Speech Disabilities: ಮಕ್ಕಳಲ್ಲಿ ಮಾತಿನ ಅಸಮರ್ಥತೆಯನ್ನು ನಿವಾರಿಸಲು ಇಲ್ಲಿವೆ ಕೆಲವು ಸಲಹೆ
ಮಕ್ಕಳಲ್ಲಿ ಮಾತಿನ ಅಸಮರ್ಥತೆಯು ಮಗುವಿಗೆ ಮತ್ತು ಕುಟುಂಬಕ್ಕೆ ಗಮನಾರ್ಹ ಸವಾಲಾಗಿದೆ. ಇದನ್ನು ಎದುರಿಸಲು ಇಲ್ಲಿವೆ ಕೆಲವು ವೈದ್ಯರ ಸಲಹೆ.
ವಾಕ್ ಅಸಾಮರ್ಥ್ಯವು (Speech Disability) ಒಬ್ಬ ವ್ಯಕ್ತಿಯು ವಾಕ್ಯವನ್ನು ಹೇಳುವಾಗ ಅಥವಾ ರಚಿಸುವಲ್ಲಿ ಸಮಸ್ಯೆಗಳನ್ನು ಹೊಂದಿರುವ ಸ್ಥಿತಿಯಾಗಿದೆ. ಇದರಿಂದ ಇತರರೊಂದಿಗೆ ಸಂವಹನ (Communication) ನಡೆಸುವಾಗಲೂ ತೊಂದರೆ ಆಗುವ ಸಾಧ್ಯತೆಯಿದೆ. ಉಚ್ಚಾರಣೆ (Pronunciation) ಅಸ್ವಸ್ಥತೆಗಳು, ಫೋನಾಲಾಜಿಕಲ್ ಅಸ್ವಸ್ಥತೆಗಳು, ಅಸ್ಪಷ್ಟತೆ ಮತ್ತು ಧ್ವನಿ ಅಸ್ವಸ್ಥತೆಗಳು ಸೇರಿದಂತೆ ಹಲವಾರು ರೀತಿಯ ಮಾತಿನ ಅಸಮರ್ಥತೆಗಳಿವೆ. ಈ ಅಸ್ವಸ್ಥತೆಗಳನ್ನೂ ಹೊಂದಿರುವ ಮಗುವಿನ ಭಾಷಣವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಡಾ ಹಿಮಾನಿ ನರುಲಾ, ಡೆವಲಪ್‌ಮೆಂಟಲ್ ಮತ್ತು ಬಿಹೇವಿಯರಲ್ ಪೀಡಿಯಾಟ್ರಿಶಿಯನ್ ಹಾಗೂ ಕಂಟಿನ್ಯುವಾ ಕಿಡ್ಸ್‌ನ ನಿರ್ದೇಶಕರು ಮತ್ತು ಸಹ-ಸಂಸ್ಥಾಪಕಿ ಅವರ ಪ್ರಕಾರ, ಮಕ್ಕಳಲ್ಲಿ ಮಾತಿನ ಅಸಮರ್ಥತೆಯು ಮಗುವಿಗೆ ಮತ್ತು ಕುಟುಂಬಕ್ಕೆ ಗಮನಾರ್ಹ ಸವಾಲಾಗಿದೆ.
“ಆದಾಗ್ಯೂ, ಸರಿಯಾದ ಬೆಂಬಲ ಮತ್ತು ಮಧ್ಯಸ್ಥಿಕೆಗಳೊಂದಿಗೆ, ಅನೇಕ ಮಕ್ಕಳು ತಮ್ಮ ಮಾತಿನ ಅಸಮರ್ಥತೆಯನ್ನು ನಿವಾರಿಸಬಹುದು ಮತ್ತು ಅವರ ಸಂವಹನ ಕೌಶಲ್ಯವನ್ನು ಸುಧಾರಿಸಬಹುದು” ಎಂದು ನರುಲಾ ಅವರು ಇಂಡಿಯಾ ಟುಡೇ ಗೆ ತಿಳಿಸಿದರು.
ಮಕ್ಕಳಲ್ಲಿ ಮಾತಿನ ಅಸಮರ್ಥತೆಯನ್ನು ನಿವಾರಿಸಲು ಸಹಾಯ ಮಾಡುವ ಸಲಹೆಗಳು
-
ವೃತ್ತಿಪರ ಸಹಾಯವನ್ನು ಪಡೆದುಕೊಳ್ಳಿ:
ಮಾತಿನ ಅಸಮರ್ಥತೆಗಳನ್ನು ಪರಿಹರಿಸುವಲ್ಲಿ ಮೊದಲ ಹಂತವೆಂದರೆ ಭಾಷಣ-ಭಾಷಾ ರೋಗಶಾಸ್ತ್ರಜ್ಞರಿಂದ ವೃತ್ತಿಪರ ಸಹಾಯವನ್ನು ಪಡೆಯುವುದು. ಅವರು ಮಗುವಿನ ಮಾತು ಮತ್ತು ಭಾಷಾ ಸಾಮರ್ಥ್ಯಗಳನ್ನು ಪರಿಶೀಲಿಸಿ, ದೌರ್ಬಲ್ಯದ ಯಾವುದೇ ಪ್ರದೇಶಗಳನ್ನು ಗುರುತಿಸಬಹುದು ಮತ್ತು ಚಿಕಿತ್ಸೆಯನ್ನು ನೀಡಬಹುದು.
-
ಸಂವಹನವನ್ನು ಪ್ರೋತ್ಸಾಹಿಸಿ:
ಸಾಧ್ಯವಾದಷ್ಟು ನಿಮ್ಮೊಂದಿಗೆ ಮತ್ತು ಇತರರೊಂದಿಗೆ ಸಂವಹನ ನಡೆಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ. ಇದು ಅವರಿಗೆ ಮುಕ್ತ ಪ್ರಶ್ನೆಗಳನ್ನು ಕೇಳುವುದು, ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಆತ-ಚಟುವಟಿಕೆಗಳ ಮುಕಾಂತರ ಮಕ್ಕಳ ಜೊತೆ ಮಾತನಾಡುವುದು ಉತ್ತಮ ಮಾರ್ಗಾವಾಗಿದೆ.
-
ನಿಯಮಿತವಾಗಿ ಅಭ್ಯಾಸ ಮಾಡಿ:
ಮಾತು ಮತ್ತು ಭಾಷಾ ಕೌಶಲ್ಯಗಳನ್ನು ಸುಧಾರಿಸಲು ನಿರಂತರ ಅಭ್ಯಾಸವು ಮುಖ್ಯವಾಗಿದೆ. ನಿಮ್ಮ ಮಗುವಿನೊಂದಿಗೆ ಅವರ ಭಾಷಣ ವ್ಯಾಯಾಮ ಮತ್ತು ಚಟುವಟಿಕೆಗಳಲ್ಲಿ ನಿಯಮಿತವಾಗಿ ಕೆಲಸ ಮಾಡಿ ಮತ್ತು ಅವರ ಪ್ರಯತ್ನಗಳಿಗೆ ಧನಾತ್ಮಕ ಪ್ರತಿಕ್ರಿಯೆ ನೀಡಲು ಮರೆಯದಿರಿ.
-
ಬೆಂಬಲ ವಾತಾವರಣವನ್ನು ರಚಿಸಿ:
ನಿಮ್ಮ ಮಗುವಿಗೆ ಮಾತನಾಡುವ ಕೌಶಲ್ಯವನ್ನು ಅಭ್ಯಾಸ ಮಾಡಲು ಬೆಂಬಲದ ವಾತಾವರಣವನ್ನು ಸೃಷ್ಟಿಸುವುದು ಮುಖ್ಯವಾಗಿದೆ. ಇದು ಗೊಂದಲವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಗು ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತದೆ. ಇದರ ಜೊತೆ ಸಾಕಷ್ಟು ಧನಾತ್ಮಕ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹವನ್ನು ಒದಗಿಸುವುದನ್ನು ಒಳಗೊಂಡಿರುತ್ತದೆ.
-
ಸಹಾಯಕ ತಂತ್ರಜ್ಞಾನವನ್ನು ಬಳಸಿ:
ಭಾಷಣ-ಉತ್ಪಾದಿಸುವ ಸಾಧನಗಳು ಅಥವಾ ಸಂವಹನ ಅಪ್ಲಿಕೇಶನ್‌ಗಳಂತಹ ಭಾಷಣ ವಿಕಲಾಂಗ ಮಕ್ಕಳಿಗೆ ಸಹಾಯ ಮಾಡುವ ವಿವಿಧ ಸಹಾಯಕ ತಂತ್ರಜ್ಞಾನಗಳು ಲಭ್ಯವಿದೆ. ನಿಮ್ಮ ಮಗುವಿಗೆ ಯಾವ ಸಹಾಯಕ ತಂತ್ರಜ್ಞಾನವು ಹೆಚ್ಚು ಉಪಯುಕ್ತವಾಗುತ್ತದೆ ಎಂಬುದನ್ನು ನಿರ್ಧರಿಸಲು ಭಾಷಣ-ಭಾಷಾ ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ.
-
ಇಡೀ ಕುಟುಂಬವನ್ನು ತೊಡಗಿಸಿಕೊಳ್ಳಿ:
ಮಾತಿನ ಅಸಮರ್ಥತೆಯು ಇಡೀ ಕುಟುಂಬದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಅವುಗಳನ್ನು ಮೆಟ್ಟಿ ನಿಲ್ಲುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರನ್ನು ಒಳಗೊಳ್ಳುವುದು ಮುಖ್ಯವಾಗಿದೆ. ನಿಮ್ಮ ಮಗುವಿನೊಂದಿಗೆ ಭಾಷಣ ವ್ಯಾಯಾಮವನ್ನು ಅಭ್ಯಾಸ ಮಾಡಲು ಒಡಹುಟ್ಟಿದವರು ಮತ್ತು ಇತರ ಕುಟುಂಬ ಸದಸ್ಯರನ್ನು ಪ್ರೋತ್ಸಾಹಿಸಿ.
ಇದನ್ನೂ ಓದಿ: ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿರುವ ಈ ಆಹಾರವನ್ನು ಸೇವಿಸುವುದರಿಂದ ಡಿಮೆನ್ಶಿಯಾ ತಡೆಯಬಹುದು
“ನೆನಪಿಡಿ, ಪ್ರತಿ ಮಗುವೂ ವಿಶಿಷ್ಟವಾಗಿದೆ, ಮತ್ತು ಮಾತಿನ ಅಸಾಮರ್ಥ್ಯವನ್ನು ಜಯಿಸಲು ಒಂದೇ ಒಂದು ವಿಧಾನ ಎಂಬುದಿಲ್ಲ. ಭಾಷಣ-ಭಾಷಾ ರೋಗಶಾಸ್ತ್ರಜ್ಞರೊಂದಿಗೆ ಕೆಲಸ ಮಾಡುವುದು ಮತ್ತು ನಿಮ್ಮ ಮಗುವಿನ ನಿರ್ದಿಷ್ಟ ಅಗತ್ಯಗಳು ಮತ್ತು ಸಾಮರ್ಥ್ಯಗಳಿಗೆ ತಕ್ಕಂತೆ ಚಿಕಿತ್ಸೆ ಪಡೆಯುವುದು ಅವರ ಭಾಷಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಭಾಷಾ ಕೌಶಲ್ಯವನ್ನು ವೃದ್ಧಿಸುತ್ತದೆ,” ಎಂದು ಡಾ ನರುಲಾ ಹೇಳಿದರು.