AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಎಲ್ಲವನ್ನೂ ತಿಳಿದಿದ್ದೇ‌ನೆ ಎಂಬ ಅಹಂಕಾರ ಬೇಡ, ಮಾನಸಿಕವಾಗಿ ಕುಗ್ಗುವಿರಿ

ರಾಶಿ ಭವಿಷ್ಯ ಗುರುವಾರ(ಸೆ.26): ಎಲ್ಲವನ್ನೂ ತಿಳಿದಿದ್ದೇ‌ನೆ ಎಂಬ ಅಹಂಕಾರ ಬೇಡ. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಳ್ಳುವಿರಿ. ಮಕ್ಕಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಬೇರೆ ಕಡೆಗೆ ಕಳುಹಿಸುವ ವಸ್ತುಗಳು ನಿಮಗೆ ಕೊರತೆಯಾಗಬಹುದು. ಹಾಗಾದರೆ ಸೆಪ್ಟೆಂಬರ್​ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಎಲ್ಲವನ್ನೂ ತಿಳಿದಿದ್ದೇ‌ನೆ ಎಂಬ ಅಹಂಕಾರ ಬೇಡ, ಮಾನಸಿಕವಾಗಿ ಕುಗ್ಗುವಿರಿ
ಎಲ್ಲವನ್ನೂ ತಿಳಿದಿದ್ದೇ‌ನೆ ಎಂಬ ಅಹಂಕಾರ ಬೇಡ, ಮಾನಸಿಕವಾಗಿ ಕುಗ್ಗುವಿರಿ
TV9 Web
| Edited By: |

Updated on: Sep 26, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:54 ರಿಂದ ಸಂಜೆ 03:24, ಯಮಘಂಡ ಕಾಲ ಬೆಳಿಗ್ಗೆ 06:23ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:54 ರ ವರೆಗೆ.

ಧನು ರಾಶಿ: ನಿಮ್ಮ ನಿಯೋಜಿತ ಕಾರ್ಯಗಳನ್ನು ಮಾಡಲು ಜನರು ಸಿಗದೇಹೋಗಬಹುದು. ಧಾರ್ಮಿಕ ಕಾರ್ಯಗಳಿಗೆ ಮುಂದಾಳುತ್ವವವನ್ನು ವಹಿಸುವಿರಿ. ನಿಮ್ಮ ಬಳಿ ಸಾಲವನ್ನು ಕೇಳಬಹುದು. ವೈದ್ಯರಿಗೆ ಪ್ರಶಂಸೆ ಸಿಗಬಹುದು.‌ ಸರ್ಕಾರಿ ಉದ್ಯೋಗಿಗಳ ಸ್ಥಾನವು ಬದಲಾಗುವುದು. ಎಲ್ಲವನ್ನೂ ತಿಳಿದಿದ್ದೇ‌ನೆ ಎಂಬ ಅಹಂಕಾರ ಬೇಡ. ಭವಿಷ್ಯದ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಳ್ಳುವಿರಿ. ಮಕ್ಕಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಬೇರೆ ಕಡೆಗೆ ಕಳುಹಿಸುವ ವಸ್ತುಗಳು ನಿಮಗೆ ಕೊರತೆಯಾಗಬಹುದು. ಮನೆಯ ವಾತಾರಣದಲ್ಲಿ ಇರಲು ಖುಷಿಪಡುವಿರಿ. ನಿಮ್ಮ ವಸ್ತುಗಳನ್ನು ಸ್ನೇಹಿತನಿಗೆ ದಾನವಾಗಿ ಕೊಡುವಿರಿ. ಮಕ್ಕಳ‌ ಜೊತೆ ಸಮಯವನ್ನು ಕಳೆಯುವುದು ಇಷ್ಟವಾದೀತು. ರಹಸ್ಯ ವಿಚಾರಗಳನ್ನು ಗೊತ್ತಿಲ್ಲದೇ ಹಂಚಿಕೊಳ್ಳುವಿರಿ. ಕೆಲವು ಸಮಯ ಚೆನ್ನಾಗಿದೆ ಎಂದಿದ್ದು ಅನಂತರ ಚೆನ್ನಾಗಿರದೇಹೋಗಬಹುದು. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ನಿಮಗೆ ಕಷ್ಟವಾದೀತು‌‌.

