ನೀವು ಎಗ್ ಕಾಫಿ ಕುಡಿದಿದ್ದೀರಾ? ಮಾಡುವ ವಿಧಾನ ಸುಲಭವಿದೆ
ಬಹಳಷ್ಟು ಮಂದಿಗೆ ಮೊಟ್ಟೆ ಕಾಫಿ ಬಗ್ಗೆ ತಿಳಿದಿಲ್ಲ. ಎಗ್ ಕಾಫಿ ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ದಿನಕ್ಕೊಂದು ಮೊಟ್ಟೆಯನ್ನು ಬೇಯಿಸಿ ತಿಂದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ.
ಸಾಮಾನ್ಯವಾಗಿ ಮೊಟ್ಟೆ (Egg) ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಾಂಸ ಪ್ರಿಯರಿಗಂತೂ ಪಂಚಪ್ರಾಣ. ಊಟಕ್ಕೆ ಮನೆಯಲ್ಲಿ ಏನು ಇಲ್ಲದೆ ಇದ್ದಾಗ ಕೊನೆ ಪಕ್ಷ ಮೊಟ್ಟೆಯಾದರೂ ಬೇಕು. ಮೊಟ್ಟೆಯಿಂದ ಸಾಮಾನ್ಯವಾಗಿ ಸಾಂಬಾರು, ಬುರ್ಜಿ, ಆಮ್ಲೆಟ್ ಮಾಡುತ್ತಾರೆ. ಆದರೆ ಮೊಟ್ಟೆಯಿಂದ ಮಾಡಿರುವ ಕಾಫಿಯನ್ನು ನೀವು ಕುಡಿದಿದ್ದೀರಾ? ಬಹಳಷ್ಟು ಮಂದಿಗೆ ಮೊಟ್ಟೆ ಕಾಫಿ ಬಗ್ಗೆ ತಿಳಿದಿಲ್ಲ. ಎಗ್ ಕಾಫಿ ಹೆಚ್ಚು ಪ್ರೋಟೀನ್ನಿಂದ (Protein) ಕೂಡಿದೆ. ದಿನಕ್ಕೊಂದು ಮೊಟ್ಟೆಯನ್ನು ಬೇಯಿಸಿ ತಿಂದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ. ಅದರಂತೆ ಎಗ್ ಕಾಫಿಯನ್ನು (Egg Coffee) ಕುಡಿದರೂ ಸಹ ಆರೋಗ್ಯಕ್ಕೆ ಒಳ್ಳೆಯದು.
ಮೊಟ್ಟೆ ಕಾಫಿಯನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ * 2 ಚಮಚ- ಕಾಫಿ ಪುಡಿ * ಬಿಸಿ ನೀರು * 2 ಮೊಟ್ಟೆಯ ಹಳದಿ ಭಾಗ * 3 ಚಮಚ ತಣ್ಣನೆಯ ಹಾಲು * 8 ರಿಂದ 10 ವೆನಿಲ್ಲಾ ಎಸೆನ್ಸ್ ಹನಿ * ಸಕ್ಕರೆ
ಮಾಡುವ ವಿಧಾನ ಕಾಫಿ ಫಿಲ್ಟರ್ಗೆ ಕಾಫಿ ಪುಡಿ ಮತ್ತು ಬಿಸಿ ನೀರನ್ನು ಸೇರಿಸಿ ಸುಮಾರು 10 ನಿಮಿಷ ಹಾಗೆ ಬಿಡಿ. ನಂತರ ಇನ್ನೊಂದು ಲೋಟಕ್ಕೆ ಬಿಸಿ ನೀರನ್ನು ಹಾಕಿ. ಮತ್ತೊಂದು ಲೋಟಕ್ಕೆ ಮೊಟ್ಟೆಯ ಹಳದಿ ಹಾಕಿ ತಣ್ಣನೆಯ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ. ಇದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ 10 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣಗೊಳಿಸಿ.
ಬಿಸಿ ನೀರನ್ನು ಇರಿಸಿದ ಗ್ಲಾಸ್ ಒಳಗೆ ಇನ್ನೊಂದು ಲೋಟವಿಡಿ. ಆ ಲೋಟಕ್ಕೆ ಮೊದಲು ಫಿಲ್ಟರ್ಗೆ ಹಾಕಿದ್ದ ಕಾಫಿಯನ್ನು ಸುರಿಯಿರಿ. ನಂತರ ಮೊಟ್ಟೆಯ ಮಿಶ್ರಣವನ್ನು ಹಾಕಿ, ಕುಡಿಯಿರಿ.
ಇದನ್ನೂ ಓದಿ
Health Tips: ಈ 5 ಹಣ್ಣಿನ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿ ತರಬಹುದು! ಆರೋಗ್ಯದ ಕುರಿತು ಗಮನವಿರಲಿ
(How to make Egg Coffee for good health in home)