Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 20ರ ದಿನಭವಿಷ್ಯ

Daily Horoscope Mach 20: ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 20ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಉದ್ಯೋಗ, ಹಣಕಾಸು, ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಿಗೆ ಮಾರ್ಗದರ್ಶನ ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 20ರ ದಿನಭವಿಷ್ಯ
Numerology
Image Credit source: anantvastu
Edited By:

Updated on: Mar 20, 2026 | 1:10 AM

ಮನೆಯ ಅಂಗಳದಲ್ಲಿರುವ ತುಳಸಿ ಗಿಡಕ್ಕೆ ಪ್ರತಿದಿನ ಸಂಜೆ ತುಪ್ಪದ ದೀಪ ಹಚ್ಚಿ ಪ್ರದಕ್ಷಿಣೆ ಹಾಕಿ. ಹೀಗೆ ಮಾಡುವುದರಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರ ಆಗಲಿವೆ. ಉದ್ಯೋಗ ಸ್ಥಳದಲ್ಲಿ ಇರುವ ಗೊಂದಲ ಬಗೆಹರಿಯುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮಲ್ಲಿ ಕೆಲವರು ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬಹುದು ಅಥವಾ ಹೊರಟು ಬಿಡಬಹುದು. ಇದರಿಂದ ದೀರ್ಘಾವಧಿಯಲ್ಲಿ ಬಹಳ ದೊಡ್ಡ ಮಟ್ಟದ ಅನುಕೂಲ ಇದೆ. ಆದರೆ ಹೊರಡುವ ಮುನ್ನ ಕುಟುಂಬದ ಕಡೆಯಿಂದ ಒತ್ತಡವಂತೂ ಇರುತ್ತದೆ. ಆದರೆ ಅದು ನಿಮ್ಮ ಕೆಲಸ ಯಶಸ್ವಿಯಾದ ಮೇಲೆ ಕರಗಿ ಹೋಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮಗೆ ಚೆನ್ನಾಗಿ ಗೊತ್ತಿರುವಂಥ ವಿಷಯದಲ್ಲೇ ನಿಮ್ಮಿಂದ ಕೆಲವು ತಪ್ಪುಗಳು ಆಗಬಹುದು. ಮುಖ್ಯವಾಗಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಪ್ರಶ್ನೆ ಕೇಳಿದಲ್ಲಿ ಒಂದು ಸಲ ಪರಿಶೀಲನೆ ಮಾಡಿ, ಆ ನಂತರವೇ ಉತ್ತರವನ್ನು ಹೇಳಿ. ಕೆಲವು ಜವಾಬ್ದಾರಿಗಳನ್ನು ನಿಮಗೆ ವಹಿಸುವುದಕ್ಕೆ ಕುಟುಂಬದಲ್ಲಿ ಹಾಗೂ ಉದ್ಯೋಗ ಸ್ಥಳದಲ್ಲಿ ಕೇಳಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಉತ್ತಮವಾದ ಸಂಬಳ ಹಾಗೂ ಹುದ್ದೆಯ ಜತೆಗೆ ಆಫರ್ ಬರಲಿದೆ. ಆದ್ದರಿಂದ ಈ ಅವಕಾಶವನ್ನು ಬೇಡ ಅನ್ನುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಆಲೋಚನೆಯನ್ನು ಮಾಡುವುದು ಒಳ್ಳೆಯದು. ಸಾಕು ಪ್ರಾಣಿಗಳನ್ನು ಮನೆಗೆ ತರುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ದಿನದ ಕೊನೆ ಹೊತ್ತಿಗೆ ಮನಸ್ಸಿಗೆ ಹೆಚ್ಚು ಸಂತೋಷ ಎನಿಸುವಂಥ ವ್ಯಕ್ತಿ ಜತೆಗೆ ಮಾತುಕತೆ ಆಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Follow Us