Water Intoxication: ಅತಿಯಾಗಿ ನೀರು ಕುಡಿದು ಆಸ್ಪತ್ರೆ ಸೇರಿದ ಮಹಿಳೆ, ಏನಿದು ನೀರಿನ ಮಾದಕತೆ? ಈ ಬಗ್ಗೆ ತಜ್ಞರು ಹೇಳುವುದೇನು?

ದೇಹದ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯಬೇಕೆಂದರೆ ದೇಹಕ್ಕೆ ನೀರು ಅಗತ್ಯವಾಗಿ ಬೇಕು. ಹೀಗಾಗಿ ದಿನಕ್ಕೆ ಇಂತಿಷ್ಟು ಲೀಟರ್ ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಅತಿಯಾದ ನೀರಿನ ಸೇವನೆಯಿಂದ ಆರೋಗ್ಯಕ್ಕೆ ತೊಂದರೆಯೇ ಅಧಿಕ. ದೇಹದಲ್ಲಿ ನೀರಿನಾಂಶ ಅತಿಯಾದರೆ ನೀರಿನ ಮಾದಕತೆ ಅಥವಾ ಹೈಪೋನಾಟ್ರೀಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಅತಿಯಾದ ನೀರಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕವೇ?ಏನಿದು ನೀರಿನ ಮಾದಕತೆ ಇದರ ಲಕ್ಷಣಗಳೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Water Intoxication: ಅತಿಯಾಗಿ ನೀರು ಕುಡಿದು ಆಸ್ಪತ್ರೆ ಸೇರಿದ ಮಹಿಳೆ, ಏನಿದು ನೀರಿನ ಮಾದಕತೆ? ಈ ಬಗ್ಗೆ ತಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 24, 2024 | 3:05 PM

ಅತಿಯಾದರೆ ಅಮೃತವೂ ವಿಷ ಕೂಡ ಎನ್ನುವ ಮಾತಿದೆ. ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಿತಿಮೀರಿ ನೀರು ಕುಡಿದ್ರೆ ತುಂಬಾನೇ ಅಪಾಯಕಾರಿ. ದಿನಕ್ಕೆ ಕನಿಷ್ಠ 2-3 ಲೀಟರ್ ನೀರನ್ನು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗಂತ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ನಾನಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ದೃಷ್ಟಿಯಿಂದ 40 ವರ್ಷದ ಮಹಿಳೆಯೊಬ್ಬರು ಇದನ್ನು ಕಾರ್ಯರೂಪಕ್ಕೆ ತರಲು ಹೋಗಿ ಆಸ್ಪತ್ರೆ ಸೇರಿದ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ.

ಈ ಮಹಿಳೆಯೂ ಬೆಳಗ್ಗೆ ಎದ್ದ ತಕ್ಷಣ ಸುಮಾರು 4 ಲೀಟರ್ ನೀರು ಕುಡಿದಿದ್ದಾರೆ. ನೀರು ಕುಡಿದ ಕೆಲವು ನಿಮಿಷಗಳ ನಂತರ ಆಕೆ ಏನಾಗುತ್ತಿದೆ ಎಂದು ತಿಳಿಯದ ಸ್ಥಿತಿಗೆ ತಲುಪಿದ್ದು ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಡಾ.ಸುಧೀರ್ ಕುಮಾರ್, ಹೆಚ್ಚಿನ ಪ್ರಮಾಣದ ನೀರು ಕುಡಿದ ನಂತರ ಮಹಿಳೆ ತೀವ್ರ ತಲೆನೋವು, ವಾಕರಿಕೆ ಅಥವಾ ವಾಂತಿಯಿಂದ ಬಳಲುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ದೇಹದಲ್ಲಿರುವ ತ್ಯಾಜ್ಯವೆಲ್ಲ ಹೊರಹೋಗುತ್ತದೆ. ಆದರೆ ಆಕೆಯು ನೀರಿನ ಮಾದಕತೆಯಿಂದ ಬಳಲಿದ್ದು, ಅಧಿಕ ನೀರಿನ ಸೇವನೆಯೂ ವಿಷವುಂಟು ಮಾಡಿದೆ ಆ ಮಹಿಳೆಯೂ 110 ಎಂಎಂಒಎಲ್ / ಅಧಿಕ ಸೋಡಿಯಂ ಮಟ್ಟವನ್ನು ಹೊಂದಿರುವ ಬಗ್ಗೆ ತಿಳಿಸಿದ್ದಾರೆ.

ನೀರಿನ ಮಾದಕತೆ ಎಂದರೇನು?

