AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ಈ 5 ಮನೆಕೆಲಸಗಳನ್ನು ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ

ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ಕೊಳ್ಳುವ ವಿಷಯಕ್ಕೆ ಬಂದಾಗ, ಜಿಮ್ ಗೆ ಹೋಗುವುದು ಅಥವಾ ವಾಕಿಂಗ್ ಗೆ ಹೋಗುವುದು ಮನಸ್ಸಿಗೆ ಬರುವ ಮೊದಲು ವಿಷಯಗಳಾಗಿವೆ. ಆದರೆ ದೈನಂದಿನ ಮನೆಕೆಲಸಗಳನ್ನು ಮಾಡುತ್ತಾ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಕೊಬ್ಬನ್ನು ಕರಗಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಸತ್ಯ. ನಿಮ್ಮ ತೂಕ ಇಳಿಸಲು ಸಹಾಯ ಮಾಡುವ ಐದು ಮನೆಕೆಲಸಗಳು ಇಲ್ಲಿವೆ.

Weight Loss: ಈ 5 ಮನೆಕೆಲಸಗಳನ್ನು ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 08, 2024 | 1:55 PM

Share

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ರೀತಿಯ ವ್ಯಾಯಾಮ, ಕಸರತ್ತುಗಳನ್ನು ಮಾಡುತ್ತಾರೆ. ಕೆಲವರು ಊಟವನ್ನು ಕೂಡ ತ್ಯಜಿಸುತ್ತಾರೆ. ಆದರೆ ಇಷ್ಟೆಲ್ಲಾ ಕಷ್ಟ ಪಡುವ ಬದಲು ಸುಲಭವಾಗಿ ದೇಹದ ಕೊಬ್ಬನ್ನು ಕರಗಿಸಬಹುದು. ಅದು ಕೂಡ ಮನೆಯ ಕೆಲಸಗಳನ್ನು ಸರಿಯಾಗಿ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ಕೊಳ್ಳುವ ವಿಷಯಕ್ಕೆ ಬಂದಾಗ, ಜಿಮ್ ಗೆ ಹೋಗುವುದು ಅಥವಾ ವಾಕಿಂಗ್ ಗೆ ಹೋಗುವುದು ಮನಸ್ಸಿಗೆ ಬರುವ ಮೊದಲು ವಿಷಯಗಳಾಗಿವೆ. ಆದರೆ ದೈನಂದಿನ ಮನೆಕೆಲಸಗಳನ್ನು ಮಾಡುತ್ತಾ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ಕೊಬ್ಬನ್ನು ಕರಗಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಸತ್ಯ. ನಿಮ್ಮ ತೂಕ ಇಳಿಸಲು ಸಹಾಯ ಮಾಡುವ ಐದು ಮನೆಕೆಲಸಗಳು ಇಲ್ಲಿವೆ.

ಗುಡಿಸುವುದು

ಮನೆ ಗುಡಿಸುವುದರಿಂದ ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ನಿಮಗೆ ಗುಡಿಸಲು ಕಷ್ಟವಾಗುವುದಾದರೆ ವ್ಯಾಕ್ಯೂಮ್ ಕ್ಲೀನರ್ ಬಳಸಬಹುದು. ಇದನ್ನು ತಳ್ಳುವುದು ಮತ್ತು ಎಳೆಯುವುದು ನಿಮ್ಮ ತೋಳು, ಭುಜ ಮತ್ತು ಕಾಲುಗಳಿಗೆ ವ್ಯಾಯಾಮ ಸಿಗುತ್ತದೆ. ಕಸವನ್ನು ಬಗ್ಗಿ ಗುಡಿಸುವುದರಿಂದ ಬೊಜ್ಜು ಕರಗುವುದಲ್ಲದೆ ದೇಹ ನಿರಾಳವಾಗುತ್ತದೆ.

