Sign In

By signing in or creating an account, you agree with Associated Broadcasting Company's Terms & Conditions and Privacy Policy.

April 2025 Monthly Horoscope: ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಮಿಶ್ರಫಲ ಪ್ರಾಪ್ತಿಯಾಗಲಿದೆ

ಈ ತಿಂಗಳಲ್ಲಿ ಸೂರ್ಯನ ಹಾಗೂ ಶನಿಯ ಸ್ಥಾನಪರಿವರ್ತನೆಯಾಗಲಿದ್ದು ಅವರ ಪ್ರಭಾವ ಎಲ್ಲರ ಮೇಲೆ ಬೀಳುವುದು. ಸೂರ್ಯನು ತನ್ನ ಪರಮೋಚ್ಚಸ್ಥಾನದಲ್ಲಿ ಇದ್ದು ಎಲ್ಲರಿಗೂ ಅದರಲ್ಲಿಯೂ ರವಿದಶೆಯುಳ್ಳವರಿಗೆ ಶುಭವನ್ನು ಮಾಡುವನು. ಮೇಷದಿಂದ ಮೀನದವರೆಗಿನ 12 ರಾಶಿಗಳ ಏಪ್ರಿಲ್​ ತಿಂಗಳ ಭವಿಷ್ಯ, ಶುಭ ಮತ್ತು ಅಶುಭವನ್ನು ತಿಳಿಸಲಾಗಿದೆ.

April 2025 Monthly Horoscope: ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಮಿಶ್ರಫಲ ಪ್ರಾಪ್ತಿಯಾಗಲಿದೆ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on:Mar 29, 2025 | 9:51 PM

ಈ ತಿಂಗಳಲ್ಲಿ ಸೂರ್ಯನ ಹಾಗೂ ಶನಿಯ ಸ್ಥಾನಪರಿವರ್ತನೆಯಾಗಲಿದ್ದು ಅವರ ಪ್ರಭಾವ ಎಲ್ಲರ ಮೇಲೆ ಬೀಳುವುದು. ಸೂರ್ಯನು ತನ್ನ ಪರಮೋಚ್ಚಸ್ಥಾನದಲ್ಲಿ ಇದ್ದು ಎಲ್ಲರಿಗೂ ಅದರಲ್ಲಿಯೂ ರವಿದಶೆಯುಳ್ಳವರಿಗೆ ಶುಭವನ್ನು ಮಾಡುವನು.

ಮೇಷ ರಾಶಿ: ಏಪ್ರಿಲ್ ತಿಂಗಳಲ್ಲಿ ರಾಶಿ ಚಕ್ರದ ಮೊದಲರಾಶಿಯವರಿಗೆ ಶುಭ. ಸೂರ್ಯನು ತನ್ನ ಉಚ್ಚರಾಶಿಗೆ ಬರಲಿದ್ದು ಪೂರ್ಣಬಲವನ್ನು ಈ ರಾಶಿಗೆ ನೀಡೂವನು. ರವಿ ದಶೆಯವರಿಗೆ ಉನ್ನತ ಸ್ಥಾನಮಾನ ಸಿಕ್ಕು, ತಮ್ಮ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಬಹುದು. ದ್ವಿತೀಯದಲ್ಲಿ ಇರುವ ಗುರುವೂ ನಿಮಗೆ ಶುಭದಾಯಕನೇ. ನಿಮ್ಮ ಮಾತು ನಡೆಯುವುದು. ಮಾತಿನಿಂದ ಸೋಲಿಸುವ ಸಾಧ್ಯತೆ ಇದೆ. ನಿಮ್ಮ ಮಾತಿನ ಸಾಮರ್ಥ್ಯ ಎಲ್ಲರಿಗೂ ಗೊತ್ತಾಗಲಿದೆ. ಒಳ್ಳೆಯ ಮಾತುಗಳೇ ನಿಮ್ಮ ಬಾಯಿಂದ ಬರುವುದು. ದ್ವಾದಶದಲ್ಲಿ ನಾಲ್ಕು ಗ್ರಹಗಳ ಯೋಗವಿದ್ದು, ಶನಿಯೇ ನಿಮಗೆ ಹೆಚ್ಚು ಪ್ರಭಾವವನ್ನು ಬೀರುವನು. ಸಾಡೇ ಸಾಥ್ ಇರುವ ಕಾರಣ ಎಚ್ಚರದ ಹೆಜ್ಜೆ ಅತ್ಯವಶ್ಯಕ. ಹನುಮಾನ್ ಚಾಲಿಸ್ ಪಠಿಸಿ.

