World Radiography Day 2024: ಎಕ್ಸ್-ರೇ ಹುಟ್ಟಲು ಈ ಅಂಶಗಳೇ ಕಾರಣ! ಇಲ್ಲಿದೆ ಈ ದಿನದ ಪ್ರಾಮುಖ್ಯತೆ

ದೇಹದಲ್ಲಿರುವ ಕಾಯಿಲೆಗಳನ್ನು ಪತ್ತೆ ಹಚ್ಚಲು ಕೇವಲ ಎಕ್ಸ್- ರೇ ಯನ್ನು ಬಳಸಲಾಗುತ್ತಿತ್ತು. ಈಗ ಅದರಲ್ಲಿಯೇ ಹಲವಾರು ಬದಲಾವಣೆಗಳಾಗಿ ಅಲ್ಟ್ರಾಸೌಂಡ್, ಎಂ.ಐ.ಆರ್, ಆಂಜಿಯೋಗ್ರಫಿಯಂತಹ ರೇಡಿಯಾಗ್ರಫಿ ತಂತ್ರಜ್ಞಾನಗಳು ಬಂದಿವೆ. ಈ ಎಲ್ಲಾ ತಂತ್ರಜ್ಞಾನಗಳು ಅಲ್ಪ ಸಮಯದಲ್ಲಿ ನಿಮ್ಮ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸಹಾಯ ಮಾಡುವ ಜೊತೆಗೆ ರೋಗನಿರ್ಣಯ ಮಾಡುವ ಸಾಧನಗಳಾಗಿವೆ. ಇದು ದೇಹದೊಳಗಿನ ಸಮಸ್ಯೆಯನ್ನು ಕ್ಷಣದೊಳಗೆ ಪತ್ತೆ ಹಚ್ಚಿ ವ್ಯಕ್ತಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಹೀಗೆ ರೇಡಿಯಾಗ್ರಫಿ ಬಗ್ಗೆ ಜನರಿಗೆ ಅರಿವು ಮೂಡಿಸುವುದಕ್ಕಾಗಿ ಪ್ರತಿವರ್ಷ ನ. 8 ರಂದು ವಿಶ್ವ ರೇಡಿಯಾಗ್ರಫಿ ದಿನವನ್ನು ಆಚರಿಸಲಾಗುತ್ತದೆ.

World Radiography Day 2024: ಎಕ್ಸ್-ರೇ ಹುಟ್ಟಲು ಈ ಅಂಶಗಳೇ ಕಾರಣ! ಇಲ್ಲಿದೆ ಈ ದಿನದ ಪ್ರಾಮುಖ್ಯತೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2024 | 10:22 AM

ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಿವೆ. ಆದರೆ ದೇಹದಲ್ಲಿರುವ ಕಾಯಿಲೆಗಳನ್ನು ಪತ್ತೆ ಹಚ್ಚಲು ಕೇವಲ ಎಕ್ಸ್- ರೇ ಯನ್ನು ಬಳಸಲಾಗುತ್ತಿತ್ತು. ಈಗ ಅದರಲ್ಲಿಯೇ ಹಲವಾರು ಬದಲಾವಣೆಗಳಾಗಿ ಅಲ್ಟ್ರಾಸೌಂಡ್, ಎಂ.ಐ.ಆರ್, ಆಂಜಿಯೋಗ್ರಫಿಯಂತಹ ರೇಡಿಯಾಗ್ರಫಿ ತಂತ್ರಜ್ಞಾನಗಳು ಬಂದಿವೆ. ಈ ಎಲ್ಲಾ ತಂತ್ರಜ್ಞಾನಗಳು ಅಲ್ಪ ಸಮಯದಲ್ಲಿ ನಿಮ್ಮ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸಹಾಯ ಮಾಡುವ ಜೊತೆಗೆ ರೋಗನಿರ್ಣಯ ಮಾಡುವ ಸಾಧನಗಳಾಗಿವೆ. ಇದು ದೇಹದೊಳಗಿನ ಸಮಸ್ಯೆಯನ್ನು ಕ್ಷಣದೊಳಗೆ ಪತ್ತೆ ಹಚ್ಚಿ ವ್ಯಕ್ತಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಹೀಗೆ ರೇಡಿಯಾಗ್ರಫಿ ಬಗ್ಗೆ ಜನರಿಗೆ ಅರಿವು ಮೂಡಿಸುವುದಕ್ಕಾಗಿ ಪ್ರತಿವರ್ಷ ನ. 8 ರಂದು ವಿಶ್ವ ರೇಡಿಯಾಗ್ರಫಿ ದಿನವನ್ನು ಆಚರಿಸಲಾಗುತ್ತದೆ.

ಎಕ್ಸ್​​ರೇ ಹುಟ್ಟಿಕೊಂಡದ್ದು ಹೇಗೆ?