ನೆಲ ಒರೆಸುವುದು

ನಿಮ್ಮ ಮನೆಯ ಪ್ರತಿಯೊಂದು ಮೂಲೆ ಮೂಲೆಯನ್ನು ಸ್ವಚ್ಛವಾಗಿ ಒರೆಸಿ. ಅಥವಾ ಮಾಪಿಂಗ್ ಕೂಡ ಮಾಡಬಹುದು. ಇದರಿಂದ ನಿಮ್ಮ ತೋಳು, ತೊಡೆ ಭಾಗ, ಸೊಂಟದ ಭಾಗಕ್ಕೆ ವ್ಯಾಯಾಮ ದೊರೆಯುತ್ತದೆ. ಇದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ತೋಟಗಾರಿಕೆ

ನಿಮ್ಮ ತೋಟವನ್ನು ನೋಡಿಕೊಳ್ಳುವುದು ಅಥವಾ ಕೈತೋಟವನ್ನು ಸುಂದರಗೊಳಿಸುವುದು ಹೆಚ್ಚುವರಿ ಕ್ಯಾಲೊರಿಗಳನ್ನುಕಡಿಮೆ ಮಾಡುತ್ತದೆ. ಮಣ್ಣನ್ನು ಅಗೆಯುವುದು, ನೆಡುವುದು, ಕಳೆ ತೆಗೆಯುವುದು ಮತ್ತು ನೀರು ಹಾಕುವುದು ಎಲ್ಲವೂ ದೈಹಿಕ ಚಲನೆಯನ್ನು ಒಳಗೊಂಡಿರುತ್ತದೆ, ಅದು ನಿಮ್ಮ ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ.

ಬಟ್ಟೆ ಒಗೆಯುವುದು

ಬಟ್ಟೆ ತೊಳೆಯುವುದು ಅದರಲ್ಲಿಯೂ ಕೈಯಲ್ಲಿ ತೊಳೆದರೆ ಬಹಳ ಉತ್ತಮ. ಇವು ನಿಮ್ಮ ಕ್ಯಾಲೊರಿ ಕಡಿಮೆ ಮಾಡಿಕೊಳ್ಳುವ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ. ಬಟ್ಟೆ ತೊಳೆಯುವುದು, ಅದನ್ನು ಎತ್ತುವುದು, ಒಣಗಿಸುವುದು ಇತ್ಯಾದಿ ಚಟುವಟಿಕೆಗಳು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಒಗ್ಗರಣೆಗೆ ಮಾತ್ರವಲ್ಲ, ಕರಿಬೇವು ಹಲವಾರು ರೀತಿಯ ಆರೋಗ್ಯ ಪ್ರಯೋಜನ ನೀಡುತ್ತೆ

ಕಿಟಕಿಗಳನ್ನು ಸ್ವಚ್ಛಗೊಳಿಸುವುದು

ಮೆಟ್ಟಿಲು ಹತ್ತಿ ಕಿಟಕಿಗಳಲ್ಲಿರುವ ದೂಳು, ಕೊಳೆಯನ್ನು ಉಜ್ಜುವುದರಿಂದ ನಿಮ್ಮ ತೋಳು, ಭುಜ ಮತ್ತು ಪ್ರಮುಖ ಸ್ನಾಯುಗಳಿಗೆ ವ್ಯಾಯಮ ಸಿಕ್ಕಂತಾಗುತ್ತದೆ. ನೀವು ಒಂದು ಅರ್ಧ ಗಂಟೆ ಕೆಲಸ ಮಾಡಿದರೂ ಸಾಕಾಗುತ್ತದೆ.

ಈ ಮನೆಕೆಲಸಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಮನೆಯೂ ಸ್ವಚ್ಛವಾಗಿರುತ್ತದೆ ಜೊತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಇದು ನೀವು ಫಿಟ್ ಆಗಿರಲು ಅಳವಡಿಸಿಕೊಳ್ಳಬಹುದಾದ ಉತ್ತಮ ವಿಧಾನವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:11 pm, Sat, 8 June 24

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