Noni Fruit: ನೋಣಿ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೇರು, ಹಣ್ಣು ಮತ್ತು ಎಲೆ ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ

| Updated By: preethi shettigar

Updated on: Aug 01, 2021 | 7:43 AM

ನೋಣಿ ಹಣ್ಣನ್ನು ಸೇವಿಸಿದರೆ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಸಹ ತಡೆಯಬಹುದಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಈ ಹಣ್ಣಗಳನ್ನು ಸಿಪ್ಪೆ ಸುಲಿದು ಮಾರಾಟಕ್ಕೆ ಇಡುತ್ತಾರೆ.

Noni Fruit: ನೋಣಿ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೇರು, ಹಣ್ಣು ಮತ್ತು ಎಲೆ ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ
ನೋಣಿ ಹಣ್ಣು
Follow us on

ನೋಣಿ ಹಣ್ಣು ದೇಹದಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗೆ ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ. ಇದರ ಎಲೆಗಳು, ಕಾಂಡ ಮತ್ತು ಹಣ್ಣಿನ ರಸಗಳನ್ನು ಔಷಧೀಯವಾಗಿ ಬಳಸಲಾಗುತ್ತದೆ. ಈ ಹಣ್ಣು 100ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಮತ್ತು 150ಕ್ಕೂ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ನೋಣಿ ಹಣ್ಣನ್ನು (Noni Fruit) ಸೇವಿಸಿದರೆ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಸಹ ತಡೆಯಬಹುದಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಈ ಹಣ್ಣಗಳನ್ನು ಸಿಪ್ಪೆ ಸುಲಿದು ಮಾರಾಟಕ್ಕೆ ಇಡುತ್ತಾರೆ. ಈ ಹಣ್ಣಿನ ವಿಶೇಷತೆ ಮತ್ತು ಪ್ರಯೋಜನಗಳು ಏನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

1. ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ
ಪ್ರಸ್ತುತ ಕೊರೊನಾ ಕಾಲಘಟ್ಟವಾಗಿರುವುದರಿಂದ ಜನರು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನೋಣಿ ಹಣ್ಣನ್ನು ಸೇವಿಸುವುದು ಉತ್ತಮ. ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.

2. ತೂಕ ಇಳಿಕೆಗೆ ಸಹಕಾರಿ
ನೋಣಿ ಹಣ್ಣು ಸ್ಥೂಲಕಾಯ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಬೇಗನೆ ತೂಕ ಇಳಿಸಿಕೊಳ್ಳಲು ಬಯಸುವ ಜನರಿಗೆ ಇದು ತುಂಬಾ ಪ್ರಯೋಜನಕಾರಿ. ಬೊಜ್ಜು ಕಡಿಮೆಯಾದರೆ ಅನೇಕ ರೋಗಗಳಿಂದ ದೂರವಿದ್ದಂತೆ ಎಂದು ವೈದ್ಯರು ಕೂಡ ಹೇಳುತ್ತಾರೆ. ಹೀಗಾಗಿ ತೂಕ ಇಳಿಕೆಗಾಗಿ ನೋಣಿ ಹಣ್ಣು ಸೇವಿಸಿ.

3. ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ನೋಣಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ನೋಣಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಕಡಿಮೆಯಾಗುತ್ತದೆ. ಅಲ್ಲದೇ ಮಧುಮೇಹ ಬಾರದಂತೆ ತಡೆಯಲು ಕೂಡ ಈ ಹಣ್ಣನ್ನು ಸೇವಿಸುವುದು ಉತ್ತಮ.

4. ಕ್ಯಾನ್ಸರ್ ನಿವಾರಕ
ಹಣ್ಣಿನಲ್ಲಿ ಬೀಟಾ-ಗ್ಲುಕಾನ್ಸ್ ಮತ್ತು ಸಂಯೋಜಿತ ಲಿನೋಲಿಕ್ ಆಮ್ಲವಿದೆ ಎಂದು ಸಂಶೋಧನೆ ತಿಳಿಸಿದೆ. ಹೀಗಾಗಿ ನೋಣಿ ಹಣ್ಣಿನ ರಸವನ್ನು ಕುಡಿಯುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ನಿಂದ ರಕ್ಷಿಸಬಹುದು ಎಂದು ತಜ್ಞರು ಹೇಳಿದ್ದಾರೆ.

5. ಬಂಜೆತನದ ಸಮಸ್ಯೆಗೆ ರಾಮಬಾಣ
ಬಂಜೆತನದ ಸಮಸ್ಯೆಯನ್ನು ತೊಡೆದುಹಾಕುವಲ್ಲಿ ನೋಣಿ ಹಣ್ಣು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ತೆಗೆದುಕೊಳ್ಳುವುದರಿಂದ, ಪುರುಷರಲ್ಲಿ ದುರ್ಬಲತೆ ಮತ್ತು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸಬಹುದು. ಇದು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈ ವಿಷಯಗಳನ್ನು ನೆನಪಿನಲ್ಲಿಡಿ
*  ಮೂತ್ರಪಿಂಡ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ನೋಣಿ ಹಣ್ಣಿನ ರಸ ಕುಡಿಯಬಾರದು.

*  ಅಧಿಕ ಬಿಪಿ ಸಮಸ್ಯೆಯಿರುವವರು, ವೈದ್ಯರ ಅಭಿಪ್ರಾಯವನ್ನು ತಿಳಿದ ನಂತರವೇ ನೋಣಿ ಹಣ್ಣು ಸೇವಿಸಬೇಕು.

ಇದನ್ನೂ ಓದಿ:
Green Chili Benefits: ಹಸಿರು ಮೆಣಸಿನಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಮೆಣಸನ್ನು ಬಿಡುವುದಿಲ್ಲ

Black Pepper Benefits: ನಾಲ್ಕು ಕಾಳು ಕರಿಮೆಣಸನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