World Biriyani Day 2024: ಮಶ್ರೂಮ್ ಬಿರಿಯಾನಿ ಇಷ್ಟಪಡುವವರು ಈ ಕಾಯಿಲೆಗಳಿಂದ ದೂರವಿರಬಹುದು
ಬಿರಿಯಾನಿ ಎನ್ನುವ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರು ಬರುತ್ತದೆ. ವಿವಿಧ ರೀತಿಯ ಬಿರಿಯಾನಿಗಳಲ್ಲಿ ಮಶ್ರೂಮ್ ಬಿರಿಯಾನಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದು ಎಲ್ಲೆಡೆ ದೊರೆಯುತ್ತದೆ ಆದರೂ ಕೂಡ ಬೆಂಗಳೂರು ಮತ್ತು ಉತ್ತರಕನ್ನಡದ ಹಲವು ಭಾಗಗಳಲ್ಲಿ ಇದು ಹೆಚ್ಚು ಫೇಮಸ್ ಆಗಿದೆ. ಉತ್ತಮ ಮತ್ತು ಸ್ವಾದಿಷ್ಟಕರವಾದ ಮಶ್ರೂಮ್ ಬಿರಿಯಾನಿ ಅನ್ನು ಸೇವಿಸಬೇಕು ಎಂದು ನೀವು ಬಯಸುತ್ತಿದ್ದರೆ ನೀವು ಈ ಸುಲಭ ಪಾಕವಿಧಾನವನ್ನು ಟ್ರೈ ಮಾಡಿ.
ಭಾರತದಾದ್ಯಂತ ಬಹುತೇಕರು ಇಷ್ಟಪಡುವ ಯಾವುದಾದರೊಂದು ಭಕ್ಷ್ಯವಿದ್ದರೆ, ಅದು ಬಿರಿಯಾನಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅದರಲ್ಲಿಯೂ ಬಿರಿಯಾನಿ ಎನ್ನುವ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರು ಬರುತ್ತದೆ. ವಿವಿಧ ರೀತಿಯ ಬಿರಿಯಾನಿಗಳಲ್ಲಿ ಮಶ್ರೂಮ್ ಬಿರಿಯಾನಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದು ಎಲ್ಲೆಡೆ ದೊರೆಯುತ್ತದೆ ಆದರೂ ಕೂಡ ಬೆಂಗಳೂರು ಮತ್ತು ಉತ್ತರಕನ್ನಡದ ಹಲವು ಭಾಗಗಳಲ್ಲಿ ಇದು ಹೆಚ್ಚು ಫೇಮಸ್ ಆಗಿದೆ. ಉತ್ತಮ ಮತ್ತು ಸ್ವಾದಿಷ್ಟಕರವಾದ ಮಶ್ರೂಮ್ ಬಿರಿಯಾನಿ ಸೇವಿಸಬೇಕು ಎಂದು ಬಯಸುತ್ತಿದ್ದರೆ ನೀವು ಈ ಸುಲಭ ಪಾಕವಿಧಾನವನ್ನು ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು; (2 ಜನರಿಗೆ)
1 ಕಪ್ ಬಾಸ್ಮತಿ ರೈಸ್ (20 ನಿಮಿಷ ನೆನಸಿಟ್ಟುಕೊಳ್ಳಿ)
1 ಕಪ್ ಮಶ್ರೂಮ್
2 ಮಧ್ಯಮ ಗಾತ್ರದ ಈರುಳ್ಳಿ (ಕತ್ತರಿಸಿ ಇಟ್ಟುಕೊಳ್ಳಿ)
100 ಗ್ರಾಂ ಬಟಾಣಿ
1 ಮಧ್ಯಮ ಗಾತ್ರದ ಆಲೂಗಡ್ಡೆ
ರುಚಿಗೆ ತಕ್ಕಷ್ಟು ಉಪ್ಪು
2 ಟೀ ಸ್ಪೂನ್ ಬಿರಿಯಾನಿ ಮಸಾಲಾ
ಕಾಲು ಚಮಚ ಅರಿಶಿನ ಪುಡಿ
1 ಟೀ ಸ್ಪೂನ್ ಜೀರಿಗೆ
2 ಟೀ ಸ್ಪೂನ್ ಮೊಸರು
ಕಾಲು ಚಮಚ ಮೆಣಸಿನ ಪುಡಿ ಅಥವಾ ಕರಿಮೆಣಸಿನ ಹುಡಿ
1 ಟೀ ಸ್ಪೂನ್ ನಿಂಬೆ ರಸ
4 ತುಂಡು ಬೆಳ್ಳುಳ್ಳಿ
1 ತುಂಡು ದಾಲ್ಚಿನ್ನಿ
2 ಏಲಕ್ಕಿ
ಅಡುಗೆಗೆ ಎಣ್ಣೆ
ಹಂತ 1 :
ಒಂದು ಪಾತ್ರೆಯಲ್ಲಿ ಮಶ್ರೂಮ್, ಬಟಾಣಿ ಮತ್ತು ಆಲೂಗೆಡ್ಡೆ ಕತ್ತರಿಸಿ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರನ್ನು ಹಾಕಿ, ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಕರಿಮೆಣಸಿನ ಹುಡಿಯನ್ನು ಸೇರಿಸಿಕೊಳ್ಳಿ. 15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
ಹಂತ 2 :
ಕುಕ್ಕರ್ ನಲ್ಲಿ, ಎಣ್ಣೆ ಹಾಕಿ ಬಿಸಿಯಾದ ನಂತರ, ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಹಾಕಿ.
