AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yoga Malike: ಸತ್ಯ, ಅಹಿಂಸೆ, ಪರರಿಗೆ ಒಳಿತು ಬಯಸುವುದು; ಇವೆಲ್ಲವೂ ಮಕ್ಕಳು ಕಲಿಯಬೇಕಾದ ಯೋಗ

ಭಾರತೀಯ ಕ್ರೀಡೆಗಳ ವಿಶೇಷತೆ ಏನೆಂದರೆ ನಾವೆಲ್ಲರೂ ಒಂದು, ಸಮಾನರು ಇತ್ಯಾದಿ ಒಳ್ಳೆಯ ಗುಣಗಳನ್ನು ನಮಗೆ ತಿಳಿಯದೇ ಬೆಳೆಯಲು ಸಹಕಾರಿಯಾಗುತ್ತವೆ.

Yoga Malike: ಸತ್ಯ, ಅಹಿಂಸೆ, ಪರರಿಗೆ ಒಳಿತು ಬಯಸುವುದು; ಇವೆಲ್ಲವೂ ಮಕ್ಕಳು ಕಲಿಯಬೇಕಾದ ಯೋಗ
ಮಕ್ಕಳಿಗಾಗಿ ಯೋಗ
guruganesh bhat
| Edited By: |

Updated on: Sep 05, 2021 | 8:28 AM

Share

ವೃತ್ತಿಪರ ಯೋಗ ಶಿಕ್ಷಕ, ಪರಿಣಿತ ನಾಗೇಂದ್ರ ಗದ್ದೆಮನೆ ಅವರು ಟಿವಿ9 ಕನ್ನಡ ಡಿಜಿಟಲ್​ಗಾಗಿ ಪ್ರಸ್ತುಪಡಿಸುತ್ತಿರುವ. ‘ಬದುಕಿಗಾಗಿ ಯೋಗ’  ಸರಣಿಯ ಈವಾರದ ‘ಬದುಕಿಗಾಗಿ ಯೋಗ’ ಅಂಕಣ ನಿಮ್ಮ ಓದಿಗೆ ಇಲ್ಲಿದೆ. 

ಮಕ್ಕಳಿಗೆ ಯೋಗದ  ಅಗತ್ಯವಿದೆಯೇ? ಹೌದು ಎಂದು ಹಿಂದಿನ ಎರಡು ಲೇಖನಗಳಿಂದ ನಿರೂಪಿಸುತ್ತ ಬಂದಿದ್ದೇವೆ. ಈಗಿನ ಕಾಲಕ್ಕೆ ಮಕ್ಕಳಿಗೆ ಯೋಗವು ಬಹಳ ಬಹಳ ಮುಖ್ಯವಾಗಿದೆ. ಮಾನವ ಹಲವಾರು ಸದ್ಗುಣಗಳ ಜೊತೆ ಹುಟ್ಟಿ, ಬೆಳೆಯುತ್ತ ಸುತ್ತಲ ಪರಿಸರ, ಒಡನಾಟ ಇವುಗಳಿಂದ ಆ ಗುಣಗಳನ್ನು ವರ್ಧಿಸಿಕೊಳ್ಳುತ್ತಾನೆ ಅಥವಾ ಕಳೆದುಕೊಳ್ಳುತ್ತಾನೆ. ಕಳೆದುಕೊಳ್ಳುವುದೆಂದರೆ ನಿಂತ ನೀರಿನ‌ ಮೇಲೆ ಪಾಚಿ ಕಟ್ಟಿದಂತೆ. ಒಡನಾಟದಿಂದ ಗಳಿಸಿದ ಗುಣಗಳು ಸದ್ಗುಣಗಳನ್ನು ಮುಚ್ಚಿರುತ್ತವೆ. ಹಾಗಾಗಿ ಪ್ರತಿ ಮಗುವಿಗೆ ಪ್ರಾಥಮಿಕ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ, ಸಜ್ಜನರ ಒಡನಾಟ ಇವೆಲ್ಲವು ಬಹಳ ಮುಖ್ಯವಾಗುವುದು ಸತ್ಪ್ರಜೆಯನ್ನಾಗಿಸಲು.

