
ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ಇದೆ. ಭಾರತೀಯರು ಅದರಲ್ಲಿ ಮಾಡುವ ಅಡುಗೆಗೆ ಒಗ್ಗಿಕೊಂಡಿದ್ದಾರೆ. ಆದರೆ ತಲೆಮಾರುಗಳು ಬದಲಾದಂತೆ, ಅವುಗಳ ಬಳಕೆಯೂ ಕಣ್ಮರೆಯಾಗುತ್ತಿತ್ತು. ಆದರೆ ಈಗ ಮಣ್ಣಿನ ಪಾತ್ರೆಗಳ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟುತ್ತಿದ್ದು. ಮಡಕೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಐಸ್ ಕ್ರೀಮ್, ಬಿರಿಯಾನಿ, ಲಸ್ಸಿ ಮತ್ತು ಇತರ ಅನೇಕ ಆಹಾರಗಳನ್ನು ಮಣ್ಣಿನ ಮಡಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಮಣ್ಣಿನ ಮಡಕೆಯಲ್ಲಿ ಮೊಸರು ತಯಾರಿಸಿ ತಿನ್ನುವುದರಿಂದ ಏನಾದರೂ ಪ್ರಯೋಜನಗಳಿವೆಯೇ? ಬೇಸಿಗೆಯಲ್ಲಿ ಮೊಸರನ್ನು ಮಣ್ಣಿನ ಮಡಕೆಯಲ್ಲಿಯೇ ಇಡಬೇಕು ಎನ್ನುವುದಕ್ಕೆ ನಿಜವಾದ ಕಾರಣವೇನು ತಿಳಿದುಕೊಳ್ಳಿ.
ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಶಾಖದ ಉರಿ ತಡೆಯಲು, ತಂಪಾದ ಮೊಸರಿನ ಊಟ ಹೆಚ್ಚು ರುಚಿಕರವಾಗಿರುತ್ತದೆ. ಜೊತೆಗೆ ಶುಷ್ಕ ಋತುವಿನಲ್ಲಿ ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮೊಸರು ಉತ್ತಮ ಆಯ್ಕೆಯಾಗಿದೆ. ಆದರೆ ಇದಕ್ಕೆ ನೀವು ಆಯ್ಕೆ ಮಾಡುವ ಪಾತ್ರೆಗಳು ಸಹ ಬಹಳ ಮುಖ್ಯ. ಇದಕ್ಕಾಗಿ ಸರಿಯಾದ ಪಾತ್ರೆಯನ್ನು ಬಳಸಿದಾಗ ಮಾತ್ರ ಅದು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಮೊಸರು ಪ್ರೋಬಯಾಟಿಕ್ ಗಳಿಂದ ಸಮೃದ್ಧವಾಗಿರುತ್ತದೆ. ಉಕ್ಕು ಮತ್ತು ಗಾಜಿನಂತಹ ಪಾತ್ರೆಗಳಲ್ಲಿ ತಯಾರಿಸಿದ ಮೊಸರಿಗಿಂತ ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಮೊಸರಿನಲ್ಲಿ ಪ್ರೋಬಯಾಟಿಕ್ ಅಂಶ ಹೇರಳವಾಗಿರುತ್ತದೆ. ಇದು ನಮ್ಮ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ.
ಇದನ್ನೂ ಓದಿ: ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನುತ್ತೀರಾ? ಇದು ವಿಷಕ್ಕೆ ಸಮ ಎನ್ನುತ್ತಾರೆ ತಜ್ಞರು
ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಮೊಸರು ಹೆಚ್ಚಾಗಿ ಹೆಪ್ಪುಗಟ್ಟಿರುತ್ತದೆ. ಅನೇಕ ಜನರು ಈ ರೀತಿಯ ಮೊಸರನ್ನು ತಿನ್ನಲು ಇಷ್ಟಪಡುತ್ತಾರೆ. ವಾಸ್ತವದಲ್ಲಿ ಮಣ್ಣು ನೈಸರ್ಗಿಕವಾಗಿ ನೀರನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಮಣ್ಣು ಅದರಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತದೆ. ಇದರಿಂದ ಮೊಸರು ಚೆನ್ನಾಗಿ ಹೆಪ್ಪುಗಟ್ಟಿರುತ್ತದೆ. ಜೊತೆಗೆ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ಮೊಸರು ಇತರ ಪಾತ್ರೆಗಳಲ್ಲಿ ಇರಿಸಲಾದ ಮೊಸರಿಗಿಂತ ಭಿನ್ನವಾಗಿರುತ್ತದೆ. ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳು ಮೊಸರಿನ ನೈಸರ್ಗಿಕ ರುಚಿಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದು ಹುಳಿ ಹೆಚ್ಚು ಬರದಂತೆ ತಡೆಯುತ್ತದೆ. ಅದಕ್ಕಾಗಿಯೇ ಮಣ್ಣಿನ ಪಾತ್ರೆಗಳಲ್ಲಿ ಇಟ್ಟಂತಹ ಮೊಸರು ಒಳ್ಳೆಯ ರುಚಿಯನ್ನು ನೀಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Mon, 10 March 25