ವಿಪರೀತಕರಣಿ ಯೋಗಾಸನ: ತುಂಬಾ ಸರಳ ಈ ಆಸನ, ಜೊತೆಗೆ ಇದರ ಪ್ರಯೋಜನಗಳು ವಿಪರೀತ! ಮಿಸ್ ಮಾಡದೆ ನೋಡಿ

ವಿಪರೀತಕರಣಿ ಪ್ರಯೋಜನಗಳು ಹೀಗಿವೆ: * ನರಗಳಿಗೆ ತುಂಬಾ ರಿಲ್ಯಾಕ್ಸ್ ಮಾಡುತ್ತೆ. * ಬೆನ್ನು ಮತ್ತು ಭುಜಗಳಿಗೆ ತುಂಬಾ ಒಳ್ಳೆಯದು. * ಮೆನೋಪಾಸ್‌ ಸಮಯದಲ್ಲಿ ತುಂಬಾ ಪ್ರಯೋಜನಕಾರಿ * ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. * * ವೇರಿಕೋಸ್‌ ವೇಯಿನ್‌ಗೆ ತುಂಬಾ ಒಳ್ಳೆಯದು

ವಿಪರೀತಕರಣಿ ಯೋಗಾಸನ: ತುಂಬಾ ಸರಳ ಈ ಆಸನ, ಜೊತೆಗೆ ಇದರ ಪ್ರಯೋಜನಗಳು ವಿಪರೀತ! ಮಿಸ್ ಮಾಡದೆ ನೋಡಿ
ವಿಪರೀತಕರಣಿ ಯೋಗಾಸನ: ತುಂಬಾ ಸರಳ ಈ ಆಸನ, ಜೊತೆಗೆ ಇದರ ಪ್ರಯೋಜನೆಗಳು ವಿಪರೀತ! ಮಿಸ್ ಮಾಡದೆ ನೋಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 29, 2022 | 8:58 PM

ವೇರಿಕೋಸ್‌ ವೇಯಿನ್‌, ಸಂಧಿವಾತ, ಜೀರ್ಣಕ್ರಿಯೆ ಸಮಸ್ಯೆ, ತಲೆನೋವು, ಅಧಿಕ ಹಾಗೂ ಕಡಿಮೆ ರಕ್ತದೊತ್ತಡ, ನಿದ್ರಾಹೀನತೆ, ಸ್ವಲ್ಪ ಖಿನ್ನತೆ, ಉಸಿರಾಟದ ತೊಂದರೆ, ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆನೋವು, ಅನಿಯಮಿತ ಮುಟ್ಟು, ಮುಟ್ಟು ಇವುಗಳಲ್ಲಿ ಯಾವುದಾದರೂ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ವಿಪರೀತಕರಣಿ ಯೋಗಾಸನ (Viparita Karani yogasan) ತುಂಬಾ ಒಳ್ಳೆಯದು. ಅಯ್ಯೋ ನನಗೆ ಯೋಗನೇ ಬರಲ್ಲಾ, ಮತ್ತೆ ಈ ಆಸನ ಮಾಡುವುದು ಹೇಗೆ ಎಂದು ಭಾವಿಸಬೇಡಿ. ನಿಮಗೆ ಯೋಗಾಸನದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ತೊಂದರೆಯಿಲ್ಲ ಈ ಆಸನ ಆರಾಮವಾಗಿ ಮಾಡಬಹುದು.

ಈ ಆಸನ ತುಂಬಾ ಸರಳವಾದ ಆಸನ, ಆದರೆ ಇದು ನೀಡುವ ಪ್ರಯೋಜನ ಅದ್ಭುತ. ತುಂಬಾ ಸಮಯದಿಂದ ಕಾಡುತ್ತಿರುವ ಸಮಸ್ಯೆಗೆ ಈ ಒಂದು ಆಸನದಿಂದ ಗುಡ್‌ಬೈ ಹೇಳಬಹುದು. ವಿಪರೀತಕರಣಿ ಯೋಗಾಸನವನ್ನು ಸಾಮಾನ್ಯವಾಗಿ ಹೇಳುವುದಾದರೆ ಕಾಲನ್ನು ಗೋಡೆ ಮೇಲೆ ಇಟ್ಟು ಮಾಡುವ ಯೋಗಾಸನ ಇದಾಗಿದೆ. ಈ ಆಸನ ತುಂಬಾನೇ ಸುಲಭವಾದ ಆಸನವಾಗಿದೆ, ಇದನ್ನು ಯಾವ ಸಮಯದಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು, ಅದು ಇದರ ಮತ್ತೊಂದು ಪ್ಲಸ್‌ ಪಾಯಿಂಟ್‌. ಬನ್ನಿ ಈ ಯೋಗಾಸನ ಮಾಡುವುದು ಹೇಗೆ? ಇದರ ಪ್ರಯೋಜನಗಳೇನು ಎಂದು ನೋಡೋಣ:

