New Year 2022: ಹೊಸ ವರ್ಷದ ಪಯಣ ಹೀಗಿರಲಿ; ಈ 5 ಅಭ್ಯಾಸಗಳನ್ನು ಅಳವಡಿಸಿಕೊಂಡು ಮುಂದುವರಿಯಿರಿ

| Updated By: preethi shettigar

Updated on: Jan 01, 2022 | 7:05 AM

ಈ ಹೊಸ ವರ್ಷದಲ್ಲಿ ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಆರೋಗ್ಯವನ್ನು ಸುಧಾರಿಸಬಹುದು. ಹೀಗೆ ಮಾಡುವುದರಿಂದ ಅನೇಕ ರೋಗಗಳು ನಮ್ಮಿಂದ ದೂರವಿರುತ್ತದೆ. ಆರೋಗ್ಯಕರ ಬದಲಾವಣೆಗೆ ಕಾರಣವಾಗುವ 5 ಅಭ್ಯಾಸಗಳು ಯಾವುವು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

New Year 2022: ಹೊಸ ವರ್ಷದ ಪಯಣ ಹೀಗಿರಲಿ; ಈ 5 ಅಭ್ಯಾಸಗಳನ್ನು ಅಳವಡಿಸಿಕೊಂಡು ಮುಂದುವರಿಯಿರಿ
ಸಾಂದರ್ಭಿಕ ಚಿತ್ರ
Follow us on

ನೀವು ಸಹ ಹೊಸ ವರ್ಷದಲ್ಲಿ ಏನಾದರೂ ವಿಭಿನ್ನವಾಗಿ ಮಾಡಲು ಬಯಸಿದರೆ ಮತ್ತು ನಿಮ್ಮ ಆರೋಗ್ಯಕರ (Health) ಜೀವನದತ್ತ ಹೆಜ್ಜೆ ಇಡಲು ಬಯಸಿದರೆ, ಕೆಲವು ಅಭ್ಯಾಸಗಳನ್ನು ನೀವು ಸುಧಾರಿಸಿಕೊಳ್ಳಬೇಕು. ಕೆಟ್ಟ ಜೀವನಶೈಲಿಯೇ (Lifestyle) ಅನೇಕ ರೋಗಗಳಿಗೆ ಕಾರಣ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದ್ದರಿಂದ ಈ ಹೊಸ ವರ್ಷದಲ್ಲಿ ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಆರೋಗ್ಯವನ್ನು ಸುಧಾರಿಸಬಹುದು. ಹೀಗೆ ಮಾಡುವುದರಿಂದ ಅನೇಕ ರೋಗಗಳು ನಮ್ಮಿಂದ ದೂರವಿರುತ್ತದೆ. ಆರೋಗ್ಯಕರ ಬದಲಾವಣೆಗೆ ಕಾರಣವಾಗುವ 5 ಅಭ್ಯಾಸಗಳು ಯಾವುವು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ವ್ಯಾಯಾಮದ ಮೊರೆ ಹೋಗಿ
ವಾಸ್ತವವಾಗಿ ಕೊರೊನಾ ಜನರ ಜೀವನವನ್ನು ಆರಾಮದಾಯಕವಾಗಿಸಿದೆ. ಮನೆಯಲ್ಲಿಯೇ ಕೆಲಸ ಶುರುವಾದ ಮೇಲೆ ಜನರು ಸೋಮಾರಿಗಳಾಗಿದ್ದಾರೆ. ಆದರೆ ಈಗ ಅದನ್ನು 2022 ರಲ್ಲಿ ಬದಲಾಯಿಸಿ. ನೀವು ಯಾವುದೇ ರೀತಿಯ ಕೆಲಸವನ್ನು ಮಾಡಿದರು ಅಥವಾ ಬಿಡುವಿಲ್ಲದ ಕೆಲಸ ಇದ್ದರೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇದರಿಂದ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಜತೆಗೆ ಒತ್ತಡವನ್ನು ಕಡಿಮೆ ಮಾಡಬಹುದು. ವ್ಯಾಯಾಮ ಮಾಡುವುದರಿಂದ ಮೂಡ್ ಕೂಡ ಉತ್ತಮವಾಗಿರುತ್ತದೆ. ವ್ಯಾಯಾಮದಿಂದ ದೇಹವು ಚೆನ್ನಾಗಿ ಬೆವರುವುದರಿಂದ ರೋಗಗಳು ದೂರವಾಗುತ್ತದೆ.

