Health Benefits: ಗ್ಯಾಸ್ಟಿಕ್​ನಿಂದಲೇ ಎದೆ ನೋವು ಕಾಣಿಸಿಕೊಂಡಿದೆ ಎಂದು ನಿರ್ಲಕ್ಷ್ಯ ವಹಿಸುವ ಮುನ್ನ, ನೋವಿನ ಲಕ್ಷಣಗಳ ಬಗ್ಗೆ ತಿಳಿಯುವುದು ಸೂಕ್ತ

| Updated By: ಆಯೇಷಾ ಬಾನು

Updated on: Jul 12, 2021 | 6:44 AM

ಗ್ಯಾಸ್ಟಿಕ್​ ನೋವು ಅಥವಾ ಎದೆ ನೋವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ? ಗ್ಯಾಸ್ಟಿಕ್​ ನೋವಿಗೆ ಮನೆಯಲ್ಲಿ ಮಾಡಬಹುದಾದ ಪ್ರಥಮ ಚಿಕಿತ್ಸೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Health Benefits: ಗ್ಯಾಸ್ಟಿಕ್​ನಿಂದಲೇ ಎದೆ ನೋವು ಕಾಣಿಸಿಕೊಂಡಿದೆ ಎಂದು ನಿರ್ಲಕ್ಷ್ಯ ವಹಿಸುವ ಮುನ್ನ, ನೋವಿನ ಲಕ್ಷಣಗಳ ಬಗ್ಗೆ ತಿಳಿಯುವುದು ಸೂಕ್ತ
ಸಾಂದರ್ಭಿಕ ಚಿತ್ರ
Follow us on

ಗ್ಯಾಸ್ಟ್ರಿಕ್ ಅಥವಾ ಗ್ಯಾಸ್​ ಟ್ರಬಲ್​ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಕಾಯಿಲೆ. ಚಿಕ್ಕವರಿಂದ ವಯಸ್ಕರವರೆಗೆ ಎಲ್ಲರೂ ಗ್ಯಾಸ್ಟ್ರಿಕ್ ಬಾಧೆಯಿಂದ ಬಳಲಿಯೇ ಇರುತ್ತೇವೆ. ಆದಾಗ್ಯೂ ಕೆಲವೊಮ್ಮೆ ಗ್ಯಾಸ್ಟ್ರಿಕ್ ನೋವು ಮತ್ತು ಎದೆ ನೋವು ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಏಕೆಂದರೆ ಗ್ಯಾಸ್ಟ್ರಿಕ್ ನೋವು ಹೃದಯದ ಭಾಗದಲ್ಲಿಯೇ ಕೆಲವೊಮ್ಮೆ ಕಾಡುತ್ತದೆ. ಹೀಗಾಗಿಯೇ ಅನೇಕರು ಎದೆ ನೋವು ಕಾಣಿಸಿಕೊಂಡರು ಗ್ಯಾಸ್ಟಿಕ್​ ಇರಬೇಕು ಎಂದು ನಿರ್ಲಕ್ಷ್ಯ ಮಾಡಿ ಕೊನೆಗೆ ಅಪಾಯಕ್ಕೆ ಸಿಲುಕುತ್ತಾರೆ. ಆದರೆ ನೀವು ಗ್ಯಾಸ್ಟಿಕ್​ನಿಂದ ಉಂಟಾಗುವ ನೋವನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥ ಮಾಡಿಕೊಳ್ಳಬಹುದು ಮತ್ತು ಗೊಂದಲದಿಂದ ದೂರ ಉಳಿಯಬಹುದು. ಗ್ಯಾಸ್ಟಿಕ್​ ನೋವು ಅಥವಾ ಎದೆ ನೋವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಗೆ? ಗ್ಯಾಸ್ಟಿಕ್​ ನೋವಿಗೆ ಮನೆಯಲ್ಲಿ ಮಾಡಬಹುದಾದ ಪ್ರಥಮ ಚಿಕಿತ್ಸೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣ
ಎದೆಯ ಜತೆಗೆ ಎಡಗೈಯ ಎಡಭಾಗವು ನೋವಾಗುತ್ತಿದ್ದರೆ ಅದು ಹೃದಯಕ್ಕೆ ಸಂಬಂಧಿಸಿದ ಅಪಾಯದ ಮುನ್ನೆಚ್ಚರಿಕೆಯಾಗಿರುತ್ತದೆ. ಅಸಹನೀಯ ತೂಕವಿದೆ ಎಂದು ಅನಿಸುವುದು. ನಿದ್ರೆ ಮತ್ತು ಅರೆನಿದ್ರಾವಸ್ಥೆ ಉಂಟುಮಾಡುವುದು, ದೇಹ ಬೆವರುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಸೂಚನೆಯಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಗ್ಯಾಸ್ಟಿಕ್​ನಿಂದ ಉಂಟಾಗುವ ಎದೆ ನೋವು
ಕೆಲವೊಮ್ಮೆ ಎದೆ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಗ್ಯಾಸ್ಟಿಕ್​ನಿಂದ ಉಂಟಾಗಿರುತ್ತದೆ. ದೇಹ ಮುಂದಕ್ಕೆ ಬಾಗಿದಾಗ ಎದೆ ನೋವು ಮತ್ತು ಮಲಗಿರುವಾಗ ಅದೇ ನೋವು ಹಿಂಭಾಗದಲ್ಲಿ ಅನುಭವಿಸಿದರೆ ಅದು ಗ್ಯಾಸ್ಟಿಕ್​ನಿಂದ ಉಂಟಾದ ನೋವಾಗಿರುತ್ತದೆ. ಅಂದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣವಾದರೆ ಕುಳಿತಾಗ, ಮಲಗಿದಾಗ ಒಂದೇ ಜಾಗದಲ್ಲಿ ನೋವಿರುತ್ತದೆ. ಆದರೆ ಗ್ಯಾಸ್ಟಿಕ್​ನಿಂದ ಉಂಟಾಗುವ ನೋವು ಮಲಗಿದಾಗ ಮತ್ತು ಕುಳಿತಾಗ ಬೇರೆ ಬೇರೆ ಭಾಗಕ್ಕೆ ಬದಲಾಗುತ್ತದೆ.

