Bad Breath: ಬ್ರಷ್ ಮಾಡಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ, ನಿರ್ಲಕ್ಷ್ಯ ಮಾಡಬೇಡಿ
ದಂತವೈದ್ಯರು ದಿನಕ್ಕೆ ಎರಡು ಬಾರಿ ಬ್ರಷ್ ಮಾಡಲು ಮತ್ತು ಪ್ರತಿ ಬಾರಿ ಊಟವಾದ ಬಳಿಕ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಲು ಶಿಫಾರಸು ಮಾಡುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೂ ಕೆಟ್ಟ ವಾಸನೆ ಬರುತ್ತಿದ್ದರೆ, ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಬಾಯಿಯ ದುರ್ವಾಸನೆಯು ಅನೇಕ ಅಪಾಯಕಾರಿ ಕಾಯಿಲೆಗಳ ಆರಂಭಿಕ ಲಕ್ಷಣವಾಗಿದೆ. ಆ 5 ರೋಗಗಳು ಯಾವುವು ತಿಳಿದುಕೊಳ್ಳಿ.
ನಿಯಮಿತವಾಗಿ ಬಾಯಿಯನ್ನು ಸ್ವಚ್ಛಗೊಳಿಸದಿದ್ದರೆ ದುರ್ವಾಸನೆ ಬರುವುದು ಸಾಮಾನ್ಯ, ಆದರೆ ಬ್ರಷ್ ಮಾಡಿದ ನಂತರವೂ ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ಬಾಯಿಯ ದುರ್ವಾಸನೆಗೆ ಸಾಮಾನ್ಯವಾಗಿ ಯಾವುದೇ ಗಂಭೀರ ಕಾರಣಗಳಿಲ್ಲ. ಏಕೆಂದರೆ ಈ ವಾಸನೆ ಆಹಾರ ಪದ್ಧತಿ ಮತ್ತು ಬಾಯಿಯ ನೈರ್ಮಲ್ಯವನ್ನು ಅವಲಂಬಿಸಿರುತ್ತದೆ. ಆದ್ದರಿಂದ, ದಂತವೈದ್ಯರು ದಿನಕ್ಕೆ ಎರಡು ಬಾರಿ ಬ್ರಷ್ ಮಾಡಲು ಮತ್ತು ಪ್ರತಿ ಬಾರಿ ಊಟವಾದ ಬಳಿಕ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಲು ಶಿಫಾರಸು ಮಾಡುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೂ ಕೆಟ್ಟ ವಾಸನೆ ಬರುತ್ತಿದ್ದರೆ, ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಬಾಯಿಯ ದುರ್ವಾಸನೆಯು ಅನೇಕ ಅಪಾಯಕಾರಿ ಕಾಯಿಲೆಗಳ ಆರಂಭಿಕ ಲಕ್ಷಣವಾಗಿದೆ. ಆ 5 ರೋಗಗಳು ಯಾವುವು ತಿಳಿದುಕೊಳ್ಳಿ.
ಉಸಿರಾಟದ ಸೋಂಕು: ಉಸಿರಾಡುವ ನಾಳದಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಈ ಸಮಯದಲ್ಲಿ, ವಾಸನೆ ಉಂಟುಮಾಡುವ ಅಂಶಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಹಾಗಾಗಿ ಬಾಯಿಯಿಂದ ದುರ್ವಾಸನೆ ಬರುತ್ತದೆ.
ಜೀರ್ಣಕಾರಿ ಸಮಸ್ಯೆ: ಬಾಯಿಯ ದುರ್ವಾಸನೆಯು ಹೊಟ್ಟೆ ಹುಣ್ಣುಗಳಂತಹ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಸಂಬಂಧಿಸಿದ್ದು ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಮರಳಿದಾಗ. ಇದು ಬಾಯಿಯಲ್ಲಿ ಹುಳಿ ರುಚಿಯನ್ನು ಉಂಟುಮಾಡುತ್ತದೆ. ಇದು ಕೂಡ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ.
ಮೂತ್ರಪಿಂಡದ ಕಾಯಿಲೆ: ಮೂತ್ರಪಿಂಡದ ಕಾಯಿಲೆಯು ದೇಹದಿಂದ ಅನಗತ್ಯ ವಿಷಕಾರಿ ಅಂಶವನ್ನು ಹೊರಹಾಕುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಸಂದರ್ಭದಲ್ಲಿ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ವಿಷದಿಂದ ಉಸಿರಾಟವು ಅಮೋನಿಯಾದಂತೆ ವಾಸನೆ ಬೀರುತ್ತದೆ. ಇದನ್ನು ಯುರೆಮಿಕ್ ಉಸಿರಾಟ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿ, ಮೂತ್ರಪಿಂಡದ ಕಲ್ಲು ಕರಗುತ್ತವೆ!
ಮಧುಮೇಹ: ದೀರ್ಘಕಾಲದವರೆಗೆ ದೇಹದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಅಂಶ ಇರುವುದರಿಂದಲೂ ದುರ್ವಾಸನೆ ಪ್ರಾರಂಭವಾಗುತ್ತದೆ. ಮಧುಮೇಹಿಗಳಲ್ಲಿ ಇದು ಬಹಳ ಸಾಮಾನ್ಯ ಸಮಸ್ಯೆಯಾಗಿದೆ.
ಪಿತ್ತಜನಕಾಂಗದ ಅಸ್ವಸ್ಥತೆಗಳು: ಸಿರೋಸಿಸ್ ಅಥವಾ ಯಕೃತ್ತಿನ ಸಮಸ್ಯೆಗಳು ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: