ವೇಟ್​ಲಿಫ್ಟಿಂಗ್​ನಿಂದ ಮಹಿಳೆಯರಿಗೆ ಏನೆಲ್ಲ ಪ್ರಯೋಜನವಿದೆ ಗೊತ್ತಾ?

ಜರ್ನಲ್ ಆಫ್ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನವು 10 ವಾರಗಳ ವೇಟ್​ಲಿಫ್ಟಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ಸ್ನಾಯುವಿನ ಶಕ್ತಿ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ.

ವೇಟ್​ಲಿಫ್ಟಿಂಗ್​ನಿಂದ ಮಹಿಳೆಯರಿಗೆ ಏನೆಲ್ಲ ಪ್ರಯೋಜನವಿದೆ ಗೊತ್ತಾ?
ವೇಟ್​ಲಿಫ್ಟಿಂಗ್
Follow us
ಸುಷ್ಮಾ ಚಕ್ರೆ
|

Updated on: Sep 02, 2023 | 2:54 PM

ತೂಕ ಇಳಿಸಲು ಮತ್ತು ಸ್ನಾಯುಗಳನ್ನು ಸದೃಢಗೊಳಿಸಿಕೊಳ್ಳಲು ಪುರುಷರು ಜಿಮ್​ನಲ್ಲಿ ವರ್ಕ್​ಔಟ್ ಮಾಡುವುದು ಈಗೀಗ ಹೆಚ್ಚಾಗಿದೆ. ಆದರೆ, ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ವರ್ಕ್​ಔಟ್ (Gym Workout) ಬಹಳ ಅಗತ್ಯ. ವೇಟ್​ಲಿಫ್ಟಿಂಗ್​ (Weightlifting)  ಮಾಡುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಸಾಕಷ್ಟು ಪಾಸಿಟಿವ್ ಪರಿಣಾಮ ಉಂಟಾಗುತ್ತದೆ. ಅತ್ಯುತ್ತಮ ಆರೋಗ್ಯಕ್ಕಾಗಿ, ನಮ್ಮ ದೇಹಕ್ಕೆ ವ್ಯಾಯಾಮ ಬೇಕಾಗುತ್ತದೆ. ಮೂಳೆ, ಸ್ನಾಯುಗಳು ಗಟ್ಟಿಯಾಗಿರಬೇಕೆಂದರೆ ವೇಟ್​ಲಿಫ್ಟಿಂಗ್​ನಂತಹ ವ್ಯಾಯಾಮ ಅತ್ಯಗತ್ಯ.

ವಯಸ್ಸಾದಂತೆ, ನಮ್ಮ ಶಕ್ತಿ, ತ್ರಾಣ ಮತ್ತು ಚಯಾಪಚಯ ಕಡಿಮೆಯಾಗುತ್ತದೆ ಎಂಬುದನ್ನು ನಾವು ಮರೆಯಬಾರದು. 30 ವರ್ಷದ ನಂತರ ನಾವು ಪ್ರತಿ ವರ್ಷ ಸುಮಾರು ಶೇ. 1-2ರಷ್ಟು ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತೇವೆ.

ಹೀಗಾಗಿ, ನಿಯಮಿತವಾಗಿ ಏರೋಬಿಕ್ ವ್ಯಾಯಾಮಗಳಂತಹ ಅನೇಕ ವ್ಯಾಯಾಮಗಳು ನಮ್ಮ ಹೃದಯದ ಆರೋಗ್ಯವನ್ನು ಬಲಪಡಿಸಬಹುದಾದರೂ, ನಮ್ಮ ಮೂಳೆಗಳು ಮತ್ತು ಕೀಲುಗಳನ್ನು ಸದೃಢಗೊಳಿಸಲು ರಕ್ಷಿಸಲು ನಾವು ನಮ್ಮ ದೈನಂದಿನ ದಿನಚರಿಯಲ್ಲಿ ಮೂಳೆಗಳಿಗೆ ಬಲ ಬೀಳುವಂತಹ ವ್ಯಾಯಾಮವನ್ನು ಮಾಡಬೇಕಾಗುತ್ತದೆ.

ಇದನ್ನೂ ಓದಿ: Bone Health: ಆರೋಗ್ಯಕರ ಮತ್ತು ಬಲಿಷ್ಠ ಮೂಳೆಗಾಗಿ ತಪ್ಪಿಸಬೇಕಾದ 5 ದೈನಂದಿನ ಆಹಾರಗಳು

ಇದಲ್ಲದೆ, ತೂಕದ ತರಬೇತಿಯು ಮಹಿಳೆಯರಿಗೆ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ.

ವೇಟ್‌ಲಿಫ್ಟಿಂಗ್ ಅನ್ನು ಶಕ್ತಿ ತರಬೇತಿ ಅಥವಾ ಪ್ರತಿರೋಧ ತರಬೇತಿ ಎಂದೂ ಕರೆಯಲಾಗುತ್ತದೆ. ಇದು ಸ್ನಾಯುವಿನ ಬಲವನ್ನು ಹೆಚ್ಚಿಸುತ್ತದೆ, ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ದೇಹದ ಕೊಬ್ಬು ಕರಗಿಸಲು ಸಹಕಾರಿಯಾಗಿದೆ.

ಜರ್ನಲ್ ಆಫ್ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನವು 10 ವಾರಗಳ ವೇಟ್​ಲಿಫ್ಟಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರಲ್ಲಿ ಸ್ನಾಯುವಿನ ಶಕ್ತಿ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ.

ಇದನ್ನೂ ಓದಿ: ಈ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಸದೃಢವಾಗುತ್ತವೆ, ವಿವರ ಇಲ್ಲಿದೆ

ವೇಟ್‌ಲಿಫ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಮೂಳೆ ಸಾಂದ್ರತೆಯನ್ನು ಸುಧಾರಿಸಲು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಹೊಂದಿರುವ ಮಹಿಳೆಯರಲ್ಲಿ ವೇಟ್​ಲಿಫ್ಟಿಂಗ್ ತರಬೇತಿಯು ಇನ್ಸುಲಿನ್ ಸೂಕ್ಷ್ಮತೆ ಮತ್ತು ಹಾರ್ಮೋನ್ ಸಮತೋಲನವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