ಗ್ಯಾಸ್ಟಿಕ್​ ನೋವಿನ ಪರಿಹಾರಕ್ಕೆ ಮನೆಮದ್ದು
ಗ್ಯಾಸ್ಟಿಕ್​ ನೋವಿಗೆ ಮೊದಲ ಚಿಕಿತ್ಸೆ ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದು ಅಥವಾ ಎರಡು ಗ್ಲಾಸ್ ಮಜ್ಜಿಗೆಯನ್ನು ಕುಡಿಯಬಹುದು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಸೂಪ್, ಬೇಳೆಕಾಳುಗಳು ಮತ್ತು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ದೂರವಿರಬೇಕು. ಅದಕ್ಕೆ ಬದಲಾಗಿ ತಮ್ಮ ಆಹಾರದಲ್ಲಿ ಫೈಬರ್ ಅಂಶ ಇರುವ ಪದಾರ್ಥಗಳನ್ನು ಸೇವಿಸಬೇಕು. ಪ್ರತಿದಿನ ಬೆಳಿಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಕೂಡ ಗ್ಯಾಸ್ಟಿಕ್​ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ:
Health Benefits: ಕಿತ್ತಳೆ ಹಣ್ಣಿನಲ್ಲಿ ಅಡಗಿದ ಅನೇಕ ಆರೋಗ್ಯಕರ ಗುಣ; ಅನಾರೋಗ್ಯದಿಂದ ದೂರ ಇರಲು ದಿನನಿತ್ಯ ಒಂದು ಹಣ್ಣು ಸೇವಿಸಿ

Jaggery Benefits: ಬೆಲ್ಲದ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ, ಸಕ್ಕರೆ ಬದಲು ಸಿಹಿಗಾಗಿ ಇದನ್ನೇ ಬಳಸುತ್ತೀರಿ