ವೃಷಭ ರಾಶಿ: ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಮಿಶ್ರಫಲ ಪ್ರಾಪ್ತಿಯಾಗಲಿದೆ. ದ್ವಾದಶದಲ್ಲಿ ಸೂರ್ಯನ ಆಗಮನವಾಗಿದ್ದು ತಂದೆಯ ಕಾರಣಕ್ಕೆ ಹಣಕಾಸಿನ ವ್ಯಯವಾಗಲಿದೆ. ಸರ್ಕಾರದ ಕಾರ್ಯ ಪೂರ್ಣವಾಗದು. ಮುಖ್ಯವಾಗಿ ಆತ್ಮಬಲದ ಕೊರತೆ ಎದ್ದು ಕಾಣಿಸುತ್ತದೆ. ಎಲ್ಲದಕ್ಕೂ ಭಯದಿಂದಲೇ ಇರುವಿರಿ. ರವಿ ದಶೆ ಇರುವವರಿಗೆ ಮಾನಸಿಕ ಒತ್ತಡ ಅಧಿಕ. ಇನ್ನು ಶುಕ್ರನು ರಾಶಿಯ ಅಧಿಪತಿಯಾಗಿದ್ದು ಏಕಾದಶದಲ್ಲಿ ಇದ್ದು ಆರ್ಥಿಕತೆಯನ್ನು ಬಲಗೊಳಿಸುವನು. ಬರಬೇಕಾದ ಹಣವನ್ನು ತರುವ ಉಪಾಯವೂ ಗೊತ್ತಾಗಲಿದೆ. ಜೀವನಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ ಸಿಕ್ಕ ಅವಕಾಶದಲ್ಲಿ ಮಾಡಿ ಮುಗಿಸುವಿರಿ. ಶುಕ್ರದಶೆ ನಿಮಗೆ ಅತ್ಯುತ್ತಮ ದಶೆಯಾಗಲಿದೆ. ಆದಿತ್ಯ ಹೃದಯ ಸ್ತೋತ್ರವನ್ನು ಮಾಡಿ. ಅಥವಾ ಸೂರ್ಯನಿಗೆ ಸೂರ್ಯೋದಯದ ಸಮಯಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ.