ಹಂತ 3 :
ಚೆನ್ನಾಗಿ ಹುರಿದುಕೊಂಡ ಬಳಿಕ, ಕತ್ತರಿಸಿದ ಈರುಳ್ಳಿ ಸೇರಿಸಿ ಗುಲಾಬಿ ಬಣ್ಣ ಬರುವ ವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಹಂತ 4 :
ಬಳಿಕ ಇದಕ್ಕೆ ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ನಿಮಿಷ ಬೇಯಿಸಿಕೊಳ್ಳಿ.
ಹಂತ 5 :
ಈಗ, ಮ್ಯಾರಿನೇಟೆಡ್ ಮಾಡಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.
ಹಂತ 6 :
ಈ ಮಿಶ್ರಣಕ್ಕೆ ಬಿರಿಯಾನಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸೇರಿಸಿ.
ಹಂತ 7 :
ನೆನೆಸಿಟ್ಟುಕೊಂಡ ಅಕ್ಕಿಯನ್ನು ಮಿಶ್ರಣಕ್ಕೆ ಸೇರಿಸಿ ಅದಕ್ಕೆ ಒಂದು ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ.
ಹಂತ 8 :
ಗ್ಯಾಸ್ ಆಫ್ ಮಾಡಿ ಪಕ್ಕಕ್ಕೆ ಇರಿಸಿ. 10 ನಿಮಿಷ ಆದ ಬಳಿಕ ಹುರಿದ ಈರುಳ್ಳಿಯಿಂದ ಅಲಂಕರಿಸಿ, ಬಿಸಿ ಬಿಸಿ ಇರುವಾಗ ಸವಿಯಿರಿ.
ಇದನ್ನೂ ಓದಿ: ಮಂಗಳೂರಿನ ಚಿಕನ್ ಬ್ಯಾರಿ ಬಿರಿಯಾನಿ ಆರೋಗ್ಯ ಹೆಚ್ಚಿಸುತ್ತೆ! ಇದನ್ನು ಮಾಡುವುದು ಹೇಗೆ ?
ಆರೋಗ್ಯ ಪ್ರಯೋಜನಗಳೇನು?
ಮಶ್ರೂಮ್ ಬರೀ ರುಚಿಗಷ್ಟೇ ಅಲ್ಲ ಆರೊಗ್ಯಕ್ಕೂ ಹಲವಾರು ಲಾಭಗಳಿವೆ. ಮಶ್ರೂಮ್‌ನಲ್ಲಿ ಬಟನ್ ಮಶ್ರೂಮ್ ದೇಹಕ್ಕೆ ಆರೋಗ್ಯಕಾರಿಯಾಗಿದೆ. ಅದಲ್ಲದೆ ಇದು ಹೃದಯಕ್ಕೂ ಒಳ್ಳೆಯದು, ಅಲ್ಲದೆ ಮಶ್ರೂಮ್ ನೀವು ತಿನ್ನುವ ಎಲ್ಲಾ ಆಹಾರವನ್ನು ಜೀರ್ಣವಾಗಿಸುತ್ತದೆ. ಜೊತೆಗೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿವಾರಿಸುತ್ತದೆ, ಇದರ ಸೇವನೆಯಿಂದ ಮೂಳೆಗಳು ಗಟ್ಟಿಯಾಗಿರುತ್ತದೆ ಹಾಗಾಗಿ ಬಿರಿಯಾನಿಯಲ್ಲಿ ಇದರ ಸೇವನೆ ಮಾಡುವುದರಿಂದ ನಾನಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮಶ್ರೂಮ್ ಜೊತೆ ಬೇರೆ ಬೇರೆ ರೀತಿಯ ಮಸಾಲೆಗಳು ಸೇರಿಸುವುದರಿಂದ ಇನ್ನಷ್ಟು ಪ್ರಯೋಜನಗಳು ಸಿಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