಿಯಂತಹ ಸಣ್ಣ ತೊಂದರೆಯಿಂದ ಆರಂಭವಾಗುತ್ತದೆ. ಇದು ಸಣ್ಣ ಸಮಸ್ಯೆಯೇ ಆದರೂ ಹಲವರಿಗೆ ಬಹಳ ಕಷ್ಟ ಎಂದು ಅನಿಸಬಹುದು. ಇಂತಹ ತೊಂದರೆಗಳಿಗೆ ಮನೆಮದ್ದು ವಿವರ ಇಲ್ಲಿದೆ.

ಬಿಸಿನೀರ ಪಾನೀಯ ಕುಡಿಯಿರಿ ಶೀತ ಅಥವಾ ಗಂಟಲು ಕಿರಿಕಿರಿ ಉಂಟಾದರೆ ಸಾದಾ ಬಿಸಿನೀರು ಕುಡಿಯುವುದು ಕೂಡ ಉತ್ತಮವೇ ಆಗಿದೆ. ಕುದಿಸಿದ ಹದವಾದ ಬೆಚ್ಚಗಿನ ನೀರನ್ನು ಕಾಫಿ ಸೇವಿಸಿದಂತೆ ಸ್ವಲ್ಪಸ್ವಲ್ಪವೇ ಸೇವಿಸಬಹುದು. ಅಥವಾ ಏಲಕ್ಕಿ, ಲವಂಗ, ಲಿಂಬು ರಸ, ದಾಲ್ಚಿನ್ನಿ ಸೇರಿಸಿ ಕುದಿಸಿದ ನೀರಿಗೆ ಹಾಕಿ, ಸ್ವಲ್ಪ ಹೊತ್ತು ಹಾಗೇ ಬಿಟ್ಟು ನಂತರ ಬಿಸಿಬಿಸಿಯಾಗಿ ಕುಡಿಯಬಹುದು.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ ಇದು ಕೂಡ ಬಹಳ ಪರಿಣಾಮಕಾರಿ ಮದ್ದು. ಗಂಟಲು ಕಿರಿಕಿರಿ ಅಥವಾ ಗಂಟಲು ನೋವಿನಂತ ಸಮಸ್ಯೆಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಸಮಸ್ಯೆಯು ಬಹು ಬೇಗನೇ ಶಮನವಗುತ್ತದೆ. ದಿನಕ್ಕೆ ಒಂದು ಬಾರಿ ಅಂದರೆ, ರಾತ್ರಿ ಮಲಗುವುದಕ್ಕೆ ಮುಂಚೆ ಅಥವಾ ಅಗತ್ಯವಿದ್ದರೆ ಬೆಳಗ್ಗೆಯೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಉಪ್ಪನ್ನು ಬೆರೆಸಿ, ಗಂಟಲು ಮತ್ತು ಬಾಯಿ ಮುಕ್ಕಳಿಸಬೇಕು. ನಂತರ ಅದನ್ನು ಸೇವಿಸುವುದು ಒಳ್ಳೆಯದಲ್ಲ. ಉಗುಳಬೇಕು.

ಜೇನು ಅಥವಾ ಕಲ್ಲುಸಕ್ಕರೆ ಸೇವಿಸಿ ಗಂಟಲು ಸಮಸ್ಯೆಗೆ ಜೇನು ಸವಿಯುವುದು ಅಥವಾ ಕಲ್ಲುಸಕ್ಕರೆ ತಿನ್ನುವುದು ಉಪಕಾರಿ. ದಿನಕ್ಕೆ ಎರಡು ಬಾರಿ ಒಂದೊಂದು ಚಮಚ ಜೇನು ಸವಿಯಬಹುದು. ಕಲ್ಲುಸಕ್ಕರೆಯನ್ನು ಬಾಯಲ್ಲಿಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಗಂಟಲು ಕೆರೆತದಿಂದ ಕೆಮ್ಮು ಬರುವುದು ಕಡಿಮೆ ಆಗುತ್ತದೆ.

ಇವೆಲ್ಲಾ ಮನೆಯಲ್ಲೇ ಮಾಡಬಹುದಾದ ಸರಳ ಮತ್ತು ಸಾಧ್ಯವಿರುವ ಮದ್ದಾಗಿದೆ. ಸಣ್ಣಪುಟ್ಟ ಶೀತ, ಗಂಟಲು ಕೆರೆತಕ್ಕೆ ಇವನ್ನು ಬಳಸಬಹುದು. ಹಾಗೆಂದು ಸಮಸ್ಯೆ ಬಿಗಡಾಯಿಸಿದಾಗಲೂ ಮನೆಯಲ್ಲೇ ಮದ್ದು ಪ್ರಯೋಗಿಸುತ್ತಾ ಕೂರಲು ಇದು ಸೂಕ್ತ ಸಮಯವಲ್ಲ. ಕೊರೊನಾದ ಲಕ್ಷಣಗಳು ಕೂಡ ಶೀತ, ಜ್ವರದಂತಹ ಸಮಸ್ಯೆಗಳೇ ಆಗಿರುವುದರಿಂದ ಲಕ್ಷಣಗಳು ಗಂಭೀರ ಹಂತಕ್ಕೆ ಹೋಗದಂತೆ ನೋಡಿಕೊಳ್ಳುವುದು ಅವಶ್ಯಕ. ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ಎಂದಾದರೆ ಅಥವಾ ಸಾಮಾನ್ಯ ಶೀತ ಎಂದು ಖಚಿತವಿದ್ದರೆ ಅದಕ್ಕೆ ಈ ಪರಿಹಾರೋಪಾಯಗಳನ್ನು ಬಳಸಬಹುದು. ಕೊರೊನಾ ಎಂದಾದರೂ ಸೋಂಕಿಗೆ ಹೆದರಬೇಕಾದ ಅಗತ್ಯವಿಲ್ಲ. ಧೈರ್ಯದಿಂದ, ಜವಾಬ್ದಾರಿಯಿಂದ ಚಿಕಿತ್ಸೆಗೆ ಒಳಗಾದರೆ ಸೋಂಕು ಗೆಲ್ಲಬಹುದು.

ಇದನ್ನೂ ಓದಿ: ದೇಶದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ ಶೇ.9.54ಕ್ಕೆ ಇಳಿಕೆ; 40 ದಿನಗಳ ನಂತರ 2 ಲಕ್ಷಕ್ಕೂ ಕಡಿಮೆ ಹೊಸ ಕೇಸ್​​ಗಳು

ಹಲಸಿನ ಬೀಜದ ಉಪಯೋಗ ತಿಳಿದರೆ ಒಂದು ಬೀಜವನ್ನೂ ಹಾಳು ಮಾಡಲಾರಿರಿ; ಇಲ್ಲಿದೆ ವಿವರ

Published On - 8:52 am, Wed, 26 May 21

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