Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಾವಸು ಸಂವತ್ಸರದಲ್ಲಿ ಕಾಡಲಿದೆ ಹೊಸ ರೋಗ, ಈ ಕಾಲದಲ್ಲೂ ಸಕಲ ಸಂಪತ್ತುಗಳನ್ನು ನೀಡುವ ವಿಶ್ವಾಸವಿರಲಿ

ಈ ಸಂವತ್ಸರದಲ್ಲಿ ಸಸ್ಯಗಳು ಮಧ್ಯಮ ಪ್ರಮಾಣದಲ್ಲಿ ಬೆಳವಣಿಗೆ ಹಾಗೂ ಫಲವನ್ನು ಕೊಡುತ್ತವೆ. ಸಂಪತ್ತು ಕೂಡ ಅತಿಯಾಗಿಯೂ ಹಾಗೂ ಶೂನ್ಯವಾಗಿಯೂ ಇರಲಾರದು. ಈ ವರ್ಷ ಮಳೆಯೂ ಕೂಡ ಅತಿವೃಷ್ಟಿಯೂ ಆಗದೇ ಅನಾವೃಷ್ಟಿಯೂ ಆಗದೇ ಇರುವಂತೆ ಬೀಳುತ್ತದೆ. ಚೋರ ಭೀತಿ ಅಧಿಕ, ಹೊಸ ರೋಗ ಅಥವಾ ಒಂದೇ ರೋಗ ಎಲ್ಲೆಡೆ ಕಾಣಿಸಿಕೊಳ್ಳುವುದು. ರಾಜರುಗಳು ಲೋಭದಿಂದ ಕೂಡಿರುವರು.

ವಿಶ್ವಾವಸು ಸಂವತ್ಸರದಲ್ಲಿ ಕಾಡಲಿದೆ ಹೊಸ ರೋಗ, ಈ ಕಾಲದಲ್ಲೂ ಸಕಲ ಸಂಪತ್ತುಗಳನ್ನು ನೀಡುವ ವಿಶ್ವಾಸವಿರಲಿ
ಯುಗಾದಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2025 | 8:59 AM

ಭಾರತೀಯರ ಹೊಸ ವರ್ಷ ಯುಗಾದಿಯಿಂದ (ugadi 2025) ಆರಂಭ. ಇದಕ್ಕೆ ಕಾರಣ ಪ್ರಕೃತಿ ಸಹಜತೆ.‌ ಮನುಷ್ಯ ಪ್ರಕೃತಿಯ ಜೊತೆ, ಕಾಲದ ಜೊತೆ ಬದುಕುತ್ತಿದ್ದ. ಹಾಗಾಗಿ ಪ್ರಕೃತಿ ಯಾವಾಗ ನವ್ಯವಾಗುವುದೋ ಆಗ ಮನುಷ್ಯನೂ ನವೀನನಾಗುತ್ತಿದ್ದ. ಆದರೆ ಬರುತ್ತಾ ಮನುಷ್ಯನೇ ತನ್ನ ಕಾಲವನ್ನು, ಜಗತ್ತನ್ನು ಸೃಷ್ಟಿಸಿಕೊಂಡ. ಸೂರ್ಯ ಚಂದ್ರರಾಗಲೀ, ನಕ್ಷತ್ರ, ಭೂಮಿಯಾಗಲಿ, ಗಾಳಿಯಾಗಲಿ ತನ್ನ ಅಸ್ತಿತ್ವವನ್ನು ಬದಲಿಸಿಲ್ಲ. ಭೂಮಿಯಲ್ಲಿ ಬದಲಾವಣೆ ಆಗಿದ್ದರೆ ಅದು ಮನುಷ್ಯನಿಂದ‌ ಮಾತ್ರ. ಅದರೂ ಸೃಷ್ಟಿಯ ಕೆಲವನ್ನು ಬದಲಿಸಲಾಗದಿದ್ದರೂ ಅಥವಾ ಬದಲಿಸಿದರೂ ಅದು ಸಹಜವಾಗಿ ಯಥಾಸ್ಥಿತಿಗೆ ಮರಳುವುದು ಸಹಜತೆ. ಅಂತಹ ವಿಶೇಷ ದಿನ ಯುಗಾದಿ.

ಇದು ವಿಶ್ವಾವಸು ಸಂವತ್ಸರದ ಮಾರ್ಚ್ ಮೂವತ್ತ ಒಂದರಿಂದ ಆರಂಭವಾಗಲಿದೆ. ಆರಂಭದ ವಾರ, ನಕ್ಷತ್ರ ಯೋಗ ಕರಣಗಳು ಯಾವ ಫಲವನ್ನು ಕೊಡುತ್ತವೆ ಎನ್ನುವುದನ್ನು ನೋಡಬೇಕಿದೆ.