ಮಿಥುನ ರಾಶಿ: ಇದು ಏಪ್ರಿಲ್ ತಿಂಗಳಾಗಿದ್ದು, ಈ ರಾಶಿಯವರಿಗೆ ಈ ತಿಂಗಳು ಶುಭಪ್ರದವಲ್ಲವೆಂದೇ ಹೇಳಬೇಕು. ರಾಶಿಯ ಅಧಿಪತಿ ನೀಚನಾಗಿದ್ದು ದಶಮದಲ್ಲಿ ಇರುವನು. ವೃತ್ತಿ ಅಥವಾ ಉದ್ಯೋಗದ ವಿಚಾರದಲ್ಲಿ ಬಹಳ ಹಿಂಸೆಯನ್ನು ಅನುಭವಿಸಬೇಕಾದೀತು. ಬುಧ ದಶೆಯ ನಡೆಯುತ್ತಿರುವವರಿಗೆ ಎಡಬಿಡದೇ ಕಾಡುವ ನೋವು, ಜ್ವರಾದಿಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟ. ಗುರುವೂ ಸದ್ಯ ನಿಮ್ಮ ಪಾಲಿಗೆ ಬಲಾಡ್ಯನಲ್ಲ. ತಂದೆಯಿಂದ ನಿಮಗೆ ಸಾಂತ್ವನ ಸಿಗುವುದು. ಶನಿಯು ದಶಮದಲ್ಲಿ ಉದ್ಯೋಗಕ್ಕೆ ಬೇಕಾದ ಮನಸ್ಸು ಕೊಡುವುದು ಕಷ್ಟ. ಕೊಟ್ಟರೂ ಸರಿಯಾಗಿ ಮಾಡಲು ಸಾಧ್ಯವಾಗದು. ನಿಮ್ಮ ಮಾತು ಬಹಳ ಒರಟಾಗಿ ಕೇಳಿಸುವುದು. ಅಸತ್ಯವನ್ನು ಹೆಚ್ಚು ಮಾತನಾಡುವಿರಿ. ಸಾಮರ್ಥ್ಯವೂ ಹೇಳಿಕೊಳ್ಳುವಂತೆ ಇರದು. ಧನ್ವಂತರಿಯ ಸ್ತೋತ್ರವನ್ನು ಆಹಾರ ಸ್ವೀಕಾರಕ್ಕಿಂತ ಮೊದಲು ಹೇಳಿ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಈ ತಿಂಗಳು ಅಧಿಕ ಶುಭದಿಂದ ಕೂಡಿರುವುದು. ಗುರುಬಲವು ನಿಮಗಿದ್ದು, ಗುರುದಶೆಯೂ ಇದ್ದರೆ ನೀವು ಅತ್ಯಂತ ಭಾಗ್ಯಶಾಲಿಗಳು. ನಿಮ್ಮ ಎಲ್ಲ ಕಾರ್ಯವೂ ಸುಸೂತ್ರವಾಗಿ ಕೊನೆಗೊಳ್ಳುವುದು. ಇನ್ನೇನು ಬದಲಾವಣೆಯ ಕಾಲ ಬಂದಿದ್ದು, ಒಳ್ಳೆಯದನ್ನು ಒಳ್ಳೆಯ ಸಮಯದಲ್ಲಿ ಆರಂಭಿಸಿದರೆ ಎಲ್ಲವೂ ತಾನಾಗಿಯೇ ನಡೆಯುವುದು. ಇನ್ನು ರವಿಯು ದಶಮದಲ್ಲಿ ಇದ್ದು ವೈದ್ಯವೃತ್ತಿಯವರಿಗೆ ಕೀರ್ತಿಯನ್ನೂ ಪ್ರತಿಷ್ಠೆಯನ್ನೂ ತಂದುಕೊಡುವನು. ಬಂಗಾರ ಆಗೂ ಬಟ್ಟೆಯ ವ್ಯಾಪಾರದಲ್ಲಿ ಅಧಿಕ ಲಾಭ. ಕುಜನು ನೀಚನಾಗಿ ನಿಮ್ಮ ರಾಶಿಯಲ್ಲಿಯೇ ಇರುವ ಕಾರಣ ಮಾನಸಿಕ ಸ್ಥಿತಿಯೂ ಸರಿ ಇರದು. ಕಲಹಗಳು ಅಧಿಕವಾಗಿರುವುದು. ಎಲ್ಲರ ಜೊತೆ ಮನಸ್ತಾಪವೇ ಅಧಿಕ. ಅವಿವಾಹಿತರಿಗೆ ವಿವಾಹ ಭಾಗ್ಯ ಬಂದರೂ ಅದು ವಿಳಂಬವಾಗಲು ಕಾರಣಗಳಿರಲಿವೆ. ಸ್ವಯಂವರ ಪಾರ್ವತಿಯ ಸ್ತೋತ್ರ ಅಥವಾ ಸೀತಾ ಕಲ್ಯಾಣವನ್ನು ಮಾಡಿಸಿ.

