Fruit After Lunch: ಊಟದ ಬಳಿಕ ಹಣ್ಣುಗಳನ್ನು ಸೇವಿಸಬಾರದೇ? ಇಲ್ಲಿದೆ ಮಾಹಿತಿ
ಹಣ್ಣುಗಳಲ್ಲಿ ಇತರೆ ಯಾವುದೇ ಆಹಾರಗಳಲ್ಲಿ ಸಿಗದ ಕೆಲವು ಅಗತ್ಯವಾದ ಪೋಷಕಾಂಶಗಳು ಅಡಕವಾಗಿರುತ್ತದೆ. ಅವು ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ಜೀವಸತ್ವಗಳನ್ನು ನೀಡುತ್ತವೆ.
ಹಣ್ಣುಗಳಲ್ಲಿ ಇತರೆ ಯಾವುದೇ ಆಹಾರಗಳಲ್ಲಿ ಸಿಗದ ಕೆಲವು ಅಗತ್ಯವಾದ ಪೋಷಕಾಂಶಗಳು ಅಡಕವಾಗಿರುತ್ತದೆ. ಅವು ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ಜೀವಸತ್ವಗಳನ್ನು ನೀಡುತ್ತವೆ. ಹಣ್ಣುಗಳು ತೂಕನಷ್ಟಕ್ಕೆ ಸಹಕಾರಿಯಾಗುವುದರ ಜತೆಗೆ ಕಾಂತಿಯುತ ಚರ್ಮವನ್ನೂ ನೀಡುತ್ತದೆ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ತಿನ್ನಬೇಕು, ಇಲ್ಲದಿದ್ದರೆ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕೆಲವು ಆಹಾರ ತಜ್ಞರು ಹೇಳುತ್ತಾರೆ.
ಊಟಕ್ಕೂ ಅರ್ಧಗಂಟೆ ಮೊದಲು ಹಣ್ಣುಗಳನ್ನು ಸೇವಿಸಬೇಕು ತಜ್ಞರು ಹಣ್ಣುಗಳನ್ನು ಊಟದ ಸಮಯಕ್ಕೆ ಅರ್ಧ ಘಂಟೆಯ ಮೊದಲು ತಿನ್ನಬೇಕು ಎಂದು ಸಲಹೆ ನೀಡುತ್ತಾರೆ, ಏಕೆಂದರೆ ಹಣ್ಣುಗಳು ಫೈಬರ್ ಹಾಗೂ ಪಾಲಿಫಿನಾಲ್ಗಳನ್ನು ಹೊಂದಿದ್ದು, ಅದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಎಲ್ಲಾ ಹಣ್ಣುಗಳಲ್ಲಿ ಅತಿಯಾದ ತ್ರಿಗ್ಲಿಸೆಲಾಯ್ಡ್ಸ್ಗಳಿರುತ್ತವೆ, ಅದರಿಂದ ಹೃದಯ ಸಂಬಂಧಿ ಕಾಯಿಲೆ ಹಾಗೂ ಕೊಬ್ಬಿನಾಂಶ ಹೆಚ್ಚಾಗುತ್ತದೆ.
ಊಟದ ಮಧ್ಯೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಿ, ಹಸಿವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತದೆ.
ಹಣ್ಣುಗಳನ್ನು ಬೆಳಗಿನ ಉಪಾಹಾರಕ್ಕಾಗಿ ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಅವುಗಳನ್ನು ಸಹಿಯಿಲ್ಲದ ಮೊಸರಿನೊಂದಿಗೆ ಸೇರಿಸಿ ತಿನ್ನಿ. ಪೀಚ್‌ಗಳು, ಬೆರ್ರಿ ಮತ್ತು ಸೇಬುಗಳು ಯಾವುದೇ ಹಾನಿಕಾರಕ ಕ್ಯಾಲೋರಿಗಳಿಲ್ಲದ ಅತ್ಯುತ್ತಮ ಹಣ್ಣುಗಳು ಎನಿಸಿಕೊಂಡಿವೆ.
ಹಣ್ಣುಗಳು ಆರೋಗ್ಯಕರವಾಗಿದ್ದರೂ, ಅವುಗಳನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಹಲವು ಸಮಸ್ಯೆಗಳು ಎದುರಾಗಲಿವೆ. ಸಕ್ಕರೆಯ ಮಟ್ಟದಲ್ಲಿ ಹಠಾತ್ ಬದಲಾವಣೆ ಅಪಾಯವನ್ನುಂಟುಮಾಡಲು ಮಧುಮೇಹಿಗಳು ಯಾವಾಗಲೂ ಕಡಿಮೆ GI ಹೊಂದಿರುವ ಹಣ್ಣುಗಳನ್ನು ತಿನ್ನಬೇಕು. ಮಾವಿನಹಣ್ಣುಗಳು ಅತ್ಯಧಿಕ ಜಿಐ ಹೊಂದಿದ್ದರೆ ಜಾಮೂನ್, ಸ್ಟ್ರಾಬೆರಿ, ಪ್ಲಮ್ ಮತ್ತು ಕಿತ್ತಳೆಗಳಂತಹ ಹಣ್ಣುಗಳು ಕಡಿಮೆ ಹೊಂದಿವೆ.
ಸೀತಾಫಲ: ಸೀತಾಫಲ ಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಬಿ6 ಅಧಿಕವಾಗಿರುತ್ತದೆ. ಜತೆಗೆ ಸೀತಾಫಲ ಹಣ್ಣು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೀಗಿರುವಾಗ ಮನೆಯಲ್ಲಿಯೇ ಬೆಳೆದ ಸೀತಾಫಲ ಹಣ್ಣನ್ನು ಸೇವಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಕಿತ್ತಳೆ ಹಣ್ಣು; ನಿಯಮಿತವಾಗಿ ಕಿತ್ತಳೆ ಹಣ್ಣನ್ನು ಸೇವಿಸುವ ಅಭ್ಯಾಸದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಬಹುದು. ಜತೆಗೆ ಮಲಬದ್ಧತೆ ಸಮಸ್ಯೆ ಇರುವವರು ಕಿತ್ತಳೆ ಹಣ್ಣು ಸೇವನೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಬಾಳೆಹಣ್ಣು: ಬಾಳೆಹಣ್ಣು ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಹಣ್ಣು ತಿನ್ನುವುದಾಗಿ ತಜ್ಞರು ಸಲಹೆ ನೀಡುತ್ತಾರೆ. ಅದಕ್ಕಾಗಿಯೇ ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನುವಂತೆ ಸಲಹೆ ನೀಡುವುದು. ಬಾಳೆಹಣ್ಣು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಬಹುದು.
ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.