ಈ ಸಂವತ್ಸರದಲ್ಲಿ ಸಸ್ಯಗಳು ಮಧ್ಯಮ ಪ್ರಮಾಣದಲ್ಲಿ ಬೆಳವಣಿಗೆ ಹಾಗೂ ಫಲವನ್ನು ಕೊಡುತ್ತವೆ. ಸಂಪತ್ತು ಕೂಡ ಅತಿಯಾಗಿಯೂ ಹಾಗೂ ಶೂನ್ಯವಾಗಿಯೂ ಇರಲಾರದು. ಈ ವರ್ಷ ಮಳೆಯೂ ಕೂಡ ಅತಿವೃಷ್ಟಿಯೂ ಆಗದೇ ಅನಾವೃಷ್ಟಿಯೂ ಆಗದೇ ಇರುವಂತೆ ಬೀಳುತ್ತದೆ. ಚೋರ ಭೀತಿ ಅಧಿಕ, ಹೊಸ ರೋಗ ಅಥವಾ ಒಂದೇ ರೋಗ ಎಲ್ಲೆಡೆ ಕಾಣಿಸಿಕೊಳ್ಳುವುದು. ರಾಜರುಗಳು ಲೋಭದಿಂದ ಕೂಡಿರುವರು.

ಇದನ್ನೂ ಓದಿ
Image
ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಲೇಬೇಡಿ; ಸಮಸ್ಯೆ ತಪ್ಪಿದಲ್ಲ!
Image
ಈ ಗುಣಗಳಿದ್ದರೆ ಲಕ್ಷಗಟ್ಟಲೆ ಸಂಬಳ ಇದ್ದರೂ ನೀವು ಸಾಲದಲ್ಲೇ ಇರುತ್ತೀರಿ
Image
ಮನೆಯಲ್ಲಿ ದೇವರಿಗೆ ಒಂದು ಅಗರಬತ್ತಿ ಏಕೆ ಹಚ್ಚಬಾರದು?
Image
ಮನೆಯಲ್ಲಿ ಶ್ರೀಕೃಷ್ಣನ ಫೋಟೋ, ಮೂರ್ತಿ ಇಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

ಭಾನುವಾರ :

ಈ ವರ್ಷ ಆರಂಭವಾಗುವುದು ಭಾನುವಾರದಿಂದ. ಅಂದರೆ ಈ ವರ್ಷದ ಅಧಿಪತಿ ಸೂರ್ಯ. ಇವನ ಆದಿಪತ್ಯದಿಂದ ಪ್ರಪಂಚದಲ್ಲಿ ಏನಾಗುತ್ತದೆ ಎಂದರೆ –

ರವಿವಾರೇ ಗತೇ ವರ್ಷೇ

ರಾಜಾ ರೋಗೀ ಭವಿಷ್ಯತಿ |

ಪ್ರಜಾಃ ಪೀಡಾಂ ವ್ರಜಿಷ್ಯಂತಿ

ದುರ್ಭಿಕ್ಷಂ ಸಂಭವಿಷ್ಯತಿ ||

ಭಾನುವಾರದಂದು ವರ್ಷಾರಂಭವಾದರೆ ರಾಜರು ರೋಗದಿಂದ ಗ್ರಸ್ಥರಾಗುವರು. ಪ್ರಜೆಗಳಿಗೆ ಪೀಡೆಯುಂಡಾಗಲಿದೆ ಹಾಗೂ ಆಹಾರಕ್ಕೆ ಕೊರತೆ ಕಂಡುಬರಲಿದೆ.

ರೇವತೀ ನಕ್ಷತ್ರ :

ಇನ್ನು ರೇವತೀ ನಕ್ಷತ್ರದಿಂದ ಯುಗಾದಿ ಆರಂಭ. ಹಾಗಾಗಿ ಈ ನಕ್ಷತ್ರದಲ್ಲಿ ಆದರೆ ಯಾರಿಗೆ ಏನು ಲಾಭ –

ಶುಭಂ ಸೌಮ್ಯಂ ಚ ರೇವತ್ಯಾ

ಮಾರ್ಗಶೀರ್ಷೇ ಫಲಂ‌ ಶುಭಮ್ |

ಧನಧಾನ್ಯಸಮೃದ್ಧಿಃ ಸ್ಯಾತ್

ಪ್ರಜಾಸುಖಮುದಾಹೃತಮ್ ||

ಮಂಗಲೂ ಸೌಮ್ಯವೂ ಈ ನಕ್ಷತ್ರದಲ್ಲಿ ಇರಲಿದೆ. ಮಾರ್ಗಶಿರ ಮಾಸದಲ್ಲಿ ಈ ನಕ್ಷತ್ರದ ಶುಭಫಲವನ್ನು ಕಾಣಬಹುದು. ಈ ವರ್ಷ ಧನ ಧಾನ್ಯಗಳು ಸಮೃದ್ಧವಾಗಿ ಇರುತ್ತವೆ. ಪ್ರಜೆಗಳಲ್ಲಿ ಸುಖ ನೆಮ್ಮದಿಯಿರಲಿದೆ.

