Sign In

By signing in or creating an account, you agree with Associated Broadcasting Company's Terms & Conditions and Privacy Policy.

World Heart Day: ಈ ರಕ್ತದ ಗುಂಪಿನ ಜನರಲ್ಲಿ ಹೃದ್ರೋಗದ ಅಪಾಯ ಹೆಚ್ಚು, ಜಾಗರೂಕರಾಗಿರಿ ಎನ್ನುತ್ತಾರೆ ತಜ್ಞರು

ರಕ್ತದ ಗುಂಪು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ನಡೆಸಿದ ಸಂಶೋಧನೆಯಲ್ಲಿ ಕೆಲವು ರಕ್ತದ ಗುಂಪುಗಳನ್ನು ಹೊಂದಿರುವವರಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. A ಮತ್ತು B ರಕ್ತದ ಗುಂಪು ಹೊಂದಿರುವ ಜನರು ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.

World Heart Day: ಈ ರಕ್ತದ ಗುಂಪಿನ ಜನರಲ್ಲಿ ಹೃದ್ರೋಗದ ಅಪಾಯ ಹೆಚ್ಚು, ಜಾಗರೂಕರಾಗಿರಿ ಎನ್ನುತ್ತಾರೆ ತಜ್ಞರು
ಈ ರಕ್ತದ ಗುಂಪಿನ ಜನರಲ್ಲಿ ಹೃದ್ರೋಗದ ಅಪಾಯ ಹೆಚ್ಚು
Follow us
ಸಾಧು ಶ್ರೀನಾಥ್​
|

Updated on: Sep 29, 2023 | 12:11 PM

ವಿಶ್ವ ಹೃದಯ ದಿನ: ಮನುಷ್ಯ ಆರೋಗ್ಯವಾಗಿರಬೇಕಾದರೆ.. ತನ್ನ ಹೃದಯದ ಬಗ್ಗೆ ಕಾಳಜಿ ವಹಿಸಬೇಕು. ಹೃದಯವು ಮಾನವ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ವಯೋಮಾನದ ಭೇದವಿಲ್ಲದೆ ಅನೇಕರು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತ ಪ್ರಕರಣಗಳು (Heart care) ವೃದ್ಧರಲ್ಲಿ ಮಾತ್ರವಲ್ಲ ಯುವಕರಲ್ಲಿಯೂ ಹೆಚ್ಚುತ್ತಿವೆ. ಹೃದ್ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಹೃದಯ ರಕ್ತನಾಳದ ಕಾಯಿಲೆಗಳು ಜೀವನಶೈಲಿ ಅಥವಾ ತಳಿಶಾಸ್ತ್ರದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಕೆಲವೊಮ್ಮೆ ರಕ್ತದ ಗುಂಪು (Blood Group) ಕೂಡ ಕಾರಣವಾಗಿರಬಹುದು. ಹೌದು ರಕ್ತದ ಗುಂಪಿನಿಂದಲೂ ಹೃದಯಾಘಾತದ ಅಪಾಯವಿದೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ಯಾವ ರಕ್ತದ ಗುಂಪು ಹೃದಯ ಕಾಯಿಲೆಯ ಹೆಚ್ಚಿನ ಅಪಾಯವನ್ನು ಹೊಂದಿದೆ? ತಿಳಿದುಕೊಳ್ಳೋಣ.. (World Heart Day)

ರಕ್ತದ ಗುಂಪು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ನಡೆಸಿದ ಸಂಶೋಧನೆಯಲ್ಲಿ ಕೆಲವು ರಕ್ತದ ಗುಂಪುಗಳನ್ನು ಹೊಂದಿರುವವರಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. A ಮತ್ತು B ರಕ್ತದ ಗುಂಪು ಹೊಂದಿರುವ ಜನರು ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂದು ಸೂಚಿಸುವ ಚಿಹ್ನೆಗಳಿವು

ಈ ಎರಡು ರಕ್ತ ಗುಂಪುಗಳನ್ನು ಹೊಂದಿರುವ ಜನರು ಹೆಚ್ಚಿನ ರಕ್ತ ಹೆಪ್ಪುಗಟ್ಟುವ ಗುಣಗಳನ್ನು ಹೊಂದಿರುತ್ತಾರೆ. ಈ ರಕ್ತದ ಗುಂಪು ಹೊಂದಿರುವ ಜನರು ಹೃದಯ ಕಾಯಿಲೆಯ ಅಪಾಯವನ್ನು ಹೊಂದಿರುವುದಕ್ಕೆ ಇದು ಕಾರಣವಾಗಿದೆ. ಇದಲ್ಲದೆ, ಈ ಎರಡು ರಕ್ತ ಗುಂಪುಗಳನ್ನು ಹೊಂದಿರುವ ಜನರು ಇತರ ರಕ್ತ ಗುಂಪುಗಳ ಜನರಿಗಿಂತ ಹೆಚ್ಚು ಹೃದಯ ಕಾಯಿಲೆಯ ಅಪಾಯವನ್ನು ಹೊಂದಿರುತ್ತಾರೆ ಎಂದೂ ಸಂಶೋಧನೆಗಳು ಹೇಳುತ್ತವೆ.

ಹಾಗಾದರೆ ಯಾವ ಜನರು ಕಡಿಮೆ ಅಪಾಯವನ್ನು ಹೊಂದಿದ್ದಾರೆ …

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ನ ತಜ್ಞರ ಪ್ರಕಾರ, ಅವರು ಸುಮಾರು 4 ಲಕ್ಷ ಜನರ ಮೇಲೆ ಸಂಶೋಧನೆ ನಡೆಸಿದ್ದಾರೆ, ಈ ಸಂಶೋಧನೆಗಳಲ್ಲಿ, ‘O’ ರಕ್ತದ ಗುಂಪಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆ ಎಂದು ಹೇಳಲಾಗಿದೆ. ಇದಲ್ಲದೆ, ಈ ‘O’ ರಕ್ತದ ಗುಂಪು ಕಡಿಮೆ ಹೃದಯ ಕಾಯಿಲೆಗಳನ್ನು ಹೊಂದಿದೆ. ಇತರ ರಕ್ತ ಗುಂಪುಗಳಿಗಿಂತ ಹೃದಯಾಘಾತ ಮತ್ತು ಹೃದಯ ವೈಫಲ್ಯದ ಅಪಾಯವು ಶೇಕಡಾ 10 ರಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ.

ಆರೋಗ್ಯಕರ ಜೀವನಶೈಲಿ ಹೃದ್ರೋಗವನ್ನು ತಪ್ಪಿಸಲು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ. ಆದ್ದರಿಂದ ಆರೋಗ್ಯಕರ ಆಹಾರ ಮತ್ತು ವ್ಯಾಯಾಮಗಳನ್ನು ಮಾಡುವುದು ಬಹಳ ಮುಖ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