ಸಿಂಹ ರಾಶಿ: ಏಪ್ರಿಲ್ ತಿಂಗಳಲ್ಲಿ ಈ ರಾಶಿಯವರಿಗೆ ಮಧ್ಯಫಲ. ರಾಶಿ ಅಧಿಪತಿ ನವಮ ಸ್ಥಾನದಲ್ಲಿ ಇದ್ದು ಗೌರವ ಸಮ್ಮಾನಗಳಿಗೆ ಅನುವು ಮಾಡಿಕೊಡುವನು. ವಿಶೇಷವಾಗಿ ರಕ್ಷಣಾಕ್ಷೇತ್ರ ಹಾಗೂ ವೈದ್ಯಕೀಯ ಕ್ಷೇತ್ರದವರಿಗೆ. ಇನ್ನು ತಂತ್ರಜ್ನಾನದವರಿಗೂ ಉನ್ನತ ಸ್ಥಾನ, ಸಮ್ಮಾನಗಳು ಲಭ್ಯವಾಗಲಿವೆ. ಶುಕ್ರನು ಅಷ್ಟಮದಲ್ಲಿ ಇದ್ದು ಸಂಗಾತಿಯಿಂದ ಅಪಮಾನ, ಕಫರೋಗಗಳನ್ನು ನೀಡುವನು. ಆಲಂಕಾರಿಕ ಸಾಮಗ್ರಿಗಳನ್ನು ಯೋಗ್ಯವಾಗಿ ಬಳಸದೇ ಅದರಿಂದ ವಿಕಾರವನ್ನು ಮಾಡಿಕೊಳ್ಳುವಿರಿ. ಹೆಚ್ಚು ಸುಳ್ಳಾಡುವ ಸಂದರ್ಭ ಬರಲಿದೆ. ಸುಖವು ದುಃಖದಿಂದ ಮುಕ್ತಾಯವಾಗಲಿದೆ. ಉಷ್ಣ ಹಾಗೂ ಶೀತದಿಂದ ಕೂಡಿದ ರೋಗದ ಬಾಧೆ ಕಾಣಿಸಿಕೊಳ್ಳುವುದು. ತುರ್ತು ಚಿಕಿತ್ಸೆಗೆ ಹೋಗದೇ ಸಮಯವನ್ನು ತೆಗೆದುಕೊಂಡು ಮಾಡಿಸಿ. ಶಿವಕವಚವನ್ನು ಪಾರಾಯಣ ಮಾಡಿ.

ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ತಿಂಗಳು ಶುಭಾಶುಭದಾಯಕವಾಗಿದೆ. ರಾಶಿಯ ಅಧಿಪತಿ ಸಪ್ತಮದಲ್ಲಿ ನೀಚನಾಗಿದ್ದಾನೆ. ಇವನೇ ದಶಮಾಧಿಪತಿಯೂ ಅದಕಾರಣ ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ಅಥವಾ ಉದ್ಯೋಗವನ್ನು ಬದಲಿಸುವ ಸ್ಥಿತಿ ಬರಬಹುದು. ಸಂಗಾತಿಯಿಂದ ಅಸಹಕಾರ ಸಿಕ್ಕಂತೆ ಅನ್ನಿಸುವುದು. ಬುಧ ದಶೆ ನಡೆಯುತ್ತಿದ್ದರೆ ಬಹಳ ದುಃಖ, ಬಂಧುಗಳಿಂದ ಪೀಡೆ, ತಿಳಿದವರಿಂದ ಅಪಮಾನಗಳನ್ನು ಅನುಭವಿಸಬೇಕಾಗುವುದು. ಸೂರ್ಯನು ಉಚ್ಚರಾಶಿಯಲ್ಲಿ ಇದ್ದರೂ ಅಷ್ಟಮಭಾವವಾಗಿದ್ದು ಒತ್ತಡ, ಅನಾರೋಗ್ಯವು ಅಧಿಕವಾಗಿ ಕಾಣಿಸುವುದು. ನೀರಿನ ಕೊರತೆಯಿಂದ ಖಾಯಿಲೆ ಉದ್ಭವಿಸೀತು. ಗುರುಬಲ ಹಾಗೂ ಗುರುವಿನ ದೃಷ್ಟಿ ನಿಮ್ಮ ರಾಶಿಯಮೇಲಿದ್ದ ಕಾರಣ ಇದೆಲ್ಲದಕ್ಕೂ ಪರಿಹಾರವು ಅಂತಿಮವಾಗಿ ಸಿಗಲಿದೆ. ಅಲ್ಲಿಯವರೆಗೆ ತಾಳ್ಮೆ ನಿಮ್ಮದಾಗಬೇಕು. ಲಕ್ಷ್ಮೀನಾರಾಯಣ ಉಪಾಸನೆ ಸದ್ಯ ಅತ್ಯವಶ್ಯಕ.

