AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anxiety or Panic Attack: ಆತಂಕ ಅಥವಾ ಪ್ಯಾನಿಕ್ ಅಟ್ಯಾಕ್ ನಿಭಾಯಿಸಲು ಇಲ್ಲಿವೆ ಮೂರು ಸಲಹೆಗಳು

ಆಡಿಯೊಬುಕ್‌ಗಳನ್ನು ಓದುವುದು ಅಥವಾ ಕೇಳುವುದು ಭಾವನೆಗಳು ಶಾಂತವಾಗಲು ಸಮಯವನ್ನು ನೀಡುತ್ತದೆ ಮತ್ತು ಉತ್ತಮವಾದ ನರರಾಸಾಯನಿಕಗಳನ್ನು ಹೆಚ್ಚಿಸುತ್ತದೆ.

Anxiety or Panic Attack: ಆತಂಕ ಅಥವಾ ಪ್ಯಾನಿಕ್ ಅಟ್ಯಾಕ್ ನಿಭಾಯಿಸಲು ಇಲ್ಲಿವೆ ಮೂರು ಸಲಹೆಗಳು
3 tips to help you deal with anxiety or a panic attack
ನಯನಾ ಎಸ್​ಪಿ
|

Updated on:Mar 31, 2023 | 1:26 PM

Share

ಆತಂಕ (Anxiety), ಒಬ್ಬ ವ್ಯಕ್ತಿಯು ಎದುರಿಸುವ ಸಾಮಾನ್ಯ ಮಾನಸಿಕ ಆರೋಗ್ಯ (Mental Health) ಸಮಸ್ಯೆಗಳಲ್ಲಿ ಒಂದಾಗಿದೆ, ವಿಶೇಷವಾಗಿ ಒತ್ತಡದ (Stress) ಸಂದರ್ಭಗಳನ್ನು ನಿರ್ವಹಿಸುವಾಗ, ವ್ಯಕ್ತಿಯು ಒತ್ತಡಕ್ಕೆ ಒಳಗಾದಾಗ ಇದು ಸಕ್ರಿಯಗೊಳ್ಳುತ್ತದೆ. ನಮ್ಮ ದೇಹದಲ್ಲಿ, ಆತಂಕ ಹೆಚ್ಚಾಗಲು ನರಮಂಡಲವು ಕಾರಣವಾಗುತ್ತದೆ. “ಇದು ಭಯ ಮತ್ತು ಅಶಾಂತಿಯ ಭಾವನೆ, ಪರಿಸರದಲ್ಲಿನ ಬದಲಾವಣೆಗಳ ಹೊರತಾಗಿ, ಜೆನೆಟಿಕ್ಸ್ ಮತ್ತು ಬದಲಾದ ಮೆದುಳಿನ ರಾಸಾಯನಿಕ ಅಂಶಗಳು ನರಮಂಡಲವನ್ನು ಸಕ್ರಿಯಗೊಳಿಸಬಹುದು, ಇದು ಆತಂಕಕ್ಕೆ ಕಾರಣವಾಗುತ್ತದೆ,” ಎಂದು ಡಾ. ರೋಹಿತ್ ವರ್ಮಾ, ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಸೈಕಿಯಾಟ್ರಿ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ನವದೆಹಲಿ ಅವರು ಇಂಡಿಯಾ ಟುಡೇ ಗೆ ತಿಳಿಸಿದರು.

ಯುಎಸ್ ಮೂಲದ ಸಂವಹನ ರೋಗಶಾಸ್ತ್ರಜ್ಞ ಮತ್ತು ಅರಿವಿನ ನರವಿಜ್ಞಾನಿ ಡಾ. ಕ್ಯಾರೋಲಿನ್ ಲೀಫ್ ಅವರು ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್‌ಗಳನ್ನು ಎದುರಿಸಲು ಸಲಹೆಗಳ ಕುರಿತು ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ.

