Health Tips: ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಾ? ಇದಕ್ಕೆ ತಜ್ಞರು ನೀಡಿರುವ ಕಾರಣಗಳನ್ನು ತಿಳಿದುಕೊಳ್ಳಿ

Cause of Fatigue: ಬೆಂಗಳೂರಿನ ಡಾ. ಪಂಕಜ್ ವರ್ಮಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಕೆಲವರಲ್ಲಿ ಹಠಾತ್ ಆಗಿ ಉಸಿರಾಟ ಹೆಚ್ಚಾಗುವುದು ಅಥವಾ ಉಸಿರಾಡುವಾಗ ಎದೆಯಲ್ಲಿ ಬಿಗಿತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಯಾವುದೇ ರೀತಿಯ ಕೆಲಸ ಮಾಡದೆ ಆಗಾಗ ದಣಿವಾಗುವ ಸಮಸ್ಯೆಯು ವ್ಯಕ್ತಿಯ ಕಳಪೆ ಆಹಾರ ಪದ್ಧತಿ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಾಗಿರಬಹುದು ಎಂದು ಹೇಳುತ್ತಾರೆ. ಹಾಗಾದರೆ ಇದನ್ನು ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.

Health Tips: ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಾ? ಇದಕ್ಕೆ ತಜ್ಞರು ನೀಡಿರುವ ಕಾರಣಗಳನ್ನು ತಿಳಿದುಕೊಳ್ಳಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Nov 07, 2024 | 11:06 AM

ನಿರಂತರವಾಗಿ ಕೆಲಸ ಮಾಡಿದಾಗ ದೇಹ ದಣಿಯುವುದು ಸಹಜ. ಆದರೆ ಕೆಲವೊಮ್ಮೆ ಏನೇ ಕೆಲಸ ಮಾಡದಿದ್ದರೂ ಉಸಿರುಗಟ್ಟಿದ ಅಥವಾ ದಣಿದ ಅನುಭವ ಆಗುತ್ತದೆ. ನಾವು ಇದನ್ನು ಹಲವಾರು ಬಾರಿ ದೊಡ್ಡ ಸಮಸ್ಯೆಯಲ್ಲ ಎಂದು ಕಡೆಗಣಿಸುತ್ತೇವೆ. ಕೆಲವೊಮ್ಮೆ ನಮ್ಮ ಅರಿವಿಗೆ ಬರುವುದಿಲ್ಲ. ನಿಮಗೂ ಈ ರೀತಿಯ ಅನುಭವವಾಗಿದ್ದರೆ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಕೆಲವು ಸಮಸ್ಯೆಯ ಮುನ್ಸೂಚನೆಯಾಗಿರಬಹುದು ಹಾಗಾಗಿ ಇಂತಹ ರೋಗಲಕ್ಷಣಗಳನ್ನು ಅನುಭವಿಸಿದಾಗ ಕಡೆಗಣಿಸಬೇಡಿ ಎಂದು ಬೆಂಗಳೂರಿನ ಡಾ. ಪಂಕಜ್ ವರ್ಮಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಕೆಲವರಲ್ಲಿ ಹಠಾತ್ ಆಗಿ ಉಸಿರಾಟ ಹೆಚ್ಚಾಗುವುದು ಅಥವಾ ಉಸಿರಾಡುವಾಗ ಎದೆಯಲ್ಲಿ ಬಿಗಿತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಯಾವುದೇ ರೀತಿಯ ಕೆಲಸ ಮಾಡದೆ ಆಗಾಗ ದಣಿವಾಗುವ ಸಮಸ್ಯೆಯು ವ್ಯಕ್ತಿಯ ಕಳಪೆ ಆಹಾರ ಪದ್ಧತಿ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಾಗಿರಬಹುದು ಎಂದು ಹೇಳುತ್ತಾರೆ.

ರಕ್ತಹೀನತೆ:

ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ, ಉಸಿರಾಟದ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ, ಆಮ್ಲಜನಕದ ಹರಿವು ಕಡಿಮೆಯಾಗುತ್ತದೆ. ಇದು ಉಸಿರಾಡಲು ಸಹ ಕಷ್ಟವಾಗಬಹುದು.

ಹೃದಯ:

ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡದಿದ್ದಾಗಲೂ, ಆಮ್ಲಜನಕವು ದೇಹದ ವಿವಿಧ ಭಾಗಗಳನ್ನು ಸರಿಯಾಗಿ ತಲುಪುವುದಿಲ್ಲ. ಹೃದಯ ಕವಾಟದ ವೈಫಲ್ಯವು ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.

ಒತ್ತಡ ಮತ್ತು ಆತಂಕ:

ಒತ್ತಡ ಮತ್ತು ಆತಂಕವು ಆಯಾಸವನ್ನು ಉಂಟುಮಾಡುತ್ತದೆ. ಇದನ್ನು ನೀವು ನಂಬದಿರಬಹುದು ಆದರೆ ಇದು ಸತ್ಯ. ಅತಿಯಾದ ಒತ್ತಡವು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಇದರಿಂದಾಗಿ ಉಸಿರಾಟದ ತೊಂದರೆ ಉಂಟಾಗಬಹುದು.

ಇದನ್ನೂ ಓದಿ: ಉಗುರು ಸುಲಭವಾಗಿ ಮುರಿಯುತ್ತಿದೆಯೇ? ಹಾಗಿದ್ರೆ ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯಾಗಿದೆ ಎಂದರ್ಥ

ತಡೆಯುವುದು ಹೇಗೆ?

ಕಬ್ಬಿಣ, ವಿಟಮಿನ್ ಬಿ -12 ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರತಿದಿನ ಲಘು ವ್ಯಾಯಾಮ ಮಾಡಿ ಎಂದು ತಜ್ಞರು ಹೇಳುತ್ತಾರೆ. ಉಸಿರಾಟದ ವ್ಯಾಯಾಮಗಳನ್ನು ಮಾಡುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಆಗಾಗ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ರಕ್ತವನ್ನು ಪರೀಕ್ಷಿಸಿಕೊಳ್ಳಿ. ಇದಲ್ಲದೆ, ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಮಾಡಿ. ನೀವು ಯೋಗಾಸನಗಳನ್ನು ಸಹ ಮಾಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್