ತುಲಾ ರಾಶಿ: ಈ ತಿಂಗಳು ನಿಮಗೆ ಶುಭದಾಯಕವಲ್ಲ. ರಾಶಿಯ ಅಧಿಪತಿ ಶುಕ್ರನು ಪರಮೋಚ್ಚಸ್ಥಿತಿಯಲ್ಲಿ ಇದ್ದು, ಪೂರ್ಣಪ್ರಮಾಣದ ಶುಭವನ್ನು ನೀಡಲಾರನು. ಶತ್ರುಗಳ ಬಗ್ಗೆ ಜಾಗರೂಕತೆ ಬೇಕು. ಅದರಲ್ಲಿಯೂ ವಿದೇಶದ ಅಪರಿಚಿತರ ಕೈಗೆ ಸಿಗುವ ಸಾಧ್ಯತೆ ಇದೆ. ಜೀರಿಗೆ ಸಂಬಂಧಿಸಿದ ರೋಗ ಕಾಣಿಸುವುದು. ಗುರುವಿನ ಬಲವೂ ನಿಮ್ಮ ರಾಶಿಗೆ ಇರದು. ವಿವಾಹಕ್ಕೆ ಪ್ರಯತ್ನಿಸಿದರೂ ಫಲಕೊಡದು. ವೈವಾಹಿಕ ಸಂಬಂಧ ದುರಂತ ಕಾಣುವ ಸಾಧ್ಯತೆ ಇದೆ. ಶತ್ರುಗಳಿಂದ ಅಪಮಾನವಾಗುವುದು. ದ್ವಿತೀಯಾಧಿಪತಿ ನೀಜನಾಗಿ ದಶಮದಲ್ಲಿ ಇದ್ದು ನಿಮ್ಮ ಉದ್ಯಮಕ್ಕೆ ಹಿನ್ನಡೆ ತರಬಹುದು. ಸಿಗುವ ಯೋಜನೆಗಳು ಸಿಗದೇ ಬೇಸರವಾಗಲಿದೆ. ಶುಕ್ರ ದಶೆಯವರಿಗೆ ಈ ತಿಂಗಳು ಅನುಕೂಲವಲ್ಲ. ನಿಮ್ಮ ಎಲ್ಲ ಸಾಮರ್ಥ್ಯಗಳೂ ಕಟ್ಟಲ್ಪಟ್ಟಿವೆ. ಯಾವುದೇ ಹೊಸತನಕ್ಕೆ ಹೋಗದೇ ಇರುವುದನ್ನೇ ಅನುಭವಿಸಿ. ದುರ್ಗಾ ನಮಸ್ಕಾರವನ್ನು ಮಾಡಿ.