ಸತ್ಯವನ್ನಾಡುವುದು, ಪ್ರಾಣಿ-ಪಕ್ಷಿಗಳನ್ನು ಹಿಂಸಿಸದಿರುವುದು, ಪರರ ವಸ್ತುಗಳನ್ನು ದೋಚದಿರುವುದು ಇವುಗಳೆಲ್ಲವು ಯೋಗಗಳೇ‌. ಮಕ್ಕಳಿಗೆ ಸಾತ್ವಿಕ ಆಹಾರದ ಕಡೆ ಒಲವು ಮೂಡುವಂತೆ ಮಾಡಬೇಕು. ಇದೇ ಅರ್ಧದಷ್ಟು ದೈಹಿಕ ಸಮಸ್ಯೆಗಳನ್ನು ದೂರಗೊಳಿಸುವುದು. ಮೂರು ವಿಧವಾದ ಆಹಾರ ಹಾಗೂ ಆಹಾರವು ಹೇಗೆ ಮನಸ್ಸು ಹಾಗೂ ದೇಹದ ಪರಿಣಾಮ ಬೀರುವವು ಎಂಬುದನ್ನು ‘ಯೋಗ ಜೀವನಕ್ಕೆ ಎಂಟು ಮೆಟ್ಟಿಲು’ ಎಂಬ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಮಕ್ಕಳನ್ನು ಮಾನಸಿಕವಾಗಿ ತುಷ್ಟರನ್ನಾಗಿಸಲು‌ ಭಾರತೀಯ ಕ್ರೀಡೆಗಳು ಅತ್ಯಗತ್ಯವಾಗಿವೆ.

ಭಾರತೀಯ ಕ್ರೀಡೆಗಳ ವಿಶೇಷತೆ ಏನೆಂದರೆ ನಾವೆಲ್ಲರೂ ಒಂದು, ಸಮಾನರು ಇತ್ಯಾದಿ ಒಳ್ಳೆಯ ಗುಣಗಳನ್ನು ನಮಗೆ ತಿಳಿಯದೇ ಬೆಳೆಯಲು ಸಹಕಾರಿಯಾಗುತ್ತವೆ. ದೇವರ ಸ್ಮರಣೆ, ಭಜನೆ, ಶ್ಲೋಕ ಪಠಣ ಇವುಗಳು ಧನಾತ್ಮಕತೆಯನ್ನು ಬೆಳೆಸುವುದು. ಅನಗತ್ಯ ಚಿಂತನೆಗಳಿಂದ ದೂರವಿರಿಸುವವು. ಈಗಿನ ಆಹಾರ ಪದ್ಧತಿಯಿಂದಾಗಿ ಮಕ್ಕಳು ವಯಸ್ಸಿಗೂ ಮೀರಿ ಬೆಳೆಯುವುದು ಅಥವಾ ಬೆಳವಣಿಗೆಯಲ್ಲಿ ಕುಂಠಿತ ಹೀಗೆ ಹಲವಾರು ಸಮಸ್ಯೆಗಳು ಕಾಡುವವು. ಹಾಗಾಗಿ ಪ್ರತಿದಿನ ಯೋಗಾಭ್ಯಾಸ – ವೃಕ್ಷಾಸನ, ವೀರಭದ್ರಾಸನ ಇತ್ಯಾದಿ ಸಮತೋಲನ ಕಾಪಾಡುವಂತಹ ಆಸನಗಳು (ಮನಸ್ಸು, ದೇಹ), ಹಲಾಸನ, ಸರ್ವಾಂಗಾಸನ ಇತ್ಯಾದಿ ಆಸನಗಳು ಪಚನಕ್ರಿಯೆಯನ್ನು ವರ್ಧಿಸಲು, ಹೀಗೆ ದೇಹ ಮತ್ತು ಮನಸ್ಸನ್ನು ಸಮತೋಲನವಾಗಿಟ್ಟುಕೊಳ್ಳಲು,

ಕ್ರೀಡೆ ಜೊತೆ ಜೊತೆಗೆ ಕಲಿಕೆಯಿಂದ ಮಕ್ಕಳು ಆರೋಗ್ಯದಿಂದಿರಬಹುದು. ಹಸಿದಾಗ ಮಿತವಾಗಿ ಸಾತ್ವಿಕ ಆಹಾರ ಸೇವನೆ, ಮಿತ ಸತ್ಯ ಸಂಭಾಷಣೆ, ಸಮಯಕ್ಕೆ ನಿದ್ರೆ ಇವು ಮಕ್ಕಳ ಓದಿಗೆ, ವರ್ಧನೆಗೆ ಎಲ್ಲದಕ್ಕೂ ಸಹಾಯಕಾರಿ.

ಇದನ್ನೂ ಓದಿ:  

Yoga Malike: ಬದುಕಿಗಾಗಿ ಯೋಗ; ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯದ ರೂಢಿ ಕಲಿಸಿ

Yoga Malike: ವಿದೇಶದಲ್ಲಿ ಉಟಾಬಸಿ ಅಭ್ಯಾಸಕ್ಕೆ Super Brain Yoga ಎಂಬ ಹೆಸರಿದೆ!

ಲೇಖಕರ ಪರಿಚಯ ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್​, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್​ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್​ನ್ನು ಸಹ ನಡೆಸುತ್ತಿದ್ದಾರೆ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್