ಒಳ್ಳೆಯ ನಿದ್ರೆ
ಜೀವನದಲ್ಲಿ ಕೇವಲ ಕೆಲಸ ಅಥವಾ ವ್ಯಾಯಾಮ ಅಗತ್ಯವಲ್ಲ. ದೇಹಕ್ಕೆ ವಿಶ್ರಾಂತಿಯೂ ಬೇಕು. ಆದ್ದರಿಂದ ಹೊಸ ವರ್ಷದಿಂದಲೇ ಸರಿಯಾದ ಸಮಯಕ್ಕೆ ಮಲಗುವ ಹಾಗೂ ಸಾಕಷ್ಟು ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ನೀವು 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿದರೆ, ನೀವು ನಿದ್ರಾಹೀನತೆಯಿಂದ ದೂರವಿರುತ್ತೀರಿ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಅಲ್ಲದೆ ರಾತ್ರಿ ಮಲಗುವ ಮುನ್ನ ಹೆಚ್ಚು ಆಹಾರ ಸೇವಿಸಬೇಡಿ. ನಿಯಮಿತ ಪ್ರಮಾಣದಲ್ಲಿ ಊಟ ಮಾಡಿ.

ಕಣ್ಣಿಗೆ ವಿಶ್ರಾಂತಿ ನೀಡಿ
ವರ್ಕ್​ ಫ್ರಮ್​ ಹೋಮ್​ ಮತ್ತು ಆನ್‌ಲೈನ್ ತರಗತಿಗಳ ಜೊತೆಗೆ ಇಂಟರ್ನೆಟ್‌ನ ಹೆಚ್ಚುತ್ತಿರುವ ಟ್ರೆಂಡ್‌ನೊಂದಿಗೆ ಈಗ ಜನರು ಹೆಚ್ಚು ಮೊಬೈಲ್​, ಕಂಪ್ಯೂಟರ್​ ಬಳಸುತ್ತಿದ್ದಾರೆ. ಇದರಿಂದ ಜನರು ಕಣ್ಣಿನ ಸಮಸ್ಯೆ ಮಾತ್ರವಲ್ಲದೆ, ಹಲವಾರು ಮಾನಸಿಕ ಸಮಸ್ಯೆಗಳನ್ನು ಸಹ ಅನುಭವಿಸುವಂತಾಗುತ್ತದೆ. ಆದ್ದರಿಂದ ಪುಸ್ತಕಗಳನ್ನು ಓದುವುದು, ಕ್ರೀಡೆ, ಸಾಮಾಜಿಕ ಜೀವನ ಇತ್ಯಾದಿ ಸೇರಿದಂತೆ ಮನರಂಜನೆಗಾಗಿ ಇತರ ಹಲವು ಮಾರ್ಗಗಳನ್ನು ಅನುಸರಿಸಿ.

ನೀರು ಹೆಚ್ಚಾಗಿ ಕುಡಿಯಿರಿ
ನೀವು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯದಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಚಳಿಗಾಲ, ಬೇಸಿಗೆಯಲ್ಲಿ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿ. ಇದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು.

ಸರಿಯಾದ ಸಮಯಕ್ಕೆ ಊಟ ಮಾಡಿ
ಇತ್ತೀಚೆಗೆ ಜನರು ಊಟ, ತಿಂಡಿಯನ್ನು ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಬದಲಾಗಿ ಕೆಲಸದ ಮೇಲೆ ಹೆಚ್ಚು ಗಮನ ಇಡುತ್ತಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೊಸ ವರ್ಷದಿಂದ ಸರಿಯಾದ ಸಮಯಕ್ಕೆ ಊಟ, ತಿಂಡಿ ಸೇವಿಸಿ. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಿ.

ಇದನ್ನೂ ಓದಿ:
Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ

Lifestyle: ಬೆಳಗ್ಗಿನ ವಾಕಿಂಗ್​​ಗಿಂತ ರಾತ್ರಿ ನಡಿಗೆಯೇ ಆರೋಗ್ಯಕ್ಕೆ ಉತ್ತಮ