ವೃಶ್ಚಿಕ ರಾಶಿ: ಇದು ರಾಶಿ ಚಕ್ರದ ಎಂಟನೇ ರಾಶಿಯಾಗಿದ್ದು, ಈ ರಾಶಿಯವರಿಗೆ ಮಧ್ಯಫಲವಿದೆ. ರಾಶಿಯ ಸ್ವಾಮಿ ನೀಚನಾಗಿ ನವಮಸ್ಥಾನದಲ್ಲಿ ಇದ್ದು ಕೆಳಸ್ತರದ ಜನರಿಂದ ಗೌರವ ಸಿಗುವುದು ಅಥವಾ ಅಲ್ಪಕಾರ್ಯಕ್ಕೆ ಮನ್ನಣೆ ಸಿಗಲಿದೆ. ಪಂಚಮ ಶನಿಯಿಂದ ನಿಮಗೆ ಬುದ್ಧಿ ಸೂಚಿಸದೇ ಇರುವುದು, ಮಕ್ಕಳ ಮೇಲೆ ಕೋಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿದೇಶದಿಂದ ಮರಳುವ ಸಾಧ್ಯತೆ ಎಲ್ಲವೂ ಇರಲಿದೆ. ವಾಹನ ಸೌಕರ್ಯ, ಭೋಗವಸಸ್ತುಗಳನ್ನು ಈ ತಿಂಗಳು ಅಧಿಕವಾಗಿ ಬಳಸುವಿರಿ. ತಂದೆಯ ಬಗ್ಗೆ ದ್ವೇಷ ಹುಟ್ಟಿಕೊಂಡೀತು. ವಿವಾಹಕ್ಕೆ ಯೋಗ್ಯ ಸಮಯ ಬಂದಿದ್ದು ನಕರಾತ್ಮಕ ಆಲೋಚನೆಗೆ ಅವಕಾಶ ಕೊಡುವುದು ಬೇಡ. ಉದ್ಯೋಗದಲ್ಲಿ ಉದ್ವೇಗ ಹೆಚ್ಚಾಗಿ, ಏನು ಮಾಡಬೇಕು ಎಂಬ ದಿಕ್ಕು ತೋಚದೇ ಇರಬಹುದು. ನಿಮ್ಮ ಮಾತು ಆಪ್ತವಾಗಿದ್ದು ಎಲ್ಲರಿಗೂ ಹಿತವೆನಿಸುವುದು ಮತ್ತು ಒಪ್ಪಿಕೊಳ್ಳುವರು. ಶನಿಯ ಪೀಡಾಪರಿಹಾರ ಸ್ತೋತ್ರವನ್ನು ಪಠಿಸಿ.

ಧನು ರಾಶಿ: ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಅಶುಭ. ರಾಶಿಯ ಅಧಿಪತಿ ಗುರು ಷಷ್ಠದಲ್ಲಿದ್ದಾನೆ. ಷಷ್ಠಾಧಿಪತಿ ಚತುರ್ಥದಲ್ಲಿ ಉಚ್ಚನಾಗಿದ್ದಾನೆ. ನಿಮ್ಮ ಮನೆಯಲ್ಲಿಯೇ ಶತ್ರುವಿರುವನು. ಬಹಳ ಎಚ್ಚರಿಕೆಯಿಂದ ಇರಬೇಕು. ಗುರು ದಶೆ ನಡೆಯುತ್ತಿದ್ದರೆ ನಿಮಗೆ ಬಹಳ ತೊಂದರೆ. ಸೂರ್ಯ ಈ ತಿಂಗಳಲ್ಲಿ ಪಂಚಮಸ್ಥಾನಕ್ಕೆ ಹೋಗಲಿದ್ದಾನೆ. ನವಮಸ್ಥಾನದ ಅಧಿಪತಿಯಾದ ಕಾರಣ ಮಕ್ಕಳಿಂದ ಪ್ರೀತಿ, ಗೌರವಗಳು ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಊಹಿಸಿದ ಸ್ಥಾನ, ವಿದ್ಯೆ, ಪ್ರಗತಿ ಕಾಣಬಹುದು. ವೈವಾಹಿಕ ಜೀವನ ಮಾತಿನಿಂದಲೇ ಹಾಳಾಗುವುದು. ಬುಧನು ನೀಚನಾಗಿದ್ದು ಉದ್ಯೋಗಕ್ಕೂ ಅವನೇ ಕಾರಣನಾದ ಕಾರಣ ನಿಮ್ಮ ಬಾಯಿ ಶುದ್ಧವಾದಷ್ಟು ಮಲಿನವಾಗುವುದು. ಒಳ್ಳೆಯ ಮಾತುಗಳನ್ನಾಡುವ ಮನಸ್ಸನ್ನು ಪ್ರಯತ್ನಪೂರ್ವಕವಾಗಿ ಮಾಡಬೇಕು. ಗುರುವಿನ ಸಮ್ಮುಖದಲ್ಲಿ ನಿಮ್ಮ ಸಮಸ್ಯೆಗೆ ಸಮಾಧಾನ ಕಂಡುಕೊಳ್ಳಿ.

ಮಕರ ರಾಶಿ: ಏಪ್ರಿಲ್ ತಿಂಗಳಲ್ಲಿ ಈ ರಾಶಿಯವರಿಗೆ ಶುಭ. ಮುಖ್ಯವಾಗಿ ಸಾಡೇ ಸಾಥ್ ಮುಕ್ತಾಯವಾಗಿದ್ದು ನಿಮ್ಮೊಳಗಿದ್ದ ಅಳುಕು ಒಂದೊಂದಾಗಿ ದೂರಾಗಲಿದೆ. ತೃತೀಯದಲ್ಲಿ ಇರುವ ಕಾರಣ ಎಲ್ಲವನ್ನೂ ಬಹಳ ಹಗುರವಾಗಿ ತೆಗೆದುಕೊಳ್ಳುವಿರಿ. ಚತುರ್ಥದಲ್ಲಿ ಅಷ್ಟಮಾಧಿಪತಿ ಇದ್ದು ಕೌಟುಂಬಿಕವಾದ ಭಿನ್ನತೆಗೆ ಕಾರಣನಾಗುವನು. ಚತುರ್ಥಾಧಿಪತಿಯೂ ಸಪ್ತಮದಲ್ಲಿ ಇದ್ದು, ವಿಶೇಷವಾಗಿ ಸಂಗಾತಿಯ ಕಡೆಯಿಂದ ನಿಮ್ಮ ಹೊಂದಾಣಿಕೆ ಸರಿದೂಗದು. ಕುಜ ದಶೆ ನಿಮಗೆ ಅಪಾಯಕಾರಿಯಾಗಿರುವುದು. ಸಹೋದರರು ನಿಮ್ಮನ್ನು ಸಹಿಸಿಕೊಳ್ಳಲಾರರು. ಏನಾದರೂ ಮಾಡಬೇಕೆಂಬ ತಂತ್ರವನ್ನು ಹೆಣೆಯುವರು. ವಿವಾಹದ ಕಾರ್ಯವನ್ನು ಮಾಡಲು ಅಥವಾ ನಿಶ್ಚಯವನ್ನು ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಬಹುದು. ಔದ್ಯೋಗಿಕವಾಗಿ ಮುನ್ನಡೆ ಕಾಣಬಹುದು. ನಿಮ್ಮ ಪ್ರತಿಭೆ ಪ್ರಕಟವಾಗಲಿದೆ. ಶಿವಸ್ತೋತ್ರವನ್ನು ಪಠಿಸಿ.