  • ಸಲಹೆ 1: ಓದಿ! ನಿಮಗೆ ಸಂತೋಷವನ್ನು ತರುವ ಮತ್ತು ತಾತ್ಕಾಲಿಕವಾಗಿ ಆತಂಕದಿಂದ ಬೇರ್ಪಡಲು ಮತ್ತು ವಾಸ್ತವದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಆಡಿಯೊಬುಕ್ ಅನ್ನು ಓದಿ, ಅಥವಾ ಕೇಳಿ. ಇದು ಆತಂಕದ ಭಾವನೆ ಶಾಂತವಾಗಲು ಸಮಯವನ್ನು ನೀಡುತ್ತದೆ. ನೀವು ಓದಿದಾಗ ಸಂಭವಿಸುವ ದೃಶ್ಯೀಕರಣವು ಉತ್ತಮ ನರರಾಸಾಯನಿಕಗಳನ್ನು ಹೆಚ್ಚಿಸುತ್ತದೆ.
  • ಸಲಹೆ 2: ಆತಂಕಕ್ಕೆ ಒಳಗಾದಾಗ ನಿಮ್ಮಕೋಣೆಯಲ್ಲಿರುವ ವಸ್ತುಗಳನ್ನು ಹೆಸರಿಸುತ್ತಾ ಮತ್ತು ಸ್ಪರ್ಶಿಸುತ್ತಾ ಕೋಣೆಯ ಸುತ್ತಲೂ ಹೋಗಿ. ಇದು ನಿಮ್ಮನ್ನು ನಿಮ್ಮ ತಲೆಯಿಂದ ಮತ್ತು ಭಾವನಾತ್ಮಕ ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ, ಇದು ನಿಮ್ಮನ್ನು ಮರು ಕೇಂದ್ರೀಕರಿಸಲು ಮತ್ತು ನಿಮ್ಮ ಯೋಚನೆಗಳನ್ನು ಒಟ್ಟುಗೂಡಿಸಲು ಅನುವು ಮಾಡಿಕೊಡುತ್ತದೆ.
  • ಸಲಹೆ 3: ಒಂದು ಬೌಲ್‌ನಲ್ಲಿ ತಣ್ಣೀರು ಮತ್ತು ಮಂಜುಗಡ್ಡೆಯನ್ನು ತುಂಬಿಸಿ ಮತ್ತು ಸುಮಾರು 10 ಸೆಕೆಂಡುಗಳ ಕಾಲ ನಿಮ್ಮ ಮುಖವನ್ನು ಮೂರು ಬಾರಿ ಮುಳುಗಿಸಿ. ಇದು ನಿಮ್ಮ ಒತ್ತಡಕ್ಕೆ ಕಾರಣವಾದ ನರವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಆತಂಕದ ರಾತ್ರಿಯ ನಂತರ, ಪ್ರಯಾಣಿಸುವಾಗ ಅಥವಾ ನೀವು ಆತಂಕವನ್ನು ಅನುಭವಿಸಿದಾಗ ಇದು ನಿಮಗೆ ಸಹಾಯ ಮಾಡುತ್ತದೆ.

ಆತಂಕದ ನಾಲ್ಕು ಲಕ್ಷಣಗಳಿವೆ: ಮೊದಲನೆಯದು ‘ಕಾಗ್ನೆಟಿವ್’, ಇದರಲ್ಲಿ “ಹುಚ್ಚರಾಗುವ” ಅಥವಾ ಭಯಾನಕ ಆಲೋಚನೆಗಳ ಭಯವನ್ನು ಹೊಂದಿರುತ್ತಾರೆ. ಎರಡನೆಯದು ‘ಶಾರೀರಿಕ’, ಇದರಲ್ಲಿ ಒಬ್ಬರು ಹೆಚ್ಚಿದ ಹೃದಯ ಬಡಿತ ಮತ್ತು ಉಸಿರಾಟದ ತೊಂದರೆಯನ್ನು ಎದುರಿಸುತ್ತಾರೆ. ಮೂರನೆಯದು ‘ನಡವಳಿಕೆ’, ಇದರಲ್ಲಿ ಬೆದರಿಕೆ ಸೂಚನೆಯಂತಹ ಭಾವನೆಗಳನ್ನು ಹೊಂದಿರುತ್ತಾರೆ. ಕೊನೆಯದಾಗಿ ‘ಚಡಪಡಿಕೆ’, ಇದರಲ್ಲಿ ಒಬ್ಬರು ನರ, ಉದ್ವಿಗ್ನತೆ ಮತ್ತು ನಡುಗುವಿಕೆಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಮಾತಿನ ಅಸಮರ್ಥತೆಯನ್ನು ನಿವಾರಿಸಲು ಇಲ್ಲಿವೆ ಕೆಲವು ಸಲಹೆ

ಆತಂಕ ಅಥವಾ ಪ್ಯಾನಿಕ್ ಅಟ್ಯಾಕ್ ಇಂದ ತೀವ್ರವಾಗಿ ಬಳಲುತ್ತಿದ್ದರೆ. ತಜ್ಞರನ್ನು ಭೇಟಿ ನೀಡಿ. ಧ್ಯಾನ ಮತ್ತು ಕೆಲವು ಕೌಂಸೆಲ್ಲಿಂಗ್ ಸೆಶನ್ ನಿಮಗೆ ಸಹಾಯ ಮಾಡಬಹುದು.

Published On - 11:34 am, Fri, 31 March 23

ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು