AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯಭವಿಷ್ಯ; ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿ, ನಿಮಗೆ ಭಯ ಕಾಡಬಹುದು

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 24 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯಭವಿಷ್ಯ; ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿ, ನಿಮಗೆ ಭಯ ಕಾಡಬಹುದು
ಪ್ರಾತಿನಿಧಿಕ ಚಿತ್ರImage Credit source: freepik
ಗಂಗಾಧರ​ ಬ. ಸಾಬೋಜಿ
|

Updated on: Mar 24, 2024 | 12:10 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ :ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:12 ರಿಂದ 06:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ03:41 ರಿಂದ 05:12 ರ ವರೆಗೆ.

ಮೇಷ ರಾಶಿ: ಸಂಗಾತಿಯು ಇಂದು ನಿಮ್ಮ ಆಸೆಗೆ ನೀರೆರೆಚಬಹುದು. ಉದ್ಯೋಗದಲ್ಲಿ ಪ್ರೀತಿಯು ಹಲವು ಕಾರಣಗಳಿಂದ ಕಡಿಮೆ ಆಗಬಹುದು. ಪಕ್ಷಪಾತಧೋರಣೆಯಿಂದ ನೀವು ಹೊರಬಂದರೆ ಮುಂದಿನ ಹಾದಿ ಸುಗಮ‌. ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ‌ ಬೇಸರ ತರಿಸಬಹುದು.‌ ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ಕಛೇರಿಯ ಕಾರ್ಯವು ಇಂದು ಅಧಿಕವಾಗಿ ಇರಲಿದೆ. ಸ್ಥಿರವಾದ ಬುದ್ಧಿಯನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಬರಬಹುದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮಗೆ ಜೀವನ ಸುಮ್ಮನೆ ನಷ್ಟವಾಗುತ್ತಿದ್ದಂತೆಲ್ಲ ಭಾಸವಾಗಿ, ಏನಾದರೂ ಹೊಸತನ್ನು ಮಾಡುವ ಆಸೆಯಾಗುವುದು‌ ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.‌ ಅಪರಿಚಿತರು ಇಂದು ಕಾರ್ಯಕ್ಕೆ ವಿಘ್ನದಂತೆ ಬರುವರು.

ವೃಷಭ ರಾಶಿ: ಬೇಕಾದಷ್ಟಕ್ಕೆ ಮಾತ್ರ ನಿಮ್ಮ ಮಾತು ಇರಲಿ. ನಿಮ್ಮಲ್ಲೇ ತಪ್ಪನ್ನು ಇಟ್ಟುಕೊಂಡು ಪರರನ್ನು ದೂಷಿಸುವುದು ಸರಿಯಾಗದು. ನಿಮ್ಮ ಉದ್ಯಮಕ್ಕ ಅನುಭವಿಗಳ ಕೊರತೆ ಅತಿಯಾದಂತೆ ಕಾಣಿಸುವುದು. ಅತಿಯಾದ ಮೋಹವು ನಿಮ್ಮ ವಿವೇಚನಾ ಶಕ್ತಿಯನ್ನು ಕುಗ್ಗಿಸಬಹುದು. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ಕರ್ತವ್ಯದಲ್ಲಿ ನಿರಾಸಕ್ತಿ ಇರುವುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು. ಇನ್ನೊಬ್ಬರನ್ನು ಮೆಚ್ಚಿಸಿ ಮಾಡುವ ಕಾರ್ಯಕ್ಕೆ ಗುಣಮಟ್ಟ ಕಡಿಮೆಯೇ.

ಮಿಥುನ ರಾಶಿ: ನೀವೇ ಹಾಕಿಕೊಂಡ ನಿರ್ಬಂಧಗಳನ್ನು ನೀವು ದಾಟಲಾಗದು. ಖುಷಿಯ ಕ್ಷಣಗಳನ್ನು ನೀವೇ ಕೈಯಾರೆ ನಾಶ ಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮ ವಿಚಾರವನ್ನು ನೀವು ಜೋಪಾನವಾಗಿ ನಿರ್ವಹಿಸಬೇಕಾಗುವುದು. ಆಪ್ತರನ್ನು ನೀವು ಬಹಳ ಆತ್ಮೀಯವಾಗಿ ಕಾಣುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಕಲೆಯಲ್ಲಿ ಉಂಟಾದ ಆಸಕ್ತಿಯು ನಿಮ್ಮ ಮನಸ್ಸನ್ನು ಚೆನ್ನಾಗಿಡಬಹುದು. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ಮನಸ್ಸಿನಿಂದ ಗಟ್ಟಿಯದ ಹೊರತು ಯಾವುದನ್ನೂ ನಿಭಾಯಿಸಲು ಆಗದು.

ಕಟಕ ರಾಶಿ: ಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಪೂರಕವಾಗಿ ಇರುವುದು ಉತ್ತಮ. ಕಳೆದುದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳುವಿರಿ‌. ಬೇಕಾದವರನ್ನು ದೂರ ಮಾಡಿಕೊಂಡು ಏನನ್ನೂ ಸಾಧಿಸಲಾರಿರಿ. ಯಾರ ಬೆಂಬಲವನ್ನೂ ನಿರೀಕ್ಷಿಸದೇ ನಿಮ್ಮ ಕಾರ್ಯವನ್ನು ಮಾಡುವಿರಿ. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಬಹುದು. ಸಮಾರಂಭಗಳಿಗೆ‌ ಸ್ನೇಹಿತರ ಜೊತೆ ಹೋಗುವಿರಿ. ಅಪರಿಚಿತರು ನಿಮ್ಮ ಬಳಿ ಹಣಕ್ಕಾಗಿ ಪೀಡಿಸಬಹುದು. ವಂಚನೆಗೆ ಗೊತ್ತಾಗದಂತೆ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸ್ಥಾನಕ್ಕೆ ಯೋಗ್ಯವಾದ ಮಾತು ಇರಲಿ.‌ ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯದ ಅಧಿಕ ಲಕ್ಷ್ಯ ಅವಶ್ಯಕ. ನಿಮ್ಮವರೇ ನಿಮಗೆ ಭಯವನ್ನು ಕಾಡಬಹುದು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