ಕುಂಭ ರಾಶಿ: ರಾಶಿಚಕ್ರದ ಹನ್ನೊಂದನೇ ರಾಶಿಯವರಿಗೆ ಈ ತಿಂಗಳು ಮಿಶ್ರಫಲ. ರಾಶಿಯ ಅಧಿಪತಿ ರಾಶಿಯನ್ನು ಬಿಟ್ಟು ಎರಡನೇ ರಾಶಿಗೆ ಹೋಗಿದ್ದಾನೆ. ಸಾಡೇ ಸಾಥ್ ನ ಅಂತ್ಯಭಾಗವಾಗಿದ್ದು ಆರ್ಥಿಕವಾಗಿ ಪಡೆಯಬೇಕಾದುದು ಸಿಗದು. ಯಾವುದನ್ನೂ ನ್ಯಾಯಯುತವಾಗಿ ಪಡೆಯಲಾಗದು. ಮನಸ್ಸು ಬಂದಂತೆ ಮಾತನಾಡುವಿರಿ. ಮಕ್ಕಳಿಗೆ ಆಶ್ವಾಸನೆ ಕೊಡುವಿರಿ. ತೃತೀಯಾಧಿಪತಿ ಷಷ್ಠದಲ್ಲಿ ಇದ್ದು ನಿಮ್ಮ ಎಲ್ಲ ಶಕ್ತಿಯೂ ಹ್ರಾಸವಾಗಲಿದೆ. ಶತ್ರುಗಳು ಅದನ್ನೆಲ್ಲ ತಮ್ಮ ವಶಕ್ಕೆ ಪಡೆಯುವರು. ಅವಿವಾಹಿತರ ವಿವಾಹಕ್ಕೆ ತಂದೆಯ ಶ್ರಮ ಅಧಿಕ. ಆದರೆ ಅದು ನಿಮಗಾಗದವರ ಕಾರಣದಿಂದ ಬಂದ ಸಂಬಂಧವೂ ದೂರಾಗುವುದು. ನಿಮ್ಮ ಉದ್ಯೋಗದಿಂದ ಕೈಸುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದಾಯವು ಕುಟುಂಬದ ಪೋಷಣೆಗೆ ಹೋಗುವುದು. ವಿವಾಹಕ್ಕಾಗಿ ಸ್ವಯಂವರ ಪಾರ್ವತಿ ಮಂತ್ರವನ್ನು ಜಪಿಸಿ.

ಮೀನ ರಾಶಿ: ಇದು ರಾಶಿ ಚಕ್ರದ ಕೊನೆಯ ರಾಶೀಯಾಗಿದ್ದು, ಈ ತಿಂಗಳಲ್ಲಿ ರಾಶಿಯ ಅಧಿಪತಿ ತೃತೀಯದಲ್ಲಿ ದುರ್ಬಲನಾಗಿದ್ದು ಯಾವುದೇ ಉತ್ಸಾಹ ನಿಮ್ಮ ಜೀವನದಲ್ಲಿ ಕಾಣಿಸದು. ಈ ರಾಶಿಯಲ್ಲಿಯೇ ಬುಧ, ಶನಿ, ಶುಕ್ರ ಹಾಗೂ ರಾಹುವು ಇರುವ ಕಾರಣ ಮಾನಸಿಕ ಒತ್ತಡ, ಗೊಂದಲ, ನಿರ್ಧಾರಗಳಲ್ಲಿ ಹಿನ್ನಡೆ ಇರಲಿದೆ. ಉದ್ಯೋಗವನ್ನೂ ಗಮನವಿಟ್ಟು ಮಾಡಲಾಗದು. ಯಾವುದೇ ರೋಚಕತೆಯಲ್ಲಿ ಆಸಕ್ತಿ ಇರದು. ವಿವಾಹಕ್ಕೆ ಅಧಿಕ ಶ್ರಮಹಾಕಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸ ನಿಮಗೆ ಖುಷಿಕೊಡದು. ಕುಟುಂಬ ಒತ್ತಡವೂ ನಿಮ್ಮ ಮೇಲೇ ಬರಲಿದೆ. ಶುಕ್ರ ದಶೆ ಇದ್ದವರಿಗೆ ಈ ತಿಂಗಳು ಯಾವುದನ್ನೂ ನಿಭಾಯಿಸುವ ಸಾಮರ್ಥ್ಯ ಅಥವಾ ದಾರಿ ಕಾಣಿಸುವುದು. ಸೂರ್ಯನಿಂದ ಸರ್ಕಾರದ ಕಾರ್ಯದಲ್ಲಿ ಪ್ರಗತಿ. ಗುರುಚರಿತ್ರೆಯನ್ನು ಪಠಿಸಿ.

Published On - 9:49 pm, Sat, 29 March 25