ಇದನ್ನೂ ಓದಿ: ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಲೇಬೇಡಿ; ಸಮಸ್ಯೆ ತಪ್ಪಿದಲ್ಲ!

ಐಂದ್ರ ಯೋಗ :

ಯುಗಾದಿಯ ಆರಂಭದಲ್ಲಿ ಇರುವ ಯೋಗ ಐಂದ್ರ. ಇಂದ್ರಸಂಬದ್ಧವಾದ ಯೋಗದಿಂದ ಆರಂವಾದ ವರ್ಷದಲ್ಲಿ

ಐಂದ್ರೇ ಯೋಗೇ ಶುಭಂ ರಾಜ್ಯಂ

ಸರ್ವಸಿದ್ಧಿಕರಂ ಶುಭಮ್ |

ರಾಜಾನಃ ಸುಖಸಂಪನ್ನಾಃ

ಪ್ರಜಾಃ ಸಂತೋಷಿತಾ ಭವೇತ್ ||

ಈ ವರ್ಷ ರಾಜ್ಯಕ್ಕೆ ಜಾಗೂ ರಾಷ್ಟ್ರಕ್ಕೆ ಶುಭ. ರಾಜ್ಯದಲ್ಲಿ ಅಂದುಕೊಂಡ ಕಾರ್ಯಗಳು ನೆರವೇರುವುದಹ. ರಾಜಾರೂ ಹಾಗೂ ಪ್ರಜೆಗಳು ಸಂತೋಷದಿಂದ ಇರುವರು.

ಭವ ಕರಣ :

ವಿಶ್ವಾವಸು ವರ್ಷ ಆರಂಭವಾಗುವುದು ಭವ ಕರಣದಿಂದ. ಹಾಗಾಗಿ ಆ ಕರಣದ ಫಲವೇನೆಂದು ಕಾಲಪ್ರಕಾಶಿಕಾ ಹೀಗೆ ಹೇಳುತ್ತದೆ –

ಭಾವೇ ವೀರ್ಯಂ ಬಲಂ ಪ್ರಜ್ಞಾ

ಸರ್ವಕಾರ್ಯೇ ಜಯಪ್ರದಮ್ |

ಧನಧಾನ್ಯಸಮೃದ್ಧಿಶ್ಚ

ಕಾರ್ಯಸಿದ್ಧಿಃ ಸದಾ ಭವೇತ್ ||

ಎಲ್ಲ ಕಾರ್ಯದಲ್ಲಿ ಶಕ್ತಿ, ಸಾಮರ್ಥ್ಯಯಿರಲಿದ್ದು, ಬುದ್ಧಿಯನ್ನು ಬಳಸಿ ಜಯವನ್ನು ಪಡೆಯಬಹುದಾಗಿದೆ. ಎಲ್ಲವೂ ಸಮೃದ್ಧವಾಗಿರುವ ಈ ಕರಣದಿಂದ‌ ಎಲ್ಲವೂ ಸಿದ್ಧಿಸುವುದು.

ಹೀಗೆ ಜ್ಯೋತಿಷ್ಯ ಗ್ರಂಥಗಳು ವರ್ಷದ ಸಾಮಾನ್ಯ ಚಿತ್ರಣವನ್ನು ಬಿತ್ತರಿಸುತ್ತವೆ. ಇದು ಎಲ್ಲರಿಗೂ ಆತ್ಮಬಲವನ್ನು ಕೊಡುತ್ತದೆ.

ಈ ದಿನದಂದು ವರ್ಷಫಲವನ್ನು ಶ್ರವಣ ಮಾಡಬೇಕು, ಗ್ರಹಗಳ ಚಾರವನ್ನು ಅರಿತುಕೊಂಡು ಮುಂದಿನ ಜೀವನವನ್ನು ನಡೆಸಬೇಕು ಎನ್ನುವುದು ಪ್ರಾಚೀನ ಪದ್ಧತಿ. ಅದರ ಜೊತೆ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಶ್ರವಣದಿಂದ ಶುಭಗಳು ಬಂದು ಸೇರುತ್ತವೆ, ಅಶುಭಗಳು ನಾಶವಾಗುತ್ತವೆ.

– ಲೋಹಿತ ಹೆಬ್ಬಾರ್ – 8762924271

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