ವೈದ್ಯಕೀಯ ಕ್ಷೇತ್ರದಲ್ಲಿ ರೇಡಿಯೋಲಾಜಿ ಎಂಬುದು ಅತ್ಯಂತ ಪ್ರಮುಖ ಭಾಗವಾಗಿದೆ. ಇದಕ್ಕೆ 100 ವರ್ಷದ ಇತಿಹಾಸವಿದೆ. 20ನೇ ಶತಮಾನದ ಬಳಿಕ ಈ ರೇಡಿಯೋಲಾಜಿ ತಂತ್ರಜ್ಞಾನವೂ ಹೆಚ್ಚಿನ ಅಭಿವೃದ್ಧಿ ಕಂಡು ಕೃತಕ ಬುದ್ದಿಮತ್ತೆ ಇದಕ್ಕೆ ಮತ್ತಷ್ಟು ಬೆಂಬಲ ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನ. 8, 1895 ರಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರು ಎಕ್ಸ್-ರೇ ತಂತ್ರಜ್ಞಾನದ ಆವಿಷ್ಕಾರವನ್ನು ಮಾಡುತ್ತಾರೆ. ಬಳಿಕ ರೋಂಟ್ಜೆನ್, ಈ ಕುರಿತು ಅಧ್ಯಯನ ಆರಂಭಿಸಿ ಈ ಕಿರಣಗಳು ನಮ್ಮ ದೇಹದ ಅಂಗಾಂಶವನ್ನು ಹಾದು ಹೋಗುವ ಜೊತೆಗೆ ಬಾಹ್ಯ ವಸ್ತುಗಳು (Foreign particles) ಪತ್ತೆ ಮಾಡಲು ಸಾಧ್ಯ ಎಂದು ಅರಿತುಕೊಳ್ಳುತ್ತಾರೆ. ತಮ್ಮ ಹೆಂಡತಿಯ ಕೈ ಚಿತ್ರವನ್ನು ಫೋಟೋಗ್ರಾಫಿಕ್​ ಫ್ಲೇಟ್​ನಲ್ಲಿ ಇಟ್ಟಾಗ ಅವರ ಕೈ ಮೂಳೆಗಳು, ತೊಟ್ಟಿದ್ದ ಉಂಗುರ ಕಂಡು ಬಂದಿತ್ತು. ಇದು ಜಗತ್ತಿನ ಮೊದಲ ಮಾನವ ಎಕ್ಸ್​​ರೇ ಆಗಿತ್ತು. ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ರೇಡಿಯಾಗ್ರಫಿ ಸಾಧನಗಳು ಹಾಗೂ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರ ಕೊಡುಗೆಯನ್ನು ಸ್ಮರಿಸಲು ಯುರೋಪಿಯನ್ ಸೊಸೈಟಿ ಆಫ್ ರೇಡಿಯಾಲಜಿ, ರೇಡಿಯಾಲಾಜಿಕಲ್ ಸೊಸೈಟಿ ಆಫ್ ನಾರ್ತ್ ಅಮೇರಿಕಾ ಮತ್ತು ಅಮೇರಿಕನ್ ಕಾಲೇಜ್ ಆಫ್ ರೇಡಿಯಾಲಜಿ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ರೇಡಿಯಾಗ್ರಫಿ (World Radiography Day) ದಿನವನ್ನು ಆಚರಿಸುವ ಉಪಕ್ರಮವನ್ನು ತೆಗೆದುಕೊಳ್ಳಲಾಯಿತು. ಮೊದಲ ಬಾರಿಗೆ 2012 ನ. 8 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ರೇಡಿಯಾಗ್ರಫಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನು ಓದಿ: ಏನನ್ನಾದರೂ ತಿಂದ ತಕ್ಷಣ ಹೊಟ್ಟೆ ತುಂಬಿದಂತಾಗುತ್ತದೆಯೇ? ಈ ಚಿಹ್ನೆಯ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಬೇಡ!

ವಿಶ್ವ ರೇಡಿಯಾಗ್ರಫಿ ದಿನದ ಪ್ರಾಮುಖ್ಯತೆ:

ಎಕ್ಸ್ ರೇ, ಎಂ.ಆರ್.ಐ ಮತ್ತು ಅಲ್ಟ್ರಾಸೌಂಡ್ ನಂತಹ ರೇಡಿಯಾಗ್ರಫಿ ಸಾಧನಗಳು ರೋಗದ ಮೂಲ ಕಾರಣಗಳನ್ನು ಕಂಡು ಹಿಡಿಯಲು ಬಹಳ ಸಹಾಯ ಮಾಡುತ್ತವೆ. ಇದರಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ನೀಡಬಹುದಾಗಿದೆ. ಜೊತೆಗೆ ಈ ಸಾಧನಗಳ ಪ್ರಯೋಜನಗಳು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಈ ದಿನ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಯ ಜನರಿಗೆ ರೆಡಿಯೋಗ್ರಫಿ ವೃತ್ತಿಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು