Ovarian Cancer: ಮಹಿಳೆಯರಲ್ಲಿ ಹೆಚ್ಚುತ್ತಿದೆ ಅಂಡಾಶಯ ಕ್ಯಾನ್ಸರ್: ಲಕ್ಷಣ, ಚಿಕಿತ್ಸೆ ಬಗ್ಗೆ ಮಾಹಿತಿ

| Updated By: ನಯನಾ ರಾಜೀವ್

Updated on: Jun 23, 2022 | 9:30 PM

ಅಂಡಾಶಯ ಕ್ಯಾನ್ಸರ್( Ovarian Cancer) ಭಾರತೀಯ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್​ನ ಪ್ರಕಾರವಾಗಿದೆ. ಇತರೆ ಕ್ಯಾನ್ಸರ್​ಗಳಿಗೆ ಹೋಲಿಸಿದರೆ ಇದು ಮಹಿಳೆಯರಲ್ಲಿ ಕಂಡು ಬರುವ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಸುಮಾರು 14% ರಷ್ಟಿದೆ.

Ovarian Cancer: ಮಹಿಳೆಯರಲ್ಲಿ ಹೆಚ್ಚುತ್ತಿದೆ ಅಂಡಾಶಯ ಕ್ಯಾನ್ಸರ್: ಲಕ್ಷಣ, ಚಿಕಿತ್ಸೆ ಬಗ್ಗೆ ಮಾಹಿತಿ
Ovarian Cancer
Follow us on

ಅಂಡಾಶಯ ಕ್ಯಾನ್ಸರ್( Ovarian Cancer)  ಭಾರತೀಯ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್​ನ ಪ್ರಕಾರವಾಗಿದೆ. ಇತರೆ ಕ್ಯಾನ್ಸರ್​ಗಳಿಗೆ ಹೋಲಿಸಿದರೆ ಇದು ಮಹಿಳೆಯರಲ್ಲಿ ಕಂಡು ಬರುವ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಸುಮಾರು 14% ರಷ್ಟಿದೆ. ಇದರಿಂದ ಸಾವು ಕೂಡ ಸಂಭವಿಸುತ್ತದೆ. ಸಾಮಾನ್ಯವಾಗಿ ಕಂಡು ಬರುವ ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಹೊಟ್ಟೆ ತುಂಬಿದ ಭಾವನೆ ಅಥವಾ ಆಗಾಗ ಶೌಚಾಲಯಕ್ಕೆ ಹೋಗುವುದು ಇಂತಹ ಲಕ್ಷಣಗಳನ್ನು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎಂದು ಪರಿಗಣಿಸಿ, ಹೆಚ್ಚಿನ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದಿಲ್ಲ.

ಇದರ ಹಿಂದಿನ ದೊಡ್ಡ ಕಾರಣವೆಂದರೆ ಈ ರೋಗಲಕ್ಷಣಗಳು ತುಂಬಾ ಅಸ್ಪಷ್ಟವಾಗಿರುತ್ತವೆ ಅಥವಾ ಹೊಟ್ಟೆಯ ಅಸ್ವಸ್ಥತೆಯನ್ನು ಹೋಲುತ್ತವೆ.

ಇದನ್ನೂ ಓದಿ

ಅಂಡಾಶಯಗಳ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ಪ್ರಮುಖವಾಗಿ ಮಹಿಳೆಯರನ್ನು ಕಾಡುವ ಕ್ಯಾನ್ಸರ್​ಗಳಾಗಿವೆ. ಆನುವಂಶಿಕ ಜೀನ್‌ಗಳು (BRCA1 ಮತ್ತು BRCA2, ಲಿಂಚ್ ಸಿಂಡ್ರೋಮ್, ಮತ್ತು ಜೀನ್‌ಗಳು BRIP1, RAD51C ಮತ್ತು RAD51D), ಮತ್ತು ಹಾರ್ಮೋನ್ ಬಳಕೆಗೆ ಸಂಬಂಧಿಸಿದ ಇತರ ಜೀನ್ ಬದಲಾವಣೆಗಳು ಹಾಗೂ ಬದಲಿ ಚಿಕಿತ್ಸೆಯು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ, ಅಧಿಕ ತೂಕ ಅಥವಾ ಬೊಜ್ಜು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಮಹಿಳೆಯರಲ್ಲಿ ಸ್ಥೂಲಕಾಯತೆಯು ಹೆಚ್ಚುತ್ತಿದೆ, ಇದು ಅಂಡಾಶಯದ ಕ್ಯಾನ್ಸರ್​ಗೆ ಅಪಾಯಕಾರಿ ಅಂಶವಾಗಿ ಕೊಡುಗೆ ನೀಡುತ್ತದೆ. ಎದೆಹಾಲು ಕುಡಿಸುವುದು, ಮಗುವಿಗೆ ಜನ್ಮ ನೀಡುವುದರಿಂದ ಈ ಅಪಾಯ ಕಡಿಮೆ ಮಾಡಬಹುದು.

ಅಂಡಾಶಯ ಕ್ಯಾನ್ಸರ್ ಸೈಲೆಂಟ್ ಕಿಲ್ಲರ್

ಅಂಡಾಶಯ ಕ್ಯಾನ್ಸರ್​ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಹೊಟ್ಟೆ ಉಬ್ಬುವುದು, ತಿನ್ನಲು ಕಷ್ಟವಾಗುವಂಥದ್ದು ಇಂತಹ ಸಾಮಾನ್ಯ ಲಕ್ಷಣಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ನಂತರದಲ್ಲಿ ಅತಿಯಾದ ತೂಕ ನಷ್ಟಮ ಅಸ್ವಸ್ಥತೆ, ಬೆನ್ನು ನೋವು, ಆಗಾಗ ಮೂತ್ರ ವಿಸರ್ಜನೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣವಾಗಿ ಇದು ಜೀವವನ್ನೂ ಕಸಿಯಬಹುದು.

ಕ್ಯಾನ್ಸರ್ ಪತ್ತೆ ಹಚ್ಚುವುದು ಹೇಗೆ?
ರೋಗ ಬೇಗ ಪತ್ತೆ, ಸ್ಕ್ರೀನಿಂಗ್ ಮೂಲಕ ಅಂಡಾಶಯ ಕ್ಯಾನ್ಸರ್​ ಅನ್ನು ಪತ್ತೆ ಹಚ್ಚಬಹುದು. ಇದರಿಂದ ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಜನನ ನಿಯಂತ್ರಣ ಮಾತ್ರೆಗಳನ್ನು (OCP) ತೆಗೆದುಕೊಳ್ಳುವುದು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ. ಆದರೆ ವೈದ್ಯರನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಳ್ಳಿ.

ಯಾವುದೇ ರೀತಿಯ ಕ್ಯಾನ್ಸರ್ ಪ್ರಕಾರವು ಭಯವನ್ನು ಸೃಷ್ಟಿಸುತ್ತದೆ. ರೊಬೊಟಿಕ್ ಅಸಿಸ್ಟೆಂಟ್ ಸರ್ಜರಿ ಮೂಲಕ ಗುಣಪಡಿಸಬಹುದು.