ದೇಹಕ್ಕೆ ಮಿನರಲ್ಸ್ ಯಾಕೆ ಅಗತ್ಯ? ಇಲ್ಲಿದೆ ಪೂರ್ತಿ ಮಾಹಿತಿ

|

Updated on: Sep 11, 2023 | 5:14 PM

ಖನಿಜಗಳು ನಮ್ಮ ಹೃದಯ, ಮೆದುಳು, ಮೂಳೆ, ಹಾರ್ಮೋನುಗಳು ಮತ್ತು ಸ್ನಾಯುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖ ಪೋಷಕಾಂಶವಾಗಿದೆ. ಪ್ರಾಣಿ ಮತ್ತು ಸಸ್ಯ ಆಧಾರಿತ ಆಹಾರಗಳಿಂದ ನಮ್ಮ ದೇಹಕ್ಕೆ ಖನಿಜಗಳನ್ನು ಪಡೆಯಬಹುದು.

ದೇಹಕ್ಕೆ ಮಿನರಲ್ಸ್ ಯಾಕೆ ಅಗತ್ಯ? ಇಲ್ಲಿದೆ ಪೂರ್ತಿ ಮಾಹಿತಿ
ಹಣ್ಣುಗಳು
Image Credit source: pexels.com
Follow us on

ನಮ್ಮ ದೇಹ ಆರೋಗ್ಯದಿಂದ ಇರಬೇಕೆಂದರೆ ಖನಿಜಾಂಶ (Minerals) ಬಹಳ ಅಗತ್ಯ. ನಮ್ಮ ದೇಹದ ಕಾರ್ಯನಿರ್ವಹಣೆಗೆ ಬಹಳ ಅಗತ್ಯವಾದ ಕೆಲವು ಪೋಷಕಾಂಶಗಳು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗುವುದಿಲ್ಲ. ಅವುಗಳನ್ನು ನಾವು ನಾನಾ ಆಹಾರ, ಹಣ್ಣು (Fruits), ತರಕಾರಿಗಳ ಮೂಲಕ ದೇಹಕ್ಕೆ ನೀಡಬೇಕಾಗುತ್ತದೆ. ಖನಿಜಗಳು ನಮ್ಮ ಹೃದಯ, ಮೆದುಳು, ಮೂಳೆ, ಹಾರ್ಮೋನುಗಳು ಮತ್ತು ಸ್ನಾಯುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖ ಪೋಷಕಾಂಶವಾಗಿದೆ.

ಪ್ರೋಟೀನ್‌ಗಳು, ತರಕಾರಿಗಳು, ಹಣ್ಣುಗಳು, ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ನೀರನ್ನು ಒಳಗೊಂಡಿರುವ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವ ವ್ಯಕ್ತಿಯು ತನ್ನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುತ್ತಾನೆ.

ಇದನ್ನೂ ಓದಿ: ಮನುಷ್ಯನ ದೇಹಕ್ಕೆ ಅತ್ಯಗತ್ಯವಾದ 6 ಪೋಷಕಾಂಶಗಳಿವು

ನಮ್ಮ ದೇಹಕ್ಕೆ ಖನಿಜಗಳನ್ನು ಪ್ರಾಣಿ ಮತ್ತು ಸಸ್ಯ ಆಧಾರಿತ ಆಹಾರಗಳಿಂದ ಪಡೆಯಬಹುದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

1. ನಟ್ಸ್ (ವಾಲ್‌ನಟ್ಸ್, ಕಡಲೆಕಾಯಿ, ಗೋಡಂಬಿ ಇತ್ಯಾದಿ)

2. ಕ್ರೂಸಿಫೆರಸ್ ತರಕಾರಿಗಳು (ಹೂಕೋಸು, ಎಲೆಕೋಸು, ಕೋಸುಗಡ್ಡೆ ಇತ್ಯಾದಿ)

3. ಉಷ್ಣವಲಯದ ಹಣ್ಣುಗಳು (ಮಾವು, ಬಾಳೆಹಣ್ಣುಗಳು, ಅನಾನಸ್ ಇತ್ಯಾದಿ)

4. ಪಿಷ್ಟ ತರಕಾರಿಗಳು (ಆಲೂಗಡ್ಡೆ ಇತ್ಯಾದಿ)

5. ಮಾಂಸ (ಪ್ರಾಣಿಗಳ ಯಕೃತ್ತು, ಹೃದಯ, ನಾಲಿಗೆ ಇತ್ಯಾದಿ)

6. ಹಸಿರು ತರಕಾರಿಗಳು (ಪಾಲಕ್, ಲೆಟಿಸ್ ಇತ್ಯಾದಿ)

7. ಬೆರ್ರಿ ಹಣ್ಣುಗಳು

8. ಮೊಟ್ಟೆಯ ಹಳದಿ ಭಾಗ.

9. ಅವಕಾಡೋ (ಬಟರ್ ಫ್ರೂಟ್)

10. ಧಾನ್ಯಗಳು

11. ಕೋಕೋ

12. ಅಯೋಡಿನ್ ಇರುವ ಉಪ್ಪು.

13. ಹಾಲು ಮತ್ತು ಇತರ ಡೈರಿ ಉತ್ಪನ್ನಗಳು.

14. ಸೀ ಫುಡ್.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಹಣ್ಣುಗಳನ್ನು ಸೇವಿಸಬೇಡಿ

ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಖನಿಜಗಳೆಂದರೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ, ಗಂಧಕ, ಸೋಡಿಯಂ, ಪೊಟ್ಯಾಸಿಯಮ್, ಕ್ಲೋರೈಡ್, ಕಬ್ಬಿಣ, ಸೆಲೆನಿಯಮ್, ಸತು, ಮ್ಯಾಂಗನೀಸ್, ತಾಮ್ರ, ಅಯೋಡಿನ್, ಫ್ಲೋರೈಡ್.

ಇವು ನಮ್ಮ ದೇಹದ ನೀರಿನ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳಿಗೆ ಸಹಕಾರಿ. ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ. ದಂತಕ್ಷಯವನ್ನು ತಡೆಗಟ್ಟುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