Horoscope: ಯಾರದೋ ತಪ್ಪಿಗೆ ಈ ರಾಶಿಯವರು ಬಲಿಯಾಗಬೇಕಾಗುವುದು
ಸೆಪ್ಟೆಂಬರ್ 26, 2024ರ ನಿಮ್ಮ ರಾಶಿಭವಿಷ್ಯ: ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು. ಹಿರಿಯರ ಹಿತವಚನವನ್ನು ಕೇಳುವ ವ್ಯವಧಾನ ಇರದು.ಹಾಗಾದರೆ ಸೆಪ್ಟೆಂಬರ್ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:54 ರಿಂದ ಸಂಜೆ 03:24, ಯಮಘಂಡ ಕಾಲ ಬೆಳಿಗ್ಗೆ 06:23ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:23 ರಿಂದ 10:54 ರ ವರೆಗೆ.
ಮೇಷ ರಾಶಿ: ನಿಮ್ಮ ನಿಜವಾದ ಪ್ರಯತ್ನಕ್ಕೆ ದೈವವೂ ಸಹಾಯ ಮಾಡುವುದು. ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಇಂದು ಪ್ರೇಮದ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಿದ್ದು ಪ್ರೇಮಿಯನ್ನು ನೋಡಲು ಹಂಬಲಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಸೂಕ್ತಸ್ಥಾನವು ಸಿಗಲಿದೆ. ಎಲ್ಲಿಯೋ ಹೂಡಿಕೆ ಮಾಡಿ ನಷ್ಟಮಾಡಿಕೊಳ್ಳುವಿರಿ. ಯಾರ ಮೇಲೂ ದೂರನ್ನು ಹಾಕುವುದು ಬೇಡ. ಮನೆಯಿಂದ ದೂರವಿರುವ ಉದ್ಯೋಗವು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳಿಂದ ತಾಯಿಗೆ ಬೇಸರವಾಗಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸುವಿರಿ. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಭೂವಿಚಾರದ ಕಾನೂನು ಸಮರದಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯಿಂದ ಕಿರಿಕಿರಿ ಆಗಬಹುದು. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಹುಡುಕುವಿರಿ. ಬೋಧಕ ವರ್ಗಕ್ಕೆ ಸಂತಸದ ಸುದ್ದಿ ಸಿಗಬಹುದು.
ವೃಷಭ ರಾಶಿ: ಆನಾರೋಗ್ಯಕ್ಕೆ ಉತ್ತಮ ಚಿಕಿತ್ಸೆಗಿಂತ ಮಾನಸಿಕ ನೆಮ್ಮದಿ ಧೈರ್ಯಗಳು ಉಪಯೋಗಕ್ಕೆ ಬರುವುದು. ಬೇರೆಯವರು ಖುಷಿಪಡುವಂತೆ ಮಾತನಾಡುವಿರಿ. ಆರ್ಥಿಕ ಸಹಾಯವು ಸಿಗದೇ ಕಷ್ಟಪಡಬೇಕಾದೀತು. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದೇ ಇದ್ದೀತು. ಚರ ಆಸ್ತಿಯನ್ನು ಕಳೆದುಕೊಳ್ಳಬಹುದು. ಯಾರಾದರೂ ನಿಮಗೆ ಸ್ಫೂರ್ತಿಯಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಇರದು. ಸ್ಥಾನವನ್ನು ಉಳಿಸಿಕೊಳ್ಳಲು ಜವಾಬ್ದಾರಿಯ ಕೆಲಸವನ್ನು ನಿರ್ವಹಿಸಬೇಕಾಗುವುದು. ಭೀತಿಯಿಂದ ಮನೆಯನ್ನು ಬಿಟ್ಟು ಹೋಗಲಾರಿರಿ. ಶುಭಾವಾರ್ತೆಯು ನಿಮಗೆ ನೆಮ್ಮದಿಯನ್ನು ತಂದೀತು. ಪ್ರಯಾಣದ ವಿಚಾರದಲ್ಲಿ ನಿಮಗೆ ನಿರಾಸಕ್ತಿ ಇರಲಿದೆ. ಬಂಧುಗಳ ಭೇಟಿಯು ಸುಖವನ್ನು ಕೊಡುವುದು. ಒಂದೇ ವಿಚಾರವನ್ನು ಮನನ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ನಿಮಗಾದ ನೋವಿನಿಂದ ಇತರರಿಗೂ ನೋವಾಗುವುದು.
ಮಿಥುನ ರಾಶಿ; ಉದ್ಯಮದಿಂದ ಆದ ಲಾಭಕ್ಕೆ ನಿಮಗೆ ಆದಾಯ ಸಿಗುವುದು. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸಾಗುವುದು. ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಯಾರದೋ ತಪ್ಪಿಗೆ ನೀವು ಬಲಿಯಾಗಬೇಕಾಗುವುದು. ಭೋಗವಸ್ತುಗಳನ್ನು ಖರೀದಿಸಿದರೂ ನಿಮಗೆ ಸಂತೃಪ್ತಿ ಸಿಗದು. ಜೀವನಕ್ಕೆ ಬೇಕಾದುದನ್ನು ಸ್ನೇಹಿರಿಂದ ಪಡೆಯುವಿರಿ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯ ಆಗುವುದು. ಮನೋರಂಜನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ಯಂತ್ರದ ಮಾರಾಟದಿಂದ ಲಾಭವಿರಲಿದೆ. ಸಣ್ಣ ವ್ಯಾಪಾರದಲ್ಲಿ ಅಲ್ಪ ಲಾಭವಾಗಲಿದೆ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಇನ್ನೊಬ್ಬರನ್ನು ಗೌರವಿಸಿದರೆ ನೀವೂ ದೊಡ್ಡವರಾಗುವಿರಿ.
ಕರ್ಕಾಟಕ ರಾಶಿ: ನಿಮಗೆ ಗೊತ್ತಿರುವುದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ನಿಮಗೆ ಇಷ್ಟವಿಲ್ಲದವರನ್ನು ಮನಸ್ಸಿನಿಂದ ಹೊರಹಾಕಿ. ಆತುರದಲ್ಲಿ ಗೃಹನಿರ್ಮಾಣವನ್ನು ಮಾಡಬೇಕಾಗುವುದು. ವಾಹನವನ್ನು ಚಾಲಾಯಿಸುವಾಗ ಅನೇಕ ನಕಾರಾತ್ಮಕ ಯೋಚನೆಗಳು ಬರಲಿದೆ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ರೀತಿಯ ಪರೀಕ್ಷೆಗಳು ಬರಬಹುದು. ಸ್ವತಂತ್ರವಾದ ಆಲೋಚನೆಯನ್ನು ಬೆಳೆಸಿಕೊಳ್ಳಿ. ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು. ಹಿರಿಯರ ಹಿತವಚನವನ್ನು ಕೇಳುವ ವ್ಯವಧಾನ ಇರದು.