ನೀರಿನ ವಿಷವನ್ನು ಮಾದಕತೆ ಅಥವಾ ಹೈಪರ್ಹೈಡ್ರೇಶನ್ ಎಂದು ಕರೆಯಲಾಗುತ್ತದೆ, ಈ ಸ್ಥಿತಿಯಲ್ಲಿ ದೇಹದಲ್ಲಿನ ನೀರಿನ ಮಟ್ಟವು ಎಲೆಕ್ಟ್ರೋಲೈಟ್ ಗಿಂತ ಹೆಚ್ಚಾಗಿರುತ್ತದೆ. ಎಲೆಕ್ಟ್ರೋಲೈಟ್ ಗಳು ದೇಹದ ದ್ರವ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ನೀರು ಕುಡಿದಾಗ ರಕ್ತವು ನೀರನ್ನು ಹೀರಿಕೊಳ್ಳುತ್ತದೆ. ಮೂತ್ರಪಿಂಡಗಳು ಉಳಿದ ನೀರನ್ನು ಫಿಲ್ಟರ್ ಮಾಡಿ ಮೂತ್ರದ ಮೂಲಕ ಹೊರಹಾಕುತ್ತದೆ. ಆದರೆ ಹೆಚ್ಚುವರಿ ನೀರು ಕುಡಿದಾಗ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಏರುಪೇರಾಗುತ್ತದೆ. ಈ ವೇಳೆಯಲ್ಲಿ ರಕ್ತದಲ್ಲಿನ ಎಲೆಕ್ಟ್ರೋಲೈಟ್ ಮಟ್ಟವು ಕಡಿಮೆಯಾಗುತ್ತದೆ. ಇದನ್ನು ನೀರಿನ ವಿಷ ಅಥವಾ ನೀರಿನ ಮಾದಕತೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಮೊಟ್ಟೆ ತಿನ್ನುವಾಗ ಈ ತಪ್ಪು ಮಾಡಬೇಡಿ: ಗಂಭೀರ ಕಾಯಿಲೆಗೆ ತುತ್ತಾಗುತ್ತೀರ

ನೀರಿನ ಮಾದಕತೆಯ ಲಕ್ಷಣಗಳು

* ವಾಕರಿಕೆ

* ತಲೆನೋವು

* ಗೊಂದಲ ಮತ್ತು ಏಕಾಗ್ರತೆಯ ಕೊರತೆ

* ಆಯಾಸ

* ಸ್ನಾಯು ದೌರ್ಬಲ್ಯ,

* ಕಾಲುಗಳು ಮತ್ತು ತೋಳುಗಳಲ್ಲಿ ನೋವು

* ಮೆದುಳಿನಲ್ಲಿ ಊತವು ಉಂಟಾಗಬಹುದು.

ನೀರಿನ ಮಾದಕತೆಗೆ ಚಿಕಿತ್ಸೆ ವಿಧಾನ ಹೇಗಿರುತ್ತದೆ?

ಹೆಚ್ಚು ನೀರು ಕುಡಿಯುವುದನ್ನು ನಿಲ್ಲಿಸುವುದು ಅಥವಾ ನಿಯಮಿತವಾಗಿ ನೀರು ಕುಡಿಯುವುದು ನೀರಿನ ಮಾದಕತೆಯನ್ನು ತಡೆಯುವ ಮಾರ್ಗಗಳಾಗಿವೆ. ಅದಲ್ಲದೇ ವೈದ್ಯರು ನೀರಿನ ಮಾದಕತೆಯ ಕಾರಣವನ್ನು ಅವಲಂಬಿಸಿ ಚಿಕಿತ್ಸೆಯನ್ನು ನೀಡುತ್ತಾರೆ. ದೇಹದಿಂದ ನೀರನ್ನು ಹೊರಹಾಕಲು ವೈದ್ಯರು ಮೂತ್ರವರ್ಧಕಗಳು ಅಥವಾ ಐವಿ ದ್ರವಗಳನ್ನು ಶಿಫಾರಸು ಮಾಡುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
ನೋವಿನಲ್ಲೂ ಅಭಿಮಾನಿಗಳನ್ನು ನೋಡಿ ನಗುತ್ತಾ ಕೈ ಬೀಸಿದ ದರ್ಶನ್
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
2 ಸಮುದಾಯಗಳ ನಡುವೆ ಭೂಪಾಲ್​ನಲ್ಲಿ ಹಿಂಸಾತ್ಮಕ ಘರ್ಷಣೆ; 6 ಜನರಿಗೆ ಗಾಯ
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ
ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ
ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