ಮಕರ ರಾಶಿ: ನಿಮ್ಮ ಮಕ್ಕಳನ್ನು ಸರಿಯಾದ ಮಾರ್ಗಕ್ಕೆ ತರಲು ಸಮಯವು ಬೇಕಾಗುವುದು. ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಸಂಗಾತಿಯ ನೋವನ್ನು ಕೇಳುವಷ್ಟು ತಾಳ್ಮೆ ಇಲ್ಲವಾದೀತು. ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋಗಿ ಆರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ನಿರ್ಬಂಧಗಳು ಕುಟುಂಬದವರಿಗೆ ಇಷ್ಟವಾಗದು. ಕಛೇರಿಯ ಒತ್ತಡದ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಮಾನಸಿಕವಾಗಿ ನೀವು ಕುಗ್ಗುವಿರಿ. ವೇತನವನ್ನು ಹೆಚ್ಚಿಸಿಕೊಳ್ಳಲು ಮಾರ್ಗವನ್ನು ಹುಡುಕುವ ಸಂಭವ ಇದೆ. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಳ್ಳುವಿರಿ. ಆರಂಭದಲ್ಲಿಯೇ ಅಪನಂಬಿಕೆಯನ್ನು ದೂರಮಾಡಿಕೊಳ್ಳುವುದು ಉತ್ತಮ. ಸಂಗಾತಿಯನ್ನು ಹೊರಗೆ ಸುತ್ತಾಡಲು ಕರೆಯುವಿರಿ. ಯಾರೋ ಕೊಟ್ಟದ್ದನ್ನು ಸ್ವೀಕರಿಸುವುದಿಲ್ಲ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಆಹಾರದ ವಿಚಾರದಲ್ಲಿ ಸಿಟ್ಟಾಗುವಿರಿ. ಇದನ್ನು ಕಡಿಮೆ ಮಾಡಿಕೊಳ್ಳಬೇಕು.

ಕುಂಭ ರಾಶಿ: ಸಾಮಾಜಿಕ ಕಾರ್ಯಗಳ ಬಗ್ಗೆ ಕಿವಿಮಾತನ್ನು ಆಪ್ತರು ಹೇಳುವರು. ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಬೇಕು. ನಿಮ್ಮ ಮಾತು ಇಂದು ಕೇಳುಗರಿಗೆ ಹಿಂಸೆ ಕೊಡಬಹುದು. ಸಂಗಾತಿಯ ನಡುವೆ ಭಿನ್ನಾಭಿಪ್ರಾಯವು ಬರಬಹುದು. ಸತತ ಸುತ್ತಾಟದಿಂದ ಆಯಾಸವಾಗಲಿದೆ. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ಚಿಂತೆಯು ಕಾಡಬಹುದು. ಹೊಸ ಕೆಲಸಕ್ಕೆ‌ ನಿಮಗೆ ಧೈರ್ಯವು ಸಾಕಾಗದು. ಇರುವುದರಲ್ಲಿ ನೆಮ್ಮದಿಯನ್ನು ಕಾಣಲು ಹೆಚ್ಚು ಇಷ್ಟಪಡುವಿರಿ. ನೀವು ಇಂದು ಸುಮ್ಮನೇ ಕುಳಿತಾಗ ಕೇವಲ ಸೋಲುಗಳೇ ನಿಮ್ಮ ಕಣ್ಣೆದುರು ಕಾಣಿಸುವುದು. ಕೆಲವು ವಿಚಾರದಲ್ಲಿ ನಿಮ್ಮ‌ ಮಾನಸಿಕ ಸ್ಥಿತಿಯು ಬದಲಾಗಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ನಿಶ್ಚಿತ ಲಾಭವು ಪ್ರಾಪ್ತವಾಗಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ಕೂಗಾಡಿ ಯಾವುದನ್ನೂ ಮಾಡಿಸಿಕೊಳ್ಳಲಾಗದು.

ಮೀನ ರಾಶಿ: ನಿಮ್ಮ ಇಂದಿನ ಶ್ರಮವು ಎಷ್ಟೇ ಇದ್ದರು ಒಂದು ಮಾತು ಎಲ್ಲದಕ್ಕೂ ತಣ್ಣೀರು ಹಾಕುವುದು. ನೀವು ಸುತ್ತಾಟಕ್ಕೆಂದು ಮಕ್ಕಳ ಜೊತೆ ಹೋಗುವಿರಿ. ಎಷ್ಟೇ ಕಷ್ಟಪಟ್ಟರೂ ಬಯಸಿದ್ದನ್ನು ಪಡೆಯಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನೀವು ವ್ಯಾಪಾರದಲ್ಲಿ ಆರ್ಥಿಕ ಲಾಭಕ್ಕಿಂತ ಗ್ರಾಹಕರ ವಿಶ್ವಾಸ ಗಳಿಸುವುದು ಇಂದು ನಿಮಗೆ ಮುಖ್ಯವೆನಿಸುವುದು. ಆರ್ಥಿಕವಾಗಿ ಸಬಲರಾಗಲು ಅನೇಕ ಆರ್ಥಿಕ ಮೂಲವನ್ನು ಹುಡುಕುವಿರಿ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಮಕ್ಕಳ‌ ವಿವಾಹ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಶತ್ರುಗಳ ಉಪಟಳ ಕಡಿಮೆ ಆಗಿದ್ದು ನೀವು ನಿಶ್ಚಿಂತೆಯಿಂದ ಇರುವಿರಿ. ಶುಭ ಕಾರ್ಯದಲ್ಲಿ ನೀವು ತೊಡಗುವಿರಿ. ಮಾತನ್ನು ಕಡಿಮೆ ಮಾಡುವಿರಿ. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ನೀವು ಪ್ರೀತಿಪಾತ್ರರ ಜೊತೆ ಹೆಚ್ಚು ಒಡನಾಡುವಿರಿ.

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