  1. ವಿಪರೀತ ಕರಣಿ ಮಾಡುವುದು ಹೇಗೆ? ಇದನ್ನು ನೀವು ನೆಲದಲ್ಲಿ ಮಲಗಿಯೂ ಮಾಡಬಹುದು, ಬೆಡ್‌ನಲ್ಲಿಯೂ ಮಾಡಬಹುದು. ಈ ಆಸನ ಮಾಡುವಾಗ ಬೇಕಿದ್ದರೆ ತಲೆಯ ಬಳಿ ದಿಂಬು ಇಡಬಹುದು. ನೀವು ಮಲಗಿ ಎರಡು ಕಾಲುಗಳನ್ನು ಗೋಡೆಯ ಮೇಲಿಡಿ. * ಈ ಭಂಗಿಯಲ್ಲಿ ಕೈಗಳನ್ನು ನಿಮ್ಮ ಸಮೀಪ ಇಡಿ. * ಉಸಿರಾಟ ಸಾಧಾರಣವಾಗಿರಲಿ. * ಈ ಭಂಗಿಯಲ್ಲಿ ದೀರ್ಘ ಉಸಿರನ್ನು ತೆಗೆದು ಬಿಡುವುದಾದರೆ ಇನ್ನೂ ಒಳ್ಳೆಯದು. * ನಂತರ ಏಳುವ ಮುಂಚೆ ಕಾಲುಗಳನ್ನು ಕೆಳಗೆ ಇಳಿಸಿ ಒಂದು ಬದಿಗೆ ತಿರುಗಿ ಕಾಲುಗಳನ್ನು ಹಿಡಿದು ಮಲಗಿ. ಈ ಭಂಗಿಯಲ್ಲಿ 5 ನಿಮಿಷ ಇರಿ. ನಂತರ ನಿಧಾನವಾಗಿ ಎದ್ದೇಳಿ. ಯೂ ಟ್ಯೂಬ್‌ ವೀಡಿಯೋಗಳನ್ನು ನೋಡಿದರೆ ನಿಮಗೆ ಸಿಗುತ್ತೆ, ಈ ಆಸನ ತುಂಬಾ ಸರಳವಾಗಿದೆ.
  2. ಈ ಆಸನಗಳನ್ನು ಯಾರು ಮಾಡಬಾರದು? * ಇದನ್ನು ಮುಟ್ಟಿನ ಸಮಯದಲ್ಲಿ ಮಾಡಬಾರದು (ಮುಟ್ಟಿನ ಸಮಯದಲ್ಲಿ ಕಾಡುವ ನೋವು ಈ ಆಸನವನ್ನು ಅಭ್ಯಾಸ ಮಾಡುವುದರಿಂದ ದೂರಾಗುವುದು) * ಗ್ಲುಕೊಮಾ ಸಮಸ್ಯೆ ಇದ್ದರೆ ಈ ಆಸನ ಮಾಡಬಾರದು. * ನಿಮಗೆ ಕುತ್ತಿಗೆ ನೋವಿದ್ದರೆ ಈ ಆಸನ ಮಾಡಬೇಡಿ.
  3. ವಿಪರೀತಕರಣಿ ಎಷ್ಟು ಹೊತ್ತು ಮಾಡಬಹುದು? * ನೀವು ವಿಪರೀತಕರಣಿ 15 ನಿಮಿಷ ಮಾಡಿ. * ದಿನದಲ್ಲಿ ಎರಡು ಬಾರಿ ಬೇಕಾದರೂ ಮಾಡಬಹುದು. * ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. * ಬೆಳಗ್ಗೆ ಮತ್ತು ಸಂಜೆ ಈ ಯೋಗಾಸನ ಖಾಲಿ ಹೊಟ್ಟೆಯಲ್ಲಿ ಮಾಡಿ.
  4. ವಿಪರೀತಕರಣಿ ಪ್ರಯೋಜನಗಳು * ಸಿಯಾಟಿಕ್‌ ನರ್ವ್‌ಗೆ ತುಂಬಾ ಒಳ್ಳೆಯದು * ನರಗಳಿಗೆ ತುಂಬಾ ರಿಲ್ಯಾಕ್ಸ್ ಮಾಡುತ್ತೆ * ಬೆನ್ನು ಮತ್ತು ಭುಜಗಳಿಗೆ ತುಂಬಾ ಒಳ್ಳೆಯದು * ಮೆನೋಪಾಸ್‌ ಸಮಯದಲ್ಲಿ ತುಂಬಾ ಪ್ರಯೋಜನಕಾರಿ * ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು * ವೇರಿಕೋಸ್‌ ವೇಯಿನ್‌ಗೆ ತುಂಬಾ ಒಳ್ಳೆಯದು (ಸಂಗ್ರಹ -ಎಬಿಕೆ)

Published On - 8:00 pm, Wed, 29 June 22

